ರೇವ್ಡಿ ಸಂಸ್ಕೃತಿಯ ಲೇವಡಿ ಮಾಡಿದ ಪ್ರಧಾನಿ ಮೋದಿ: ಸ್ವಪಕ್ಷದ ಸಂಸದ ವರುಣ್ ಗಾಂಧಿ ತಿರುಗೇಟು

  • ಹಣಕಾಸು ಖಾತೆ ರಾಜ್ಯ ಸಚಿವರ ಡಾಟಾ ಹಂಚಿಕೊಂಡಿರುವ ವರುಣ್ ಗಾಂಧಿ
  • ಟ್ವೀಟ್‌ ಮೂಲಕ ಉದ್ಯಮಿಗಳ ಸಾಲ ಮನ್ನಾ ಟೀಕಿಸಿದ ಸ್ವಪಕ್ಷ ಸಂಸದ

ಕಳೆದ ಐದು ವರ್ಷಗಳಲ್ಲಿ ಭ್ರಷ್ಟ ಉದ್ಯಮಿಗಳ ಸುಮಾರು ₹10 ಲಕ್ಷ ಕೋಟಿ ಸಾಲ ಮನ್ನ ಮಾಡಲಾಗಿದೆ ಎಂದು ಉಲ್ಲೇಖಿಸಿ, ಬಿಜೆಪಿ ಸಂಸದ ವರುಣ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ರೇವ್ಡಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಎಕ್ಸ್‌ಪ್ರೆಸ್‌ವೇ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಾಜಕೀಯ ಪಕ್ಷಗಳು ಉಚಿತ ಭರವಸೆಗಳ ಮೇಲೆ ಮತ ಕೇಳುವ ಪ್ರವೃತ್ತಿ ದೇಶಕ್ಕೆ ಅಪಾಯಕಾರಿ ಎಂದು ಹೇಳಿದ್ದರು. ಈ ಹೇಳಿಕೆ ದೇಶದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಇದೀಗ ತಮ್ಮದೇ ಪಕ್ಷದ ಸಂಸದ ವರುಣ್ ಗಾಂಧಿ, ಪ್ರಧಾನಿಯನ್ನು ಟೀಕಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರೇವ್ಡಿ ಸಂಸ್ಕೃತಿ ಲೇವಡಿ ಮಾಡಿದ ಮೋದಿ; ಪಂಚರಾಜ್ಯಗಳ ಚುನಾವಣೆ ಪ್ರಣಾಳಿಕೆ ನೆನಪಿಸಿದ ನೆಟ್ಟಿಗರು

ಜನರಿಗೆ ಉಚಿತ ಪಡಿತರ ನೀಡುತ್ತಿರುವ ಕಾರಣಕ್ಕಾಗಿ ಸರ್ಕಾರವನ್ನು ಅಭಿನಂದಿಸಬೇಕು ಎಂದು ಬಿಜೆಪಿ ಸಂಸದರೊಬ್ಬರು ಸಂಸತ್‌ನಲ್ಲಿ ಹೇಳಿದ ನಂತರ ಪಿಲಿಭಿಟ್ ಕ್ಷೇತ್ರದ ಸಂಸದ ವರುಣ್ ಗಾಂಧಿ, ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಉಚಿತ ಪಡಿತರವನ್ನು ಉದ್ಯಮಿಗಳ ಸಾಲ ಮನ್ನಾದೊಂದಿದೆ ಹೋಲಿಕೆ ಮಾಡಿರುವ ವರುಣ್ ಗಾಂಧಿ, “ ಬಡವರಿಗೆ ಐದು ಕೆಜಿ ಪಡಿತರ ನೀಡಿ ಧನ್ಯವಾದಕ್ಕೆ ನಿರೀಕ್ಷಿಸುತ್ತಿರುವ ಸದನವು ಕಳೆದ ಐದು ವರ್ಷಗಳಲ್ಲಿ ವಸೂಲಿಯಾಗದೆ ಉಳಿದಿರುವ ಸಾಲವನ್ನು ಮನ್ನಾ ಮಾಡಲಾದ ಬಗ್ಗೆಯೂ ಹೇಳಬೇಕು” ಎಂದು ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ, ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರಾಡ್ ಅವರು ಸಂಸತ್‌ಗೆ ನೀಡಿದ ಡೇಟಾವನ್ನು ಹಂಚಿಕೊಂಡಿರುವ ವರುಣ್ ಗಾಂಧಿ, "ಮೆಹುಲ್ ಚೋಕ್ಸಿ ಮತ್ತು ರಿಷಿ ಅಗರ್ವಾಲ್ ಅವರ ಹೆಸರುಗಳು ‘ರೇವಡಿ' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಸರ್ಕಾರದ ಅನುದಾನಗಳ ಮೊದಲ ಹಕ್ಕು ಹೊಂದಿರುವವರು ಯಾರು?" ಎಂದು ಪ್ರಶ್ನಿಸಿದ್ದಾರೆ.

80 ಕೋಟಿ ಜನರಿಗೆ ಉಚಿತ ರೇಷನ್ ನೀಡುತ್ತಿರುವುದಕ್ಕೆ ನರೇಂದ್ರ ಮೋದಿ ಅವರ ಸರ್ಕಾರವನ್ನು ಅಭಿನಂದಿಸಬೇಕು ಎಂದು ಲೋಕಸಭೆಯಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್