ದೆಹಲಿ | 12 ವರ್ಷದ ಬಾಲಕನ ಮೇಲೆ ಕ್ರೂರ ಸಾಮೂಹಿಕ ಅತ್ಯಾಚಾರ

  • ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ, ರಾಡ್‌ನಿಂದ ಥಳಿತ
  • ದೆಹಲಿ ಗಂಡು ಮಕ್ಕಳಿಗೂ ಸುರಕ್ಷಿತವಲ್ಲ ಎಂದ ಮಹಿಳಾ ಆಯೋಗ

ದೆಹಲಿಯ ಸೀಲಂಪುರ್‌ ಪ್ರದೇಶದಲ್ಲಿ ಸೆಪ್ಟೆಂಬರ್‌ 18ರಂದು 12 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

ಮಹಿಳೆಯೊಬ್ಬರು ತನ್ನ ಮಗನ ಮೇಲೆ ಅತಿ ಕ್ರೂರವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ದೆಹಲಿ ಮಹಿಳಾ ಆಯೋಗಕ್ಕೆ (ಡಿಸಿಡಬ್ಲ್ಯೂ) ದೂರು ನೀಡಿದ್ದಾರೆ.

Eedina App

ನಾಲ್ವರು ದುಷ್ಕರ್ಮಿಗಳು ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆತನ ಖಾಸಗಿ ಅಂಗಗಳಿಗೆ ಕಬ್ಬಿಣದ ರಾಡ್‌ ಬಳಸಿ ಹಿಂಸಿಸಿದ್ದಾರೆ. ಇಟ್ಟಿಗೆ ಮತ್ತು ರಾಡ್‌ಗಳಿಂದ ಅಮಾನುಷವಾಗಿ ಥಳಿಸಿದ್ದಾರೆ ಎಂದು ದೂರಿನಲ್ಲಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

AV Eye Hospital ad

ಈ ಸುದ್ದಿ ಓದಿದ್ದೀರಾ?: ಚಾಮರಾಜನಗರ | ಕೆರೆಗೆ ನುಗ್ಗಿ ಅರ್ಧ ಮುಳುಗಿದ ಕೆಎಸ್‌ಆರ್‌ಟಿಸಿ ಬಸ್‌; ಪ್ರಯಾಣಿಕರು ಪಾರು

ʻʻದೆಹಲಿಯಲ್ಲಿ ಹೆಣ್ಣು ಮಕ್ಕಳು ಮಾತ್ರವಲ್ಲ, ಗಂಡು ಮಕ್ಕಳೂ ಸುರಕ್ಷಿತವಾಗಿಲ್ಲ. 12 ವರ್ಷದ ಬಾಲಕನ ಮೇಲೆ 4 ಜನ ಅಮಾನುಷವಾಗಿ ಅತ್ಯಾಚಾರ ಎಸಗಿದ್ದು, ಬಡಿಗೆಯಿಂದ ಥಳಿಸಿದ್ದಾರೆ. ನಮ್ಮ ತಂಡವು ಈ ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿದೆ. ಈವರೆಗೆ ಒರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, 3 ಮಂದಿ ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆʼʼ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಈ ಭೀಕರ ಘಟನೆಯ ಬಗ್ಗೆ ಸೆಪ್ಟೆಂಬರ್ 22ರಂದು ಬಾಲಕ ತನ್ನ ಪೋಷಕರಿಗೆ ತಿಳಿಸಿದ್ದಾನೆ. ಕೂಡಲೇ ಪೋಷಕರು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕನ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿದೆ.

ಡಿಸಿಡಬ್ಲ್ಯು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದು, ಎಫ್‌ಐಆರ್‌ನ ಪ್ರತಿ, ಆರೋಪಿಗಳ ವಿವರಗಳು ಹಾಗೂ ಈವರೆಗೆ ಎಷ್ಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರನ್ನು ಕೇಳಿದ್ದಾರೆ.

ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app