ಅಚ್ಚರಿ ಮೂಡಿಸಿದ ವೈದ್ಯಕೀಯ ಪ್ರಯೋಗ | ತಿಂಗಳ ಹಿಂದೆ ಜನಿಸಿದ ʼ1992ರ ಅವಳಿ ಮಕ್ಕಳುʼ!

  • ರಾಷ್ಟ್ರೀಯ ಭ್ರೂಣದಾನ ಕೇಂದ್ರದಲ್ಲಿ ಅವಳಿ ಮಕ್ಕಳ ಜನನ
  • 30 ವರ್ಷಗಳ ಹಿಂದೆ ಭ್ರೂಣವನ್ನು ಶೈತ್ಯೀಕರಿಸಿ ಇಡಲಾಗಿತ್ತು

30 ವರ್ಷಗಳಿಂದ ಶೈತ್ಯೀಕರಿಸಲಾಗಿದ್ದ (ನಿರ್ದಿಷ್ಟ ಉಷ್ಣತೆಯಲ್ಲಿ ಫ್ರೀಜ಼ರ್‌ನಲ್ಲಿ ಇಡಲಾಗಿದ್ದ) ಭ್ರೂಣದಿಂದ ʼವಿಶ್ವದ ಅತ್ಯಂತ ಹಳೆಯ ಅವಳಿ ಮಕ್ಕಳುʼ ಜನಿಸಿದ್ದಾರೆ. ಅಮೆರಿಕದ ಒರೆಗಾನ್ ದಂಪತಿಗೆ ಜನಿಸಿದ ಮಕ್ಕಳು ಈ ಹಿಂದಿನ ದಾಖಲೆ ಮುರಿದಿದ್ದಾರೆ.

ಏಪ್ರಿಲ್ 1992ರಲ್ಲಿ ಶೈತ್ಯೀಕರಿಸಲಾಗಿದ್ದ ಭ್ರೂಣದಿಂದ ಅವಳಿ ಮಕ್ಕಳನ್ನು ಪಡೆಯಲಾಗಿದೆ. ಈ ಹಿಂದಿನ ದಾಖಲೆಯಲ್ಲಿ ಮೊಲ್ಲಿ ಗಿಬ್ಸನ್ ಎಂಬುವರು ಸುಮಾರು 27 ವರ್ಷಗಳ ಕಾಲ ಶೈತ್ಯೀಕರಿಸಿದ ಭ್ರೂಣದಿಂದ 2020ರಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದರು.

ಒರೆಗಾನ್ ದಂಪತಿಗಳ ಅವಳಿ ಮಕ್ಕಳನ್ನು ‘ವಿಶ್ವದ ಅತ್ಯಂತ ಹಳೆಯ ಶಿಶುಗಳು’ ಎಂದು ಕರೆಯಲಾಗಿದ್ದು, ರಾಚೆಲ್ ರಿಡ್ಜ್‌ವೇ ಅಕ್ಟೋಬರ್ 31ರಂದು ಅವಳಿ ಮಕ್ಕಳನ್ನು ಹೆತ್ತಿದ್ದಾರೆ.

ರಾಷ್ಟ್ರೀಯ ಭ್ರೂಣದಾನ ಕೇಂದ್ರವು ಲಿಡಿಯಾ ಮತ್ತು ತಿಮೋತಿ ಎಂದು ಹೆಸರಿಸಲಾದ ಅವಳಿ ಮಕ್ಕಳನ್ನು ಭ್ರೂಣದ ಶೈತ್ಯೀಕರಣದಿಂದ ಜನಿಸಿದ ಅತ್ಯಂತ ಹಳೆಯ ಮಕ್ಕಳು ಎಂದು ಹೇಳಿದೆ. ಜನಿಸಿದಾಗ ಹೆಣ್ಣು ಮಗು ಲಿಡಿಯಾ 5 ಪೌಂಡ್ (2.5 ಕೆಜಿ), ಗಂಡು ಮಗು ತಿಮೋತಿ 6 ಪೌಂಡ್ (2.92 ಕೆಜಿ) ತೂಕ ಇದ್ದರು ಎಂದು ವರದಿಯಾಗಿದೆ.

ಸಾಮಾನ್ಯವಾಗಿ ವಿಟ್ರೊ ಫಲೀಕರಣ -ಐವಿಎಫ್ (ಪ್ರನಾಳ ಶಿಶು - ಟೆಸ್ಟ್‌ ಟ್ಯೂಬ್‌ ಬೇಬಿ) ಮೂಲಕ ಯಶಸ್ವಿಯಾಗಿ ಮಕ್ಕಳನ್ನು ಪಡೆದ ನಂತರ ಉಳಿದ ಹೆಚ್ಚುವರಿ ಭ್ರೂಣಗಳನ್ನು  ಪೋಷಕರು ಭ್ರೂಣದಾನ ಮಾಡಿ ಶೈತ್ಯೀಕರಿಸಲಾಗಿದ್ದು, ಅದರಿಂದ ಶಿಶುಗಳು ಜನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಿಮಗಿದು ಗೊತ್ತೇ? 400 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿದ್ದ ಚೇಳಿನ ಪಳೆಯುಳಿಕೆ ಪತ್ತೆ

30 ವರ್ಷಗಳ ಹಿಂದೆ, ವಿಟ್ರೊ ಫಲೀಕರಣವನ್ನು ಬಳಸಿದ ಅನಾಮಧೇಯ ದಾನಿ ದಂಪತಿಗಳು ದಾನ ಮಾಡಿದ ಭ್ರೂಣವನ್ನು 'ಕ್ರಯೋಪ್ರಿಸರ್ವ್' ಮಾಡಲಾಗಿತ್ತು. ಅಂದರೆ ಭ್ರೂಣಗಳನ್ನು ಏಪ್ರಿಲ್ 22, 1992ರಂದು ಶೈತ್ಯೀಕರಣ ಮಾಡಲಾಗಿತ್ತು. 2007ರವರೆಗೆ 'ವೆಸ್ಟ್ ಕೋಸ್ಟ್ ಫರ್ಟಿಲಿಟಿ ಲ್ಯಾಬ್‌'ನಲ್ಲಿ 'ಕೋಲ್ಡ್ ಸ್ಟೋರೇಜ್‌'ನಲ್ಲಿ ಇರಿಸಲಾಗಿತ್ತು.

ದಂಪತಿ ತಮ್ಮ ಭ್ರೂಣಗಳನ್ನು ರಾಷ್ಟ್ರೀಯ ಭ್ರೂಣ ದಾನ ಕೇಂದ್ರಕ್ಕೆ (ಎನ್ಇಡಿಸಿ) ದಾನ ಮಾಡಿದ್ದರು. ಹದಿನೈದು ವರ್ಷಗಳ ