ದೇಶದ 51 ಸಂಸದರು, 71 ಶಾಸಕರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ; ಸುಪ್ರೀಂಗೆ ಕೇಂದ್ರ ಮಾಹಿತಿ

Supreme Court
  • 121 ಮಂದಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳು ವಿಚಾರಣೆಗೆ ಬಾಕಿ
  • ಶಾಸಕರ ಪೈಕಿ 112 ಜನರ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ

"ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣ ಸಂಬಂಧ ದೇಶದ 51 ಸಂಸದರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ)ವು ಎಫ್‌ಐಆರ್‌ ದಾಖಲಿಸಿದೆ" ಎಂದು ಸುಪ್ರೀಂ ಕೋರ್ಟಿಗೆ ಅಮಿಕಸ್‌ ಕ್ಯೂರಿ ವಿಜಯ್‌ ಹನ್ಸಾರಿಯಾ ತಿಳಿಸಿದ್ದಾರೆ. 

ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ವೇಳೆ ವಿಜಯ್‌ ಹನ್ಸಾರಿಯಾ ಅವರು ವಕೀಲೆ ಸ್ನೇಹಾ ಕಲಿತಾ ಸಲ್ಲಿಸಿರುವ ವರದಿಯನ್ನು ನ್ಯಾಯಾಲಯದಲ್ಲಿ ಉಲ್ಲೇಖಿಸಿದ್ದಾರೆ. 

Eedina App

ಈ ವೇಳೆ ಅವರು, "ಅಕ್ರಮ ಹಣ ವರ್ಗಾವಣೆ ಆರೋಪದಡಿ 51 ಸಂಸದರ (ಹಾಲಿ, ಮಾಜಿ) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ" ಎಂದು ನ್ಯಾಯಪೀಠದ ಗಮನಕ್ಕೆ ತಂದರು.

"ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ 71 ಸದಸ್ಯರು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ದಾಖಲಾಗಿರುವ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಆದರೆ ನಿರ್ದಿಷ್ಟವಾಗಿ ಎಷ್ಟು ಮಂದಿ ಶಾಸಕರು, ಎಷ್ಟು ಮಂದಿ ಎಂಎಲ್‌ಸಿಗಳು ಎಂದು ತಿಳಿದಿಲ್ಲ" ಎಂದೂ ಅವರು ಹೇಳಿದ್ದಾರೆ.

AV Eye Hospital ad

"121 ಮಂದಿ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. 14 ಜನ ಹಾಲಿ ಸಂಸದರು ಮತ್ತು 37 ಮಂದಿ ಮಾಜಿ ಸಂಸದರು ಸಿಬಿಐ ದಾಖಲಿಸಿರುವ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆರೋಪಿತರ ಪೈಕಿ ಐವರು ಈಗಾಗಲೇ ಮೃತಪಟ್ಟಿದ್ದಾರೆ. ಶಾಸಕರ ಪೈಕಿ 112 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಇದರಲ್ಲಿ 34 ಮಂದಿ ಹಾಲಿ ಹಾಗೂ 78 ಮಂದಿ ಮಾಜಿ ಶಾಸಕರಿದ್ದಾರೆ. 9 ಮಂದಿ ಈಗಾಗಲೇ ನಿಧನರಾಗಿದ್ದಾರೆ" ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಅತ್ಯಾಚಾರ | ‘ಒಂದು ಕೈ’ ತರ್ಕ ಬಳಸಿ ಪ್ರಕರಣ ಖುಲಾಸೆಗೊಳಿಸಿದ ಹರಿಯಾಣ ನ್ಯಾಯಾಲಯ

"ಡ್ರಗ್ಸ್‌ ಪ್ರಕರಣ ಸಂಬಂಧ ಹಾಲಿ ಅಥವಾ ಮಾಜಿ ಸಂಸದ ಮತ್ತು ಶಾಸಕರ ವಿರುದ್ಧದ ಯಾವುದೇ ಕ್ರಿಮಿನಲ್‌ ಪ್ರಕರಣದ ವಿಚಾರಣೆ ಬಾಕಿ ಇಲ್ಲ" ಎಂದು ಅವರು ಸುಪ್ರೀಂ ಕೋರ್ಟಿಗೆ ಹೇಳಿದ್ದಾರೆ.

"ಇ.ಡಿ ಮತ್ತು ಸಿಬಿಐ ದಾಖಲಿಸಿರುವ ಪ್ರಕರಣಗಳ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮಿತಿ ರಚಿಸಬೇಕು" ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್
eedina app