
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5ಜಿ ಸೇವೆ ಲಭ್ಯ
- ಮಾರ್ಚ್ 2024ರೊಳಗೆ ದೇಶದ ಎಲ್ಲಾ ನಗರಗಳಲ್ಲಿ ಏರ್ಟೆಲ್ 5ಜಿ ಸೇವೆ
ಭಾರತದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್, 5ಜಿ ಪ್ಲಸ್ ಸೇವೆಯನ್ನು ಭಾರತದ 12 ನಗರಗಳಿಗೆ ವಿಸ್ತರಿಸಿದೆ.
ಪ್ರಸ್ತುತ ಏರ್ಟೆಲ್ 5ಜಿ ಸೇವೆ ದೆಹಲಿ, ಸಿಲಿಗುರಿ, ಬೆಂಗಳೂರು, ಹೈದರಾಬಾದ್, ವಾರಣಾಸಿ, ಮುಂಬೈ, ನಾಗ್ಪುರ, ಚೆನ್ನೈ, ಗುರುಗ್ರಾಮ್, ಪಾಣಿಪತ್ ಹಾಗೂ ಗುವಾಹಟಿ ನಗರಗಳಲ್ಲಿ ಜಾರಿಗೊಳಿಸಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣ, ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಾಗ್ಪುರದ ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪಾಟ್ನಾ ವಿಮಾನ ನಿಲ್ದಾಣಗಳಲ್ಲಿ ಗ್ರಾಹಕರು ಏರ್ಟೆಲ್ 5ಜಿ ಸೇವೆ ಪಡೆಯುತ್ತಾರೆ.
ರೈಲು ನಿಲ್ದಾಣಗಳಿಗೆ ಸಂಬಂಧಿಸಿ ಪಾಟ್ನಾದ ರೈಲು ನಿಲ್ದಾಣ, ಡಾಕ್ಬಾಂಗ್ಲೋ, ಮೌರ್ಯ ಲೋಕ್, ಬೈಲಿ ರೋಡ್, ಬೋರಿಂಗ್ರೋಡ್, ಸಿಟಿ ಸೆಂಟರ್ಮಾಲ್, ಪಾಟಲಿಪುತ್ರ ಇಂಡಸ್ಟ್ರಿಯಲ್ ಪ್ರದೇಶ, ಒಳಗೊಂಡಂತೆ ಪಾಟ್ನಾದ ಹಲವು ಪ್ರದೇಶಗಳಲ್ಲಿ 5ಜಿ ಅನ್ನು ಹೊರತಂದಿದೆ.
ಈ ಸುದ್ದಿ ಓದಿದ್ದೀರಾ: ಇಂಗ್ಲಿಷ್ ನಿಘಂಟಿನಲ್ಲಿ ಈ ವರ್ಷ ಅತೀ ಹೆಚ್ಚು ಬಾರಿ ಹುಡುಕಲಾದ ಪದ ಯಾವುದು ಗೊತ್ತೆ?
ಏರ್ಟೆಲ್ ಮತ್ತು ರಿಲಯನ್ಸ್ ಜಿಯೋದಂತಹ ಟೆಲಿಕಾಂ ಕಂಪನಿಗಳು ಪ್ರತಿದಿನವು ಹೊಸ ನಗರಗಳನ್ನು ಪಟ್ಟಿಗೆ ಸೇರಿಸುತ್ತಿವೆ.
ಏರ್ಟೆಲ್ ಪ್ರತಿಸ್ಪರ್ಧಿ ಕಂಪನಿ ರಿಲಯನ್ಸ್ ಜಿಯೋ ಈಗಾಗಲೇ ದೆಹಲಿ ಎನ್ಸಿಆರ್, ಮುಂಬೈ, ವಾರಣಾಸಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಚೆನ್ನೈ, ನಾಥದ್ವಾರ, ಪುಣೆ, ಗುರುಗ್ರಾಮ, ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್ ನಗರಗಳು ಹಾಗೂ ಗುಜರಾತಿನ ಎಲ್ಲಾ 33 ಜಿಲ್ಲಾ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಮಾಡಿದೆ.
ಮಾರ್ಚ್ 2024ರೊಳಗೆ ಏರ್ಟೆಲ್ ದೇಶದ ಎಲ್ಲಾ ನಗರಗಳಲ್ಲಿ 5ಜಿ ಸೇವೆ ನೀಡುವುದಾಗಿ ತಿಳಿಸಿದೆ. ರಿಲಯನ್ಸ್ ಜಿಯೋ ಕೂಡ ಮುಂದಿನ ವರ್ಷದ ಅಂತ್ಯದ ವೇಳೆಗೆ ಭಾರತದಾದ್ಯಂತ 5ಜಿ ವಿಸ್ತರಿಸುವುದಾಗಿ ಭರವಸೆ ನೀಡಿದೆ.