ದೇಶದ ಸ್ವಾತಂತ್ರ್ಯದಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ನ ಪಾತ್ರವೇನು: ಭೂಪೇಶ್ ಬಘೇಲ್

  • 'ದ್ವಿ-ರಾಷ್ಟ್ರ ಸಿದ್ದಾಂತಕ್ಕೆ ತಳಹದಿ ಹಾಕಿದ್ದು ಸಾವರ್ಕರ್'
  • ಆರ್‌ಎಸ್‌ಎಸ್‌ ಇವತ್ತಿಗೂ ಬ್ರಿಟೀಷರನ್ನು ಟೀಕಿಸುವುದಿಲ್ಲ

ಭಾರತೀಯ ಜನತಾ ಪಕ್ಷ (ಬಿಜೆಪಿ) ಹರಿಬಿಟ್ಟ ದೇಶ ವಿಭಜನೆಯ ವಿಡಿಯೋಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರತಿಕ್ರಿಯಿಸಿದ್ದು, ದೇಶದ ಸ್ವಾತಂತ್ರ್ಯದಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ನ ಪಾತ್ರವೇನು ಎಂದು ಪ್ರಶ್ನಿಸಿದ್ದಾರೆ.

ದೇಶ ವಿಭಜನೆಗೆ ಜವಾಹರ್ ಲಾಲ್ ನೆಹರೂ ಕಾರಣ ಎಂದು ಆರೋಪಿಸಲಾದ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಬಿಜೆಪಿಯ ಈ ನಡೆಯನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾತ್ರವೇನು ಎಂದು ಬಘೇಲ್ ಪ್ರಶ್ನಿಸಿದ್ದಾರೆ.

ಸಾರ್ವಕರ್ ಅವರ ದ್ವಿ-ರಾಷ್ಟ್ರ ಸಿದ್ದಾಂತವನ್ನು ಪ್ರಸ್ತಾಪಿಸಿದ ಬಘೇಲ್, “ಎರಡು ರಾಷ್ಟ್ರಗಳ ಸಿದ್ಧಾಂತಕ್ಕೆ ಸಾವರ್ಕರ್ ತಳಹದಿ ಹಾಕಿದರು. ಮೊಹಮ್ಮದ್ ಅಲಿ ಜಿನ್ನಾ ಅದನ್ನು ಬೆಂಬಲಿಸಿದರು” ಎಂದು ಹೇಳಿದ್ದಾರೆ.

"ಇವರು (ಬಿಜೆಪಿ) ದೇಶ ವಿಭಜಕರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಪಾತ್ರವೇನು?. 1925ರಲ್ಲಿ ಆರ್‌ಎಸ್‌ಎಸ್‌ ಅನ್ನು ಸ್ಥಾಪಿಸಲಾಯಿತು. ಅವರು ಇವತ್ತಿಗೂ ಬ್ರಿಟಿಷರನ್ನು ಟೀಕಿಸುವುದಿಲ್ಲ, ಬದಲಿಗೆ ಗಾಂಧಿಯನ್ನು ಟೀಕಿಸುತ್ತಾರೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾವರ್ಕರ್ ದ್ವಿರಾಷ್ಟ್ರದ ಸಿದ್ಧಾಂತ ಹುಟ್ಟುಹಾಕಿದರು, ಜಿನ್ನಾ ಪರಿಪೂರ್ಣಗೊಳಿಸಿದರು| ಬಿಜೆಪಿ ವಿಡಿಯೊಗೆ ಜೈರಾಮ್ ತಿರುಗೇಟು

'ವಿಭಜನೆಯ ಭೀಕರ ಸ್ಮರಣೆಯ ದಿನ'ದಂದು, ಭಾರತ ಮತ್ತು ಪಾಕಿಸ್ತಾನ ದೇಶಗಳ ವಿಭಜನೆಯಾಗಿದ್ದಕ್ಕಾಗಿ ಬಿಜೆಪಿಯು ಅಂದಿನ ಕಾಂಗ್ರೆಸ್‌ ಮತ್ತು ನೆಹರೂ ಅವರನ್ನು ಆರೋಪಿಸಿದೆ.

ಭಾರತದ ವಿಭಜನೆಯ ದಿನವಾದ ಭಾನುವಾರ (ಆಗಸ್ಟ್‌ 14) ಬಿಜೆಪಿಯು ಕಾಂಗ್ರೆಸ್‌ ಪಕ್ಷವನ್ನು ಗುರಿಯಾಗಿಸಿಕೊಂಡು ಘಟನೆಯ ಆವೃತ್ತಿ ಬಿಡುಗಡೆ ಮಾಡಿದೆ. ದಾಖಲೆಯಲ್ಲಿನ ದೃಶ್ಯಾವಳಿಗಳನ್ನು ಬಳಸಿ ಮತ್ತು ವಿಭಜನೆಯ ಕೆಲವು ನಾಟಕೀಯ ದೃಶ್ಯಗಳನ್ನು ಉಪಯೋಗಿಸಿಕೊಂಡು ಪ್ರಚೋದನಕಾರಿ ಸಂಗೀತದ ಜೊತೆಗೆ ದನಿಯನ್ನು ವಿಡಿಯೋದಲ್ಲಿ ಸೇರಿಸಲಾಗಿದೆ. ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಮ್‌ ಲೀಗ್‌ನ ಪಾಕಿಸ್ತಾನ ವಿಭಜನೆಗೆ ನೆಹರೂ ತಲೆಬಾಗಿದರು ಎಂದು ದೂಷಿಸಿರುವುದು ಏಳು ನಿಮಿಷಗಳ ವಿಡಿಯೋದಲ್ಲಿದೆ.

ವಿಡಿಯೋದಲ್ಲಿ ವಿಭಜನೆಗೆ ಭಾರತೀಯ ಕಮ್ಯುನಿಸ್ಟರು ಕಾರಣ ಎಂದು ದೂಷಿಸಲಾಗಿದೆ. ಕಮ್ಯುನಿಸ್ಟ್‌ ನಾಯಕರು ಮುಸ್ಲಿಮ್ ಲೀಗ್ ಅನ್ನು ಬೆಂಬಲಿಸಿದರು. ಪ್ರತ್ಯೇಕ ಮುಸ್ಲಿಮ್‌ ರಾಷ್ಟ್ರದ ಬೇಡಿಕೆಯನ್ನು ಸಮರ್ಥಿಸಿಕೊಂಡರು ಎಂದಿರುವ ವಿಡಿಯೋ ಬಹುತೇಕ ನೆಹರೂ ಮತ್ತು ಜಿನ್ನಾ ಅವರ ದೃಶ್ಯಗಳಿಂದ ಕೂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್