
- ಹೊಸ ವರ್ಷಾಚರಣೆ ವೇಳೆ ಅವಘಡ
- ಎರಡು ದಿನದ ಹೊಸ ವರ್ಷಾಚರಣೆ
ಅಮೆರಿಕದ ಲಾಸ್ ಏಂಜಲೀಸ್ನ ಪೂರ್ವದ ನಗರದಲ್ಲಿ ಶನಿವಾರ (ಜನವರಿ 21) ತಡರಾತ್ರಿ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಒಂಬತ್ತು ಜನರು ಮೃತಪಟ್ಟಿದ್ದಾರೆ. ಚಾಂದ್ರಮಾನ ಮಾಸದ ಹೊಸ ವರ್ಷಾಚರಣೆಯಲ್ಲಿ ಈ ಅವಘಡ ಸಂಭವಿಸಿದೆ
ಸಾವಿರಾರು ಜನ ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗಿದ್ದರು. ರಾತ್ರಿ 10.22ಕ್ಕೆ ಗುಂಡಿನ ದಾಳಿ ವರದಿಯಾಗಿದೆ. ಮಾಂಟೆರಿ ಪಾರ್ಕ್ನ ವಹಿವಾಟು ಪ್ರದೇಶದಲ್ಲಿ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂದೂಕುಧಾರಿ ವ್ಯಕ್ತಿಯೊಬ್ಬನಿಂದ ದಾಳಿ ನಡೆದಿದೆ. ದಾಳಿಗೆ ಪ್ರತಿಯಾಗಿ ಹತ್ತಾರು ಪೊಲೀಸ್ ಅಧಿಕಾರಿಗಳು ಹಲವಾರು ಗಂಟೆಗಳವರೆಗೆ ಪ್ರತಿದಾಳಿ ನಡೆಸಿದ ವರದಿಗಳಿಗೆ ಸಂಬಂಧಿಸಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಾಂಟೆರಿ ಪಾರ್ಕ್ನಲ್ಲಿ 60 ಸಾವಿರ ಜನರಿದ್ದರು. ಇಲ್ಲಿನ ಬಹುಪಾಲು ಮಂದಿ ಏಷ್ಯಾದವರು. ಮೂವರು ತಮ್ಮ ವ್ಯಾಪಾರ ಕ್ರೇಂದ್ರಕ್ಕೆ ನುಗ್ಗಿ ಮಳಿಗೆ ಬಾಗಿಲು ಮುಚ್ಚುವಂತೆ ಹೇಳಿದರು ಎಂದು ದಾಳಿ ಸಂಭವಿಸಿದ ಬೀದಿಯಲ್ಲಿ ಆಹಾರ ಕೇಂದ್ರ ಹೊಂದಿರುವ ಸೆಯುಂಗ್ ವೊನ್ ಚೋಯ್ ಲಾಸ್ ಆಂಗಲ್ಸ್ ಪತ್ರಿಕೆಯೊಂದಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ತೈವಾನ್ನಲ್ಲಿ ಯಥಾಸ್ಥಿತಿ ಕಾಪಾಡಿ; ಚೀನಾಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಎಚ್ಚರಿಕೆ
“ಮೆಷಿನ್ ಗನ್ನೊಂದಿಗೆ ದಾಳಿಕೋರ ಮಳಿಗೆಗೆ ನುಗ್ಗಿದ್ದ. ಅವನ ಬಳಿ ಅನೇಕ ಸುತ್ತಿನ ಮದ್ದುಗುಂಡುಗಳಿದ್ದವು. ಆದ್ದರಿಂದ ಆತ ಲೋಡ್ ಮಾಡಿ ಮತ್ತೆ ದಾಳಿ ನಡೆಸಬಹುದು. ಈಗಾಗಲೇ ಇಲ್ಲಿನ ಡ್ಯಾನ್ಸ್ ಕ್ಲಬ್ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಆತ ಹೇಳಿದ” ಎಂದು ಸೆಯುಂಗ್ ಚೋಯ್ ತಿಳಿಸಿದ್ದಾರೆ.
ಶನಿವಾರ ಇಲ್ಲಿ ಎರಡು ದಿನಗಳ ಹೊಸ ವರ್ಷದ ಉತ್ಸವದ ಪ್ರಾರಂಭವಾಗಿದೆ. ಇದು ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಚಾಂದ್ರಮಾನ ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಒಂದಾಗಿದೆ.