ಶಿಂಧೆ ಶಾಸಕಾಂಗ ಪಕ್ಷದ ನಾಯಕನಾಗಿ ಮರುನೇಮಕ; ಸಂವಿಧಾನಬಾಹಿರ ಬೆಳವಣಿಗೆ ಎಂದ ಮೂಲ ಶಿವಸೇನೆ

  • ಉದ್ಧವ್‌ ಠಾಕ್ರೆ ಬಣದ ಶಿವಸೇನೆಗೆ ಭಾರಿ ಹಿನ್ನೆಡೆ
  • ಸಂವಿಧಾನಬಾಹಿರ ನಿರ್ಧಾರ ಎನ್ನುವ ಖಂಡನೆ

ಏಕನಾಥ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಮರುನೇಮಿಸಲಾಗಿದೆ ಎಂದು ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. ಉದ್ದವ್ ಠಾಕ್ರೆ ಬಣದ ಶಿವಸೇನೆ ಶಾಸಕ ಅಜಯ್‌ ಚೌಧರಿ ಅವರನ್ನು ವಜಾಗೊಳಿಸಲಾಗಿದೆ.

ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ಸ್ಥಾನದಿಂದ ಕಿತ್ತುಹಾಕಿರುವುದಾಗಿ ಉದ್ದವ್ ಠಾಕ್ರೆ ಆದೇಶ ಹೊರಡಿಸಿದ್ದರು. ನಂತರ ಬಂಡಾಯ ಶಾಸಕರು ಸಭೆ ಮಾಡಿ, "ಇದೇ ನಿಜವಾದ ಶಿವಸೇನೆ, ಈ ಸಭೆ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದೆ" ಎಂದು ಮಹಾರಾಷ್ಟ್ರ ವಿಧಾನಸಭೆಗೆ ಪತ್ರ ಬರೆದಿದ್ದರು. ಇದೀಗ ವಿಧಾನಸಭೆಯ ಸಚಿವಾಲಯ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಎಂದು ಅಧಿಕೃತವಾಗಿ ಘೋಷಿಸಿದೆ.

Eedina App

ಭಾನುವಾರ ರಾತ್ರಿ ಸಭಾಪತಿ ರಾಹುಲ್ ನಾರ್ವೇಕರ್ ಅವರ ಕಚೇರಿ ಅಧಿಕೃತ ಪತ್ರ ಹೊರಡಿಸಿದೆ. ಕಾನೂನುಬದ್ಧತೆಗಳನ್ನು ಚರ್ಚಿಸಿದ ನಂತರ ಶಿವಸೇನೆಯ ಅಜಯ್ ಚೌಧರಿ ಅವರನ್ನು ಪಕ್ಷದ ಶಾಸಕಾಂಗ ಘಟಕದ ನಾಯಕನ್ನಾಗಿ ನೇಮಿಸುವುದನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದೆ.

ಉದ್ದವ್ ಠಾಕ್ರೆ ಬಣಕ್ಕೆ ಸೇರಿದ ಸುನಿಲ್ ಪ್ರಭು ಅವರನ್ನು ತೆಗೆದುಹಾಕಿ ಶಿಂಧೆ ಪಾಳಯದ ಭರತ್ ಗೊಗವಾಲೆ ಅವರನ್ನು ಶಿವಸೇನೆಯ ಮುಖ್ಯ ಸಚೇತಕರನ್ನಾಗಿ (whip)  ನೇಮಿಸಲಾಗಿದೆ.

AV Eye Hospital ad

ಈ ಬೆಳವಣಿಗೆಯು 16 ಶಾಸಕರನ್ನು ಒಳಗೊಂಡಿರುವ ಠಾಕ್ರೆ ಬಣಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿದೆ. ಅವರು ಸೋಮವಾರದ ವಿಶ್ವಾಸಮತಕ್ಕಾಗಿ ಗೊಗಾವಾಲೆ ಅವರು ಹೊರಡಿಸುವ ವಿಪ್‌ಗೆ ಬದ್ಧರಾಗುತ್ತಾರೆ. ವಿಪ್ ಉಲ್ಲಂಘಿಸಿದರೆ ಅವರನ್ನು ಅನರ್ಹಗೊಳಿಸಿಬಹುದು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಶಿವಸೇನೆ ಮುಖ್ಯ ವಕ್ತಾರ ಅರವಿಂದ್ ಸಾವಂತ್, “ಸಂವಿಧಾನಬಾಹಿರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ” ಎಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ ? ಶಿಂಧೆಗೆ ಮಣೆ, ಫಡ್ನವೀಸ್‌ಗೆ ಸಾಣೆ| ಅಧಿಕಾರಕ್ಕಾಗಿ ಮರಾಠರ ಓಲೈಕೆಗೆ ಮುಂದಾದ ಬಿಜೆಪಿ

ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ಅವರು, ಆ ಪಕ್ಷದ ಶಾಸಕಾಂಗ ಘಟಕದ ನಾಯಕರನ್ನು ನೇಮಿಸುವ ಹಕ್ಕು ಪಕ್ಷದ ಮುಖ್ಯಸ್ಥರಿಗೆ ಇದೆ ಎಂದು ನಿರ್ದೇಶನ ನೀಡಿದ್ದಾರೆ. ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ನಾಯಕ ಎಂದು ನೀವು ಹೇಗೆ ಹೇಳುತ್ತೀರಿ?" ಎಂದು ಪ್ರಶ್ನಿಸಿದ್ದಾರೆ.

