ಟೆಕ್‌ ಅಪ್‌ಡೇಟ್‌ | 4ಕೆ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದ ಅಕಾಯ್‌ ಇಂಡಿಯಾ

  • ವೆಬ್‌ಓಎಸ್‌ ಹೊಂದಿರುವ ನಾಲ್ಕು ಶ್ರೇಣಿಯ ಟಿವಿ ಬಿಡುಗಡೆ ಮಾಡಿದ ಅಕಾಯ್‌ ಇಂಡಿಯಾ
  • 55 ಇಂಚಿನ ವೆಬ್‍ಓಎಸ್ 4ಕೆ ಯುಎಚ್‍ಡಿ ಹೊಂದಿರುವ ಟಿವಿಯ ಬೆಲೆ ಕೇವಲ ₹39,990

ಟಿವಿ, ವಾಶಿಂಗ್‌ ಮಷಿನ್‌ಗಳಿಂದ ಪರಿಚಿತವಾಗಿರುವ ಅಕಾಯ್‌ ಇಂಡಿಯಾ ಕಂಪನಿಯು, ವೆಬ್‌ಓಎಸ್‌ ಹೊಂದಿರುವ 4ಕೆ, ಎಫ್‌ಎಚ್‌ಡಿ (ಫುಲ್‌ ಹೈ ಡೆಫಿನಿಷನ್‌) ಹಾಗೂ ಎಚ್‌ಡಿ (ಹೈ ಡೆಫಿನಿಷನ್)‌ ಸ್ಮಾರ್ಟ್‌ ಟಿವಿಯನ್ನು ಬಿಡುಗಡೆ ಬುಧವಾರ ಬಿಡುಗಡೆ ಮಾಡಿದೆ.

ಮ್ಯಾಜಿಕ್‌ ರಿಮೋಟ್‌ ಮತ್ತು ಕೃತಕ ಬುದ್ಧಿಮತ್ತೆಯಿಂದ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌-ಎಐ) ಟಿವಿಯನ್ನು ವಿನ್ಯಾಸಗೊಳಿಸಲಾಗಿದೆ. ಟಿವಿ ಸ್ಟ್ರೀಮಿಂಗ್‌, ಹುಡುಕಾಟ ಹಾಗೂ ಚಾನೆಲ್‌ ವೀಕ್ಷಣೆ ಅನುಭವವನ್ನು ಸರಾಗಗೊಳಿಸಲು ಥಿನ್‌ಓ ಎಐ ಅಲೆಕ್ಸಾವನ್ನು ನೀಡಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಅಲೆಕ್ಸಾ ಮೂಲಕ ಕೇಳಬಹುದು. ವೆಬ್‍ಓಎಸ್ ಸ್ಮಾರ್ಟ್ ಟಿವಿ ಶ್ರೇಣಿಯು 55, 50, 43 ಹಾಗೂ 32 ಇಂಚು ಸೇರಿದಂತೆ ಒಟ್ಟು ನಾಲ್ಕು ಅಳತೆಯಲ್ಲಿ ಲಭ್ಯವಿದೆ. ಅಕಾಯ್ 55 ಇಂಚಿನ ವೆಬ್‍ಓಎಸ್ 4ಕೆ ಯುಎಚ್‍ಡಿ ಹೊಂದಿರುವ ಟಿವಿಯ ಬೆಲೆ ₹39,990.

ಅಕಾಯ್‍ನ ವೆಬ್‍ಓಎಸ್ ಟಿವಿಗಳು ಎಚ್‍ಡಿಆರ್, 10 ಎಚ್‍ಎಲ್‍ಜಿ, ಡೋಬ್ಲೆ ಆಡಿಯೊ, ಡ್ಯುಯೆಲ್ ಬ್ಯಾಂಡ್ ವೈಫೈ, ದ್ವಿಮುಖ ಬ್ಲೂಟೂತ್ 5.0, ಸ್ಕ್ರೀನ್ ಮಿರರಿಂಗ್, ಎಂಇಎಂಎಸಿ, 4ಕೆ ಅಪ್‍ಸ್ಕೇಲಿಂಗ್, ಅಲ್ಲೆಮ್, 1.5 ಜಿಬಿ ರ‍್ಯಾಮ್‌ ಹಾಗೂ 8 ಜಿಬಿ ಇಂಟರ್‌ನಲ್‌ ಮೆಮೊರಿ ಹೊಂದಿದೆ.

ಗ್ರಾಹಕರು ಪ್ರೈಮ್ ವೀಡಿಯೋ, ನೆಟ್‍ಫ್ಲಿಕ್ಸ್, ಝೀ5, ಸೋನಿ ಲಿವ್, ಹಾಟ್‍ಸ್ಟಾರ್, ಆಪಲ್ ಟಿವಿ, ಇತ್ಯಾದಿ ಓಟಿಟಿಗಳನ್ನು ಬಳಸಬಹುದಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್