ಕೋಪದ ಭರದಲ್ಲಿ ಶ್ರದ್ಧಾಳ ಹತ್ಯೆ; ಅಫ್ತಾಬ್ ವಿರುದ್ಧ 6 ಸಾವಿರ ಪುಟಗಳ ಆರೋಪಪಟ್ಟಿ

Shradda aftaab
  • 75 ದಿನಗಳ ನಂತರ ಆರೋಪ ಪಟ್ಟಿ ಸಲ್ಲಿಸಿದ ದೆಹಲಿ ಪೊಲೀಸರು
  • ಅಫ್ತಾಬ್‌ನ ನ್ಯಾಯಾಂಗ ಬಂಧನ ಫೆಬ್ರವರಿ 7ರವರೆಗೆ ವಿಸ್ತರಣೆ 

ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದ ಶ್ರದ್ಧಾ ವಾಕರ್‌ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು 6,629 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಆರೋಪಿ ಅಫ್ತಾಬ್ ಪೂನಾವಾಲ, ಮೇ 18ರಂದು ಶ್ರದ್ಧಾ ವಾಕರ್‌ನ ನಡುವೆ ಜಗಳ ಉಂಟಾಗಿ ಕೋಪದ ಭರದಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. 

ಆರೋಪ ಪಟ್ಟಿಯಲ್ಲಿ ಅಫ್ತಾಬ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ವಕೀಲರ ಬದಲಾವಣೆ ಪ್ರಸ್ತಾಪ ಮಾಡುವ ವಿಚಾರವನ್ನು ಅಫ್ತಾಭ್ ಮಾಡಿದ್ದು, ಅದಕ್ಕೂ ಮುನ್ನ ಯಾವುದೇ ವಕೀಲರಿಗೆ ತನ್ನ ಆರೋಪ ಪಟ್ಟಿ ತೋರಿಸೋದು ಬೇಡ ಎಂದಿದ್ದ. ಸದ್ಯ ಅಫ್ತಾಬ್‌ನ ನ್ಯಾಯಾಂಗ ಬಂಧನವನ್ನು ಫೆಬ್ರವರಿ 7ರವರೆಗೆ ವಿಸ್ತರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಗೋಹತ್ಯಾ ನಿಷೇಧವೇ ಪರಿಹಾರ : ಗುಜರಾತ್ ಸೆಷನ್ಸ್ ನ್ಯಾಯಾಧೀಶ

ದೆಹಲಿ ಪೊಲೀಸರು 75 ದಿನಗಳ ನಂತರ ಈ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ನಾರ್ಕೋ ಪರೀಕ್ಷೆ, ಪಾಲಿಗ್ರಫಿ ಪರೀಕ್ಷೆ ಮಾಡಿದ ನಂತರ ಆರೋಪಿಯಿಂದ ಹಲವು ರೀತಿಯ ಉತ್ತರಗಳನ್ನು ಕೇಳಿದ ನಂತರ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ. 

ಅಫ್ತಾಬ್ ಪೂನಾವಾಲಾ ಪ್ರತಿನಿತ್ಯ ತನ್ನ ಲಿವ್ ಇನ್ ಸಂಗಾತಿ  ಶ್ರದ್ಧಾಳನ್ನು ವಿವಿಧ ಕಾರಣಕ್ಕಾಗಿ ಥಳಿಸುತ್ತಿದ್ದ ಎನ್ನುವುದು ಆಕೆಯ ಸ್ನೇಹಿತರ ಹೇಳಿಕೆಗಳಿಂದ ಬಹಿರಂಗವಾಗಿದೆ. ಕಳೆದ ವರ್ಷದ ಮೇ 18ರಂದು ಇದೇ ರೀತಿಯಾಗಿ ಶ್ರದ್ಧಾಳ ಜೊತೆ ಅಫ್ತಾಬ್ ಗಲಾಟೆ ಮಾಡಿದ್ದ. ಸಿಟ್ಟಿನ ಭರದಲ್ಲಿ ಅಫ್ತಾಬ್ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಆಕೆಯ ದೇಹವನ್ನು ನಿರ್ದಯವಾಗಿ 35 ತುಂಡುಗಳಾಗಿ ಮಾಡಿ ದೆಹಲಿಯ ಹಲವು ಕಡೆ ಎಸೆದಿದ್ದ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app