“ಸಚಿವಾಲಯದ ನಿರ್ಧಾರವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನಿಯಮಗಳನ್ನು ತುಳಿಯುವಂತಿದೆ. ಬಿಜೆಪಿ ನಿರಂಕುಶಾಧಿಕಾರದತ್ತ ಸಾಗುತ್ತಿದೆ” ಎಂದು ಸಾವಂತ್ ಆರೋಪಿಸಿದರು.

ಹೊಸ ಸಭಾಪತಿ ರಾಹುಲ್ ನಾರ್ವೇಕರ್ ಅವರು ಮುಖ್ಯ ಸಚೇತಕರನ್ನು ಬದಲಾಯಿಸುವಾಗ, ಎರಡೂ ಕಡೆಯ ಆಕ್ಷೇಪಗಳ ಬಗ್ಗೆ ಯಾವುದೇ ವಿಚಾರಣೆ ನಡೆಸಿಲ್ಲ. "ಶಿವಸೇನೆ ಗುಂಪಿನ ನಾಯಕನ ಸ್ಥಾನಕ್ಕೆ ನನ್ನ ಹೆಸರನ್ನು ಪ್ರಸ್ತಾಪಿಸಿದಾಗ, ಅದಕ್ಕೆ ಶಿವಸೇನೆ ಶಾಸಕರಾದ ದಾದಾ ಭೂಸೆ ಮತ್ತು ಸಂಜಯ್ ರಾಥೋಡ್ ಅವರು ಸಹಿ ಹಾಕಿದರು. ನಂತರ ಅವರಿಬ್ಬರೂ ಶಿಂಧೆ ಪಾಳಯಕ್ಕೆ ಸೇರಿದರು. ಸಭಾಪತಿ ಈ ಸಂಗತಿಗಳನ್ನು ಹೇಗೆ ನಿರ್ಲಕ್ಷಿಸುತ್ತಾರೆ? ಸಭಾಪತಿ ಸ್ಥಾನ ನಿರ್ವಹಿಸಿದ್ದ ನರಹರಿ ಜಿರ್ವಾಲ್ ಅವರು ನನ್ನ ನೇಮಕಾತಿ ಮಾಡಿದ್ದಾರೆ. ಹೀಗಿದ್ದಾಗ ಹೊಸದಾಗಿ ನೇಮಕಗೊಂಡ ರಾಹುಲ್ ನಾರ್ವೇಕರ್ ಹೇಗೆ ಮಧ್ಯಪ್ರವೇಶಿಸಬಹುದು?" ಅಜಯ್‌ ಚೌಧರಿ ಪ್ರಶ್ನಿಸಿದ್ದಾರೆ.

ಸುಪ್ರೀಂಕೋರ್ಟ್ ಮೊರೆ ಹೋದ ಠಾಕ್ರೆ ಬಣ

ಮುಖ್ಯ ಸಚೇತಕರ ಆಯ್ಕೆ ಕುರಿತಾಗಿ, ಮಹಾರಾಷ್ಟ್ರ ವಿಧಾನಸಭಾ ಸಭಾಪತಿ ಅವರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ ನಾಯಕರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.

ಸಭಾಪತಿ ಕ್ರಮವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ನೇತೃತ್ವದ ಗುಂಪು ನೇಮಿಸಿದ ಮುಖ್ಯ ಸಚೇತಕ ಸುನಿಲ್ ಪ್ರಭು ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರು ತುರ್ತುಪಟ್ಟಿಗಾಗಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರನ್ನೊಳಗೊಂಡ ರಜಾಕಾಲದ ಪೀಠದ ಮುಂದೆ ಮನವಿ ಸಲ್ಲಿಸಿದ್ದಾರೆ.

ಉದ್ದವ್ ಠಾಕ್ರೆ ಶಿವಸೇನೆ ಮುಖ್ಯಸ್ಥರಾಗಿರುವುದರಿಂದ ಏಕನಾಥ ಶಿಂಧೆ ಸೂಚಿಸಿದ ಮುಖ್ಯ ಸಚೇತಕರನ್ನು ಸಭಾಪತಿಗಳು ನೇಮಿಸುವ ಅಧಿಕಾರವಿಲ್ಲ ಎಂದು ಸಿಂಘ್ವಿ ಅರ್ಜಿ ಸಲ್ಲಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app