ಒಂದು ನಿಮಿಷದ ಓದು | ದೇವೇಂದ್ರ ಫಡ್ನಾವಿಸ್‌ಗೆ ಗೃಹ ಖಾತೆ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌ ಅವರಿಗೆ ಭಾನುವಾರ (ಆಗಸ್ಟ್‌ 14) ಗೃಹ ಖಾತೆ ನೀಡಿದ್ದಾರೆ.

ಏಕನಾಥ ಶಿಂಧೆ ಅವರು ಆಗಸ್ಟ್ 9 ರಂದು 18 ಸಚಿವರನ್ನು ಸೇರ್ಪಡೆಗೊಳಿಸುವ ಮೂಲಕ ತಮ್ಮ ದ್ವಿಸದಸ್ಯ ಸಂಪುಟ ವಿಸ್ತರಿಸಿದ್ದರು. ಈಗ ಫಡ್ನಾವಿಸ್‌ ಅವರಿಗೆ ಗೃಹ ಖಾತೆ ನೀಡಿ ನಗರಾಭಿವೃದ್ಧಿ ಖಾತೆ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

ದೇವೆಂದ್ರ ಫಡ್ನಾವಿಸ್‌ ಅವರು ಹಣಕಾಸು ಮತ್ತು ಯೋಜನಾ ಎರಡೂ ಖಾತೆಗಳನ್ನು ನಿಭಾಯಿಸಲಿದ್ದಾರೆ. ಬಿಜೆಪಿ ಶಾಸಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ನೂತನ ಕಂದಾಯ ಸಚಿವರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಬಿಜೆಪಿ ಸಚಿವ ಸುಧೀರ್ ಮುಂಗಂಟಿವಾರ್ ಅವರಿಗೆ ಈ ಹಿಂದೆ ನಿಭಾಯಿಸಿದ  ಅರಣ್ಯ ಖಾತೆಯನ್ನು ನೀಡಲಾಗಿದೆ. ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ನೂತನ ಸಚಿವರಾಗಿದ್ದಾರೆ. ಜತೆಗೆ ಸಂಸದೀಯ ವ್ಯವಹಾರಗಳನ್ನೂ ಅವರು ನೋಡಿಕೊಳ್ಳಲಿದ್ದಾರೆ.

ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಬಂಡಾಯ ಶಾಸಕರಾದ ದೀಪಕ್ ಕೇಸರ್ಕರ್ ಅವರು ಶಾಲಾ ಶಿಕ್ಷಣ ಸಚಿವರಾಗಿದ್ದರೆ, ಅಬ್ದುಲ್ ಸತ್ತಾರ್ ಅವರಿಗೆ ಕೃಷಿ ಖಾತೆ ನೀಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್