ಒಂದು ನಿಮಿಷದ ಓದು | ಹಲೊ ಬದಲಿಗೆ ವಂದೇ ಮಾತರಂ ಹೇಳಿ; ಮಹಾರಾಷ್ಟ್ರ ಸಚಿವ ಆದೇಶ

ಮಹಾರಾಷ್ಟ್ರದ ಸರ್ಕಾರಿ ನೌಕರರು ಇನ್ನು ಮುಂದೆ ಫೋನ್‌ ಸ್ವೀಕರಿಸಿದಾಗ ಹಲೊ ಬದಲಿಗೆ ವಂದೇ ಮಾತರಂ ಹೇಳಬೇಕು ಎಂದು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುದೀರ್ ಮುಂಗಂಟಿವಾರ್ ಭಾನುವಾರ (ಆಗಸ್ಟ್‌ 15) ಆದೇಶಿಸಿದ್ದಾರೆ.

“ನಾವು ಸ್ವಾತಂತ್ರ್ಯದ 76ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಆದ್ದರಿಂದ, ಅಧಿಕಾರಿಗಳು ಹಲೊ ಬದಲು ವಂದೇ ಮಾತರಂ ಹೇಳಬೇಕೆಂದು ನಾನು ಬಯಸುತ್ತೇನೆ" ಎಂದು ಮುಂಗಂಟಿವಾರ್ ಹೇಳಿದ್ದಾರೆ. 

ಆಗಸ್ಟ್ 18ರೊಳಗೆ ಅಧಿಕೃತ ಆದೇಶ ಹೊರಡಿಸುವುದಾಗಿ ಸುದೀರ್ ಮುಂಗಂಟಿವಾರ್‍‌ ಹೇಳಿದ್ದು, "2023ರ ಜನವರಿ 26ರವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಫೋನ್ ಸ್ವೀಕರಿಸುವಾಗ ವಂದೇ ಮಾತರಂ ಹೇಳಬೇಕು ಎಂದು ಆಶಿಸುತ್ತೇನೆ" ಎಂದರು.

ಏಕನಾಥ ಶಿಂಧೆ ಅವರ ಸಚಿವ ಸಂಪುಟದಲ್ಲಿ ಸುದೀರ್ ಮುಂಗಂಟಿವಾರ್ ಅವರಿಗೆ ಸಾಂಸ್ಕೃತಿಕ ವ್ಯವಹಾರ ಖಾತೆ ದೊರೆತ ಬಳಿಕ ಮಾಡಿದ ಮೊದಲ ಘೋ‍ಷಣೆ ಇದಾಗಿದೆ.

"ಹಲೊ ಎಂಬುದು ಇಂಗ್ಲಿಷ್ ಪದ ಆದ್ದರಿಂದ ಆ ಪದವನ್ನು  ತ್ಯಜಿಸುವುದು ಮುಖ್ಯ. ವಂದೇ ಮಾತರಂ ಕೇವಲ ಒಂದು ಪದವಲ್ಲ, ಪ್ರತಿಯೊಬ್ಬ ಭಾರತೀಯನ ಅನುಭವವಾಗಿದೆ" ಎಂದು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್