ದೆಹಲಿ | ಮಹಿಳಾ ಕಾಲೇಜಿನ ಗೋಡೆ ಹತ್ತಿದ ಯುವಕರಿಂದ ವಿದ್ಯಾರ್ಥಿನಿಯರಿಗೆ ಕಿರುಕುಳದ ಆರೋಪ

  • ದೀಪಾವಳಿ ಹಬ್ಬ ನೋಡಲು ಮಹಿಳಾ ಕಾಲೇಜಿನ ಗೋಡೆ ಹತ್ತಿರುವ ಯುವಕರು
  • ಮಿರಾಂಡಾ ಹೌಸ್ ಕಾಲೇಜಿನ ಗೋಡೆ ಹತ್ತುತ್ತಿರುವ ಯುವಕರ ವಿಡಿಯೋ ವೈರಲ್

ಯುವಕರ ಗುಂಪು ದೆಹಲಿ ವಿಶ್ವವಿದ್ಯಾಲಯದ ಆಲ್- ವಿಮೆನ್ ಮಿರಾಂಡಾ ಹೌಸ್ ಎಂಬ ಮಹಿಳಾ ಕಾಲೇಜಿನ ಗೋಡೆ ಹತ್ತುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ದೀಪಾವಳಿ ಹಬ್ಬ ನೋಡುವ ಸಲುವಾಗಿ ಮಹಿಳಾ ಕಾಲೇಜಿನ ಗೋಡೆಗಳನ್ನು ಹತ್ತುತ್ತಿರುವ ಯುವಕರ ವಿಡಿಯೋವನ್ನು ಮಿರಾಂಡಾ ಹೌಸ್‌ ಕಾಲೇಜಿನ ವಿದ್ಯಾರ್ಥಿನಿಯರು ಟ್ವೀಟ್ ಮಾಡಿದ್ದು, ವೈರಲ್ ಆಗುತ್ತಿದೆ.

ಗೋಡೆ ಹತ್ತುತ್ತಿರುವ ಹುಡುಗರು ಬೆಕ್ಕಿನ ಹಾಗೇ ಕೂಗಿದ್ದು, ಕಾಮ ಪ್ರಚೋದನೆ ಮಾಡಿದ್ದಾರೆ ಎಂಬ ವಿದ್ಯಾರ್ಥಿನಿಯರ ಆರೋಪದ ಮೇಲೆ ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯು) ನಗರ ಪೊಲೀಸ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ ಕಾಲೇಜಿಗೆ ನೋಟಿಸ್ ಜಾರಿ ಮಾಡಿದೆ.

ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಕಾಲೇಜಿನ ಭದ್ರತಾ ವ್ಯವಸ್ಥೆ ಪ್ರಶ್ನಿಸಿದ್ದು, "ದೆಹಲಿಯ ಅತ್ಯಂತ ಜನಪ್ರಿಯ ಕಾಲೇಜುಗಳಲ್ಲಿ ಒಂದಾದ ಮಿರಾಂಡಾ ಹೌಸ್‌ ಕಾಲೇಜಿನಲ್ಲಿ ದೀಪಾವಳಿ ಹಬ್ಬಕ್ಕೆ ಪ್ರವೇಶಿಸಲು ಯುವಕರು ಗೋಡೆಗಳನ್ನು ಏರುತ್ತಿದ್ದಾರೆ. ವಿದ್ಯಾರ್ಥಿನಿಯರು ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾವು ದೆಹಲಿ ಪೊಲೀಸರು ಮತ್ತು ಕಾಲೇಜು ಆಡಳಿತಕ್ಕೆ ನೋಟಿಸ್ ಕಳುಹಿಸುತ್ತಿದ್ದೇವೆ. ಈ ಘಟನೆ ಹೇಗೆ ನಡೆಯಿತು? ಮತ್ತು ಭದ್ರತಾ ವ್ಯವಸ್ಥೆ ಎಲ್ಲಿದೆ?" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ಬೆಂಗಳೂರು ವಿವಿ | ವಿದ್ಯಾರ್ಥಿಗಳು ಕುಲಪತಿ ಮತ್ತು ಕುಲಸಚಿವರನ್ನು ನೇರವಾಗಿ ಭೇಟಿಯಾಗದಂತೆ ಆದೇಶ

ಎಲ್ಲ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕೆಲವು ಯುವಕರು ಗೋಡೆ ಹತ್ತುತಿರುವುದು, ಕ್ಯಾಂಪಸ್‌ನಲ್ಲಿ ತಿರುಗಾಡುವುದು ಹಾಗೂ ಕೂಗುತ್ತಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿ ಇದುವರೆಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app