ರೇವ್ಡಿ ಸಂಸ್ಕೃತಿ | ಬೆಕ್ಕಿಗೆ ಗಂಟೆ ಕಟ್ಟುವವರು ಸುಮ್ಮನಿರುವುದು ಏಕೆ?

  • ಕರ್ನಾಟಕದಿಂದ ₹9,981 ಕೋಟಿಯಷ್ಟು ಸಾಲ
  • ಉಚಿತ ಕೊಡುಗೆ ವಿರುದ್ಧ ಕ್ರಮ ಕೈಗೊಂಡಿಲ್ಲ

ಪ್ರಧಾನ ಮಂತ್ರಿಗಳು ಉಚಿತ ಕೊಡುಗೆಗಳನ್ನು ರಾಜಕೀಯಗೊಳಿಸಿ ವಿಪಕ್ಷಗಳನ್ನು ಟೀಕಿಸಿದ್ದಾರೆ. ಆದರೆ ಉಚಿತ ಕೊಡುಗೆಗಳಿಗೆ ಸಂಬಂಧಿಸಿ ಸಂವಿಧಾನದ ಅಡಿಯ ಸಂಸ್ಥೆಗಳು ಕ್ರಮಕೈಗೊಳ್ಳದ ರೀತಿಯಲ್ಲಿ ಅವುಗಳ ಕೈಕಟ್ಟಿ ಹಾಕಿರುವವರು ಯಾರು ಎಂಬ ಬಗ್ಗೆ 'ಇಂಡಿಯನ್ ಎಕ್ಸ್‌ಪ್ರೆಸ್‌' ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರೇವ್ಡಿ ಸಂಸ್ಕೃತಿಯನ್ನು ಪ್ರಶ್ನಿಸದ ಕುರಿತು, ಕೇಂದ್ರ ಹಣಕಾಸು ಸಚಿವಾಲಯದ ಪ್ರಮುಖ ಅಧಿಕಾರಿಗಳು, ರಾಜ್ಯ ಹಣಕಾಸು ಮಂತ್ರಿಗಳು, ಭಾರತದ ಚುನಾವಣಾ ಆಯೋಗ, ಹದಿನೈದನೇ ಹಣಕಾಸು ಆಯೋಗ, ನೀತಿ ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ಅಭಿಪ್ರಾಯವನ್ನು ಸಂಗ್ರಹಿಸಲಾದ ವರದಿಯಲ್ಲಿ, ಸರ್ಕಾರದ ಅತಿಯಾದ ವೆಚ್ಚವನ್ನು ನಿಯಂತ್ರಿಸದಂತೆ ಕೈಗಳು ಕಟ್ಟಿ ಹಾಕಿರುವ ಬಗ್ಗೆ ಬರೆಯಲಾಗಿದೆ.

ಕೇಂದ್ರ ಮತ್ತು ರಾಜ್ಯಗಳೆರಡು ತಮ್ಮ ಪ್ರಣಾಳಿಕೆಗಳಲ್ಲಿ ಬಡವರಿಗೆ ಉಚಿತವಾಗಿ ಏನಾನ್ನಾದರು ಕೊಡುತ್ತೇವೆ ಎಂದು ಘೋಷಿಸಿಕೊಂಡರೆ ಅದನ್ನು ‘ರೇವ್ಡಿ ಸಂಸ್ಕೃತಿ' (ಉಚಿತ ಕೊಡುಗೆ) ಎಂದು ಪ್ರಧಾನ ಮಂತ್ರಿ ಹೀಗಳೆದಿದ್ದಾರೆ. ಪ್ರಸ್ತುತ ದೇಶದ ಕಾನೂನಿನ ಪ್ರಕಾರ ಅಸ್ತಿತ್ವದಲ್ಲಿರುವ ಎರಡು ಕಾನೂನುಗಳ ಮೂಲಕ ಚುನಾವಣಾ ಆಯೋಗ, ಸಿಎಜಿ, ನೀತಿ ಆಯೋಗ ಹಾಗೂ ಹಣಕಾಸು ಆಯೋಗಗಳು ‘ಉಚಿತ ಕೊಡುಗೆ’ ನೀಡದಂತೆ ತಡೆಯುತ್ತವೆ, ಕ್ರಮ ಕೈಗೊಳ್ಳುತ್ತವೆ.

