ಮಹಿಳಾ ಆಯೋಗದ ಅಧ್ಯಕ್ಷೆ ಮನೆ ಮೇಲೆ ದಾಳಿ; ʻಚಾರ್‌ ಬಾಟೆಲ್‌ ವೋಡ್ಕಾʼ ಎಂದು ಪೊಲೀಸ್‌ ಠಾಣೆಯಲ್ಲಿ ಹಾಡಿ, ಕುಣಿದ ಆರೋಪಿ

  • ಪೊಲೀಸ್‌ ಠಾಣೆಯೊಳಗೆ ಕುಣಿದು ಕುಪ್ಪಳಿಸಿದ ಆರೋಪಿ
  • ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಮನೆ ಮೇಲೆ ದಾಳಿ

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮನೆ ಮೇಲೆ ದಾಳಿ ಮಾಡಿ, ಕಾರುಗಳನ್ನು ಧ್ವಂಸಗೊಳಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪೊಲೀಸ್ ಠಾಣೆಯೊಳಗೆ ಆತ ʼಚಾರ್ ಬಾಟಲ್ ವೋಡ್ಕಾʼ ಎಂದು ಹಾಡುತ್ತಾ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದೆ.

ಪೊಲೀಸ್ ಠಾಣೆಯೊಳಗೆ, ತಾನೆಲ್ಲಿದ್ದೇನೆ ಎಂಬ ವಿವೇಚನೆಯೂ ಇಲ್ಲದೇ ಇರುವ ರೀತಿಯಲ್ಲಿ ವೋಡ್ಕಾ ಬಗ್ಗೆ ಹಾಡುತ್ತಾ, ಕುಣಿಯುತ್ತಿರುವುದನ್ನು ಚಿತ್ರೀಕರಿಸಲಾದ ವಿಡಿಯೋದಲ್ಲಿ ಕಾಣಬಹುದು. ಆತನ ಅನುಚಿತ ವರ್ತನೆ ಮತ್ತು ಉಡುಗೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Eedina App

ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ ಸಿವಿಲ್ ಲೈನ್ಸ್ ಠಾಣೆಗೆ ಕರೆದೊಯ್ದಿದ್ದಾರೆ.

AV Eye Hospital ad

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ಕಳೆದ ಕೆಲವು ತಿಂಗಳುಗಳಲ್ಲಿ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಹದಗೆಟ್ಟಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷರೂ ಸುರಕ್ಷಿತವಾಗಿಲ್ಲ. ಬಹಿರಂಗ ಕೊಲೆ ಬೆದರಿಕೆಗಳು ನಡೆಯುತ್ತಿವೆ. ಎಲ್‌ಜಿ ಸಾಹಿಬ್ ಅವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿಪಡಿಸಲು ಸ್ವಲ್ಪ ಸಮಯವನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ, ”ಎಂದು ಮಲಿವಾಲ್‌ ಟ್ವೀಟ್‌ಗೆ ರೀಟ್ವೀಟ್‌ ಮಾಡಿದ್ದಾರೆ.

ʻʻಯಾರೋ ದುಷ್ಕರ್ಮಿಗಳು ನನ್ನ ಮನೆಗೆ ನುಗ್ಗಿ ದಾಳಿ ಮಾಡಿದ್ದಾರೆ. ನಾನು ಮತ್ತು ಅಮ್ಮ ಬಳಸುತ್ತಿದ್ದ ಕಾರುಗಳು ಹಾಳಾಗಿವೆ. ಮನೆಯ ಸುತ್ತ ಗಾಜಿನ ಚೂರುಗಳು ಬಿದ್ದಿದ್ದರಿಂದ ಮನೆ ಪ್ರವೇಶಿಸುವುದು ಕಷ್ಟವಾಯಿತು. ಅದೃಷ್ಟವಶಾತ್, ಘಟನೆ ನಡೆದ ಸಮಯದಲ್ಲಿ ನನ್ನ ತಾಯಿ ಮತ್ತು ನಾನು ಮನೆಯಲ್ಲಿ ಇರಲಿಲ್ಲ. ಇದ್ದಿದ್ದರೆ ಏನಾಗುತ್ತಿತ್ತು ಎಂದು ನನಗೆ ತಿಳಿದಿಲ್ಲ! ನೀವು ಏನು ಮಾಡಿದರೂ ನಾನು ಹೆದರುವುದಿಲ್ಲʼʼ ಎಂದು ಮಲಿವಾಲ್‌ ಸೋಮವಾರ ಟ್ವೀಟ್‌ ಮಾಡಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app