ಕೋವಿಡ್ ಸಂದರ್ಭ ಶೇ. 14ರಷ್ಟು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಶಾಶ್ವತವಾಗಿ ಮುಚ್ಚಿವೆ

  • ಗ್ಲೋಬಲ್ ಅಲಯನ್ಸ್ ಫಾರ್ ಮಾಸ್ ಎಂಟರ್‌ಪ್ರಿನ್ಯೂರ್‌ಶಿಪ್ ನಡೆಸಿದ ಅಧ್ಯಯನ
  • ಭಾರತದಲ್ಲಿ ಕಾರ್ಮಿಕರ ಸಾಮೂಹಿಕ ವಲಸೆಗೆ ಕಾರಣವಾದ ಕೋವಿಡ್ ಲಾಕ್‌ಡೌನ್

ಭಾರತದಲ್ಲಿ ಕೋವಿಡ್ ಲಾಕ್‌ಡೌನ್‌ನಿಂದಾಗಿ ಶೇ. 14ರಷ್ಟು ಸೂಕ್ಷ್ಮ , ಮಧ್ಯಮ ಮತ್ತು ಸಣ್ಣ ಉದ್ಯಮಗಳ (ಎಂಎಸ್ಎಂಇ) ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ‘ಗ್ಲೋಬಲ್ ಅಲಯನ್ಸ್ ಫಾರ್ ಮಾಸ್ ಎಂಟರ್‌ಪ್ರಿನ್ಯೂರ್‌ಶಿಪ್’ (ಗೇಮ್) ನಡೆಸಿದ ಸಮೀಕ್ಷೆ ತಿಳಿಸಿದೆ. 

ಈ ಸಮೀಕ್ಷೆಯ ಪ್ರಕಾರ ಶೇ. 14ರಷ್ಟು ಸೂಕ್ಷ್ಮ , ಮಧ್ಯಮ ಮತ್ತು ಸಣ್ಣ ಉದ್ಯಮಗಳ ವ್ಯಾಪಾರಿಗಳು ಶಾಶ್ವತವಾಗಿ ಘಟಕಗಳನ್ನು ಮುಚ್ಚಿದ್ದಾರೆ. 2022ರ ಮಾರ್ಚ್ ತಿಂಗಳಲ್ಲಿ ಕೋವಿಡ್ ಹರಡುವಿಕೆ ತಡೆಯಲು ಕೇಂದ್ರ ಸರ್ಕಾರವು ಲಾಕ್‌ಡೌನ್ ಹೇರಿತ್ತು. ಇದರಿಂದಾಗಿ ಉದ್ಯಮಿಗಳು ನಷ್ಟ ಅನುಭವಿಸಿದ್ದರು. ಅನುಭವಿಸಿದ ನಷ್ಟದ ಆರ್ಥಿಕ ಹೊರೆಯಿಂದಾಗಿ ಅನೇಕ ಉದ್ಯಮಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ. 

Eedina App

ಈ ಸುದ್ದಿ ಓದಿದ್ದೀರಾ? ರಕ್ಷಣಾ ಸಿಬ್ಬಂದಿಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಆರು ಮಹಿಳಾ ಅಧಿಕಾರಿಗಳು

ಸಮೀಕ್ಷೆ ವ್ಯಾಪ್ತಿಗೆ ಬರುವ ಶೇ. 14ರಷ್ಟು ಘಟಕಗಳು ಶಾಶ್ವತವಾಗಿ ಬಾಗಿಲು ಹಾಕಿವೆ. ಶೇ. 38ರಷ್ಟು ಉದ್ಯಮಗಳು ಉಳಿತಾಯದ ಕೊರತೆ ಎದುರಿಸಿವೆ. ಶೇ. 40ರಷ್ಟು ಸಣ್ಣ ಉದ್ಯಮಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಿವೆ. ಜೊತೆಗೆ ಶೇ. 92ರಷ್ಟು ಉದ್ಯಮಿಗಳು ಸ್ನೇಹಿತರು ಮತ್ತು ಕುಟುಂಬದವರ ಬಳಿ ಸಾಲ ಪಡೆಯುವಲ್ಲಿ ವಿಫಲವಾಗಿದ್ದು, ನಂತರ ಹಣಕಾಸು ಸಂಸ್ಥೆಗಳ ಮೊರೆ ಹೋಗಿದ್ದಾರೆ. 

AV Eye Hospital ad

 ಕೋವಿಡ್ ಅವಧಿಯಲ್ಲಿ ಅನೇಕ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಶೇ. 55ರಷ್ಟು ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಒಟ್ಟಾರೆಯಾಗಿ ಶೇ. 34ರಷ್ಟು ಸೂಕ್ಷ್ಮ ಘಟಕಗಳು ಕಡಿಮೆಯಾಗಿದ್ದು, ಇಲ್ಲಿಯೂ ಪುರುಷರ ನೇತೃತ್ವದ ಉದ್ಯಮಗಳಿಗಿಂತ ಮಹಿಳೆಯರ ನೇತೃತ್ವದ ಸಣ್ಣ ಉದ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ಬಾಗಿಲು ಮುಚ್ಚಿವೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app