ಚುನಾವಣೆಗಳಲ್ಲಿ ಗೆಲ್ಲುವ ರಾಜಕೀಯ ಪಕ್ಷಗಳ ನಿರ್ಧಾರವನ್ನು ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ. ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗು ಬರುತ್ತದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.

ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಪನ್ಮೂಲ ಹಂಚಿಕೆಯ ನಿರ್ಧಾರ ಮಾಡುವುದು ಹಣಕಾಸು ಆಯೋಗದ ಮುಖ್ಯ ಜವಬ್ದಾರಿ. ಇದರ ವಿಸ್ತಾರದ ಉಲ್ಲೇಖದ ಅಗತ್ಯತೆ ಇದೆ, ಇಲ್ಲವಾದರೆ ಒಕ್ಕೂಟ ರಾಜಕೀಯದ ರಚನೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆರ್‌ಬಿಐನ ಆದೇಶ ಹಣದುಬ್ಬರವನ್ನು ನಿಯಂತ್ರಿಸುತ್ತಿದೆ. ಆದರೆ ನೀತಿ ಆಯೋಗ ಹೆಚ್ಚು ವಿಮರ್ಶೆಗೆ ಬಲಿಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಸಂವಿಧಾನದ 291ನೇ ವಿಧಿಯ ಅಡಿ, ರಾಜ್ಯಗಳು ಕೇಂದ್ರಕ್ಕೆ ಋಣಿಯಾಗಿದ್ದರೆ ಹೊಸ ಸಾಲಗಳಿಗೆ ಕೇಂದ್ರದ ಒಪ್ಪಿಗೆ ಸಿಗುತ್ತದೆ. ಆದ್ದರಿಂದ ಕೇಂದ್ರ ಹಣಕಾಸು ಸಚಿವಾಲಯ ಹೆಚ್ಚು ಪ್ರಭಾವ ಹೊಂದಿರುತ್ತದೆ. ಆದರೆ ಅದನ್ನು ದುರ್ಬಳಕೆ ಮಾಡಿಕೊಂಡರೆ ರಾಜ್ಯದ ನಾಯಕರು ಕೇಂದ್ರಕ್ಕೆ ಬಡವರ ವಿರೋಧಿ ಎಂಬ ಹಣೆಪಟ್ಟಿ ಕಟ್ಟುವ ಅಪಾಯವಿದೆ” ಎಂದು ಕೇಂದ್ರದ ಮಾಜಿ ಹಣಕಾಸು ಕಾರ್ಯದರ್ಶಿಯೊಬ್ಬರು ಕೇಂದ್ರದ ಸಂದಿಗ್ಧತೆಯನ್ನು ಮುಂದಿಟ್ಟು ತಮ್ಮ ಇಲಾಖಾ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ.

“ಉಚಿತವಾಗಿ ವಿದ್ಯುತ್‌ ನೀಡುವುದು ಉಚಿತ ಭರವಸೆಗಳಲ್ಲಿ ದೊಡ್ಡ ಕೊಡುಗೆಯಾಗಿದೆ. ಆದರೆ ಸಮಾಜದ ದೊಡ್ಡ ವರ್ಗಗಳಿಗೆ ಉಚಿತ ವಿದ್ಯುತ್ ನೀಡುವುದರಿಂದ ರಾಜ್ಯಗಳು ದುರ್ಬಲಗೊಳ್ಳುತ್ತವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

2022ರ ಮೇ 31ರಂತೆ ರಾಜ್ಯ ವಿತರಣಾ ಕಂಪನಿಗಳು ಸುಮಾರು 1.01 ಲಕ್ಷ ಕೋಟಿ ರೂಪಾಯಿಯನ್ನು ಉತ್ಪಾದಿತ ಕಂಪನಿಗಳಿಗೆ ಬಾಕಿ ಪಾವತಿಸಬೇಕಿದೆ.  ವಿತರಣಾ ಕಂಪನಿಗಳಿಗೆ ರಾಜ್ಯ ಸರ್ಕಾರಗಳು ₹62,931 ಕೋಟಿ ಪಾವತಿಸಬೇಕಿದೆ. ವಿತರಣಾ ಕಂಪನಿಯು ರಾಜ್ಯಗಳಿಂದ ₹76,337 ಕೋಟಿ ಸಬ್ಸಿಡಿ ಪಡೆಯುತ್ತದೆ. ಆದ್ದರಿಂದ ಕೆಲವು ಉಚಿತಗಳು ಎಂದಿಗೂ ಸಮಸ್ಯೆಯಿಲ್ಲ. ಆದರೆ ವಿದ್ಯುತ್ ಸಬ್ಸಿಡಿಗಳ ಮೇಲಿನ ಕರಪತ್ರಗಳು ಇತರ ಉತ್ಪಾದನಾ ವೆಚ್ಚವನ್ನು ನಿಯಂತ್ರಿಸುತ್ತವೆ ಎಂದು ವರದಿಯಾಗಿವೆ. 

ಈ ಸುದ್ದಿ ಓದಿದ್ದೀರಾ? ಹಿಟ್ಲರ್ ಚುನಾವಣೆ ಗೆಲ್ಲುತ್ತಿದ್ದ ಎನ್ನುವುದು ಬೇಜವಾಬ್ದಾರಿಯುತ ಹೇಳಿಕೆ: ಬಿಜೆಪಿ ಟೀಕೆ

“ಕೆಲವು ರಾಜ್ಯಗಳು ಹೆಚ್ಚು ಖರ್ಚು ಮಾಡುವ ಕಡಿಮೆ ಸಾಮರ್ಥ್ಯ ಹೊಂದಿರುವ ಕಾರಣ ಇದು ಸಮಸ್ಯೆಯಾಗಿ ಕಾಡುತ್ತದೆ. ಉದಾಹರಣೆಗೆ ಪಂಜಾಬ್ ರಾಜ್ಯವು ವೇತನಗಳು, ಪಿಂಚಣಿಗಳು ಹಾಗೂ ಹಿಂದಿನ ಸಾಲನ ಮೇಲಿನ ಬಡ್ಡಿಗಾಗಿ ಶೇ. 86ರಷ್ಟು ಹಣಕಾಸು ವ್ಯಯಿಸುತ್ತದೆ. ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳು ಸೇರಿದಂತೆ ಇತರೆ ನಿರ್ಮಾಣಗಳಿಗೆ ಶೇ. 7.5ರಷ್ಟು ಖರ್ಚು ಮಾಡಲಾಗುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ ಕೆಲವು ರಾಜ್ಯಗಳು ಉಚಿತದ ಬಗೆಗಿನ ಪ್ರಧಾನಿ ಮೋದಿ ಅವರ ಅಭಿಪ್ರಾಯವನ್ನು ಆರ್ಥಿಕತೆಗಿಂತ ಹೆಚ್ಚಾಗಿ ರಾಜಕೀಯ ಎಂದು ಪರಿಗಣಿಸಿವೆ.

ಅಜಾಗರೂಕ ಪ್ರಣಾಳಿಕೆಗಳು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡ ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರು, “ಫೆಬ್ರವರಿ 2018ರಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ಉದ್ಯೋಗಿ ಮಹಿಳೆಯರಿಗೆ ₹25,000 ನೀಡುವ ಯೋಜನೆ ಪ್ರಾರಂಭಿಸಿದರು, ಇದು ಒಂದು ಬೈಕಿನ ಅರ್ಧದಷ್ಟು ಹಣವಾಗಿದೆ. ಇದು ರೇವಡಿ ಅಲ್ಲವೇ? ಇದು ಬೂಟಾಟಿಕೆಯಿಂದ ಕೂಡಿದೆಯಲ್ಲವೇ?” ಎಂದು ವ್ಯಂಗ್ಯವಾಡಿದ್ದಾರೆ.  ತಮಿಳುನಾಡಿನಲ್ಲಿ ಎಡಿಎಂಕೆ ಸರ್ಕಾರವು ಪ್ರಾರಂಭಿಸಿದ ಯೋಜನೆಯನ್ನು 2021ರಲ್ಲಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ರದ್ದುಗೊಳಿಸಿತ್ತು.

ರಾಜ್ಯದ ಹಣಕಾಸಿನ ಬಗ್ಗೆ ಕೇಂದ್ರದ ಕಳವಳಗಳು ಆಧಾರರಹಿತವಲ್ಲ. 2022ರ ಜೂನ್‌ನಲ್ಲಿ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗಿನ ಸಭೆಯಲ್ಲಿ ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ ವಿ ಸೋಮನಾಥನ್ ಅವರು, ಜಿಲ್ಲಾಧಿಕಾರಿಗಳ ಕಚೇರಿಗಳು, ಜಿಲ್ಲಾ ನ್ಯಾಯಾಲಯದ ಆವರಣಗಳನ್ನು ಅಡವಿಟ್ಟು  ಭವಿಷ್ಯದ ಆದಾಯ ಹೆಚ್ಚಿಸುವ ಉದ್ದೇಶದಿಂದ ಭಾರಿ ಸಾಲ ಪಡೆದಿರುವುದಾಗಿ ತಿಳಿದುಬಂದಿದೆ.

ಆದರೆ ಅನೇಕ ಅರ್ಥಶಾಸ್ತ್ರಜ್ಞರು ಇದನ್ನು ತಳ್ಳು ಹಾಕುತ್ತಾರೆ, "ಅಧಿಕಾರಿಶಾಹಿಯ ಬೆಂಬಲದಿಂದ ಶ್ರೀಮಂತರು ಬ್ಯಾಂಕಿಂಗ್ ಸೌಲಭ್ಯಗಳನ್ನು ಮತ್ತು ದೊಡ್ಡ ಮಟ್ಟದ ಸಾಲ ಪಡೆಯುತ್ತಿರುವಾಗ, ಬಡವರು ಈ ಉಚಿತ ಕೊಡುಗೆಗಳ ಸಲುವಾಗಿ ಪ್ರೀತಿಸುತ್ತಾರೆಂದು ಹೇಳಬಹುದೇ?" ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಮೈತ್ರೀಶ್‌ ಘಟಕ್ ಹೇಳಿದ್ದಾರೆ.

“ಅರ್ಥಶಾಸ್ತ್ರದಲ್ಲಿ, ನಾವು ಅದನ್ನು 'ದತ್ತಿ ಪರಿಣಾಮ' ಎಂದು ಕರೆಯುತ್ತೇವೆ. ಒಮ್ಮೆ ನೀಡಿದ ಪ್ರಯೋಜನಗಳನ್ನು ತೆಗೆದುಹಾಕುವುದು ಅಸಾಧ್ಯ, ಇದು ಯಾವಾಗಲೂ ನಷ್ಟ ನಿವಾರಣೆಗೆ ಕಾರಣವಾಗುತ್ತದೆ. ಆದರೆ, ಯಾವುದೂ ಉಚಿತವಲ್ಲ, ಪ್ರತಿಯೊಂದಕ್ಕೂ ಯಾರಾದರೂ ಪಾವತಿಸುತ್ತಾರೆ (ತೆರಿಗೆ)” ಅವರು ಅಭಿಪ್ರಾಯಪಟ್ಟರು.

ಕೇಂದ್ರ ಹಣಕಾಸು ಸಚಿವಾಲಯವು 2019-20 ಮತ್ತು 2021-22 ರ ನಡುವೆ ರಾಜ್ಯಗಳೊಂದಿಗೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಆಂಧ್ರಪ್ರದೇಶ ₹23,899 ಕೋಟಿ, ಉತ್ತರ ಪ್ರದೇಶ ₹17,750 ಕೋಟಿ, ಪಂಜಾಬ್ ₹2,879 ಕೋಟಿ ಹಾಗೂ ಮಧ್ಯಪ್ರದೇಶ ₹2,698 ಕೋಟಿ, ಆಸ್ತಿಗಳನ್ನು ಅಡಮಾನ ಇಟ್ಟು ಸಾಲ ಪಡೆದಿವೆ. 

2019-20 ರಿಂದ 2021-22 ರ ಅವಧಿಯಲ್ಲಿ, ತೆಲಂಗಾಣ ₹56,767 ಕೋಟಿ, ಆಂಧ್ರಪ್ರದೇಶ ₹28,837 ಕೋಟಿ, ಉತ್ತರ ಪ್ರದೇಶ ₹24,891 ಕೋಟಿ, ಕೇರಳ ₹10,130 ಕೋಟಿ ಹಾಗೂ ಕರ್ನಾಟಕ ₹9,981 ಕೋಟಿ ಸಾಲ ಮಾಡಿ ಮೊದಲ ಐದು ಅಗ್ರಸ್ಥಾನಗಳಲ್ಲಿವೆ.

"ಕೆಲವು ರಾಜ್ಯಗಳು ಅಪಾಯಕಾರಿ ಸ್ಥಿತಿಯಲ್ಲಿವೆ" ಎಂದು ಹದಿನೈದನೇ ಹಣಕಾಸು ಆಯೋಗದ ಅಧ್ಯಕ್ಷ ಎನ್‌ ಕೆ ಸಿಂಗ್ ಹೇಳಿದ್ದಾರೆ. "ಕೆಲವು ರಾಜ್ಯಗಳು ಆರ್ಥಿಕ ಇಕ್ಕಟ್ಟಿಗೆ ಸಿಲುಕುತ್ತಿವೆ. ಸಾಲದ ಬಾಧ್ಯತೆಗಳನ್ನು ಪೂರೈಸಲು ಕಷ್ಟವಾಗುತ್ತದೆ. ಸ್ಥೂಲ ಆರ್ಥಿಕ ಸ್ಥಿರತೆ ಈ ಸರ್ಕಾರದ ಮುಂದಿರುವ ಕಠಿಣ ಸವಾಲಾಗಿದೆ. ಆದರೆ ಕಡಿವಾಣವಿಲ್ಲದ ಜನಪ್ರಿಯತೆ ಪ್ರಚಾರ ಸ್ಥಿರತೆಯನ್ನು ಅಪಾಯಕ್ಕೆ ಒಡ್ಡುತ್ತದೆ” ಎಂದು ಎಚ್ಚರಿಸಿದ್ದಾರೆ.

ಬಡವರಿಗೆ ಆಮ್ ಆದ್ಮಿ ಪಕ್ಷ ನೀಡುತ್ತಿರುವ ವಿದ್ಯುತ್ ಸಬ್ಸಿಡಿ ಮತ್ತು ಪಿಎಂ ಕಿಸಾನ್ (ಪ್ರತಿ ರೈತನಿಗೆ ವರ್ಷಕ್ಕೆ ₹6,000) ನಡುವೆ ವ್ಯತ್ಯಾಸ ಕಂಡುಕೊಳ್ಳಬೇಕಿದೆ. ಅರ್ಹತೆಯ ಸಬ್ಸಿಡಿಗಳನ್ನು ಉಚಿತಗಳಿಂದ ಪ್ರತ್ಯೇಕಿಸುವ ಅಗತ್ಯವಿದೆ ಎಂದು ಎನ್‌ಕೆ ಸಿಂಗ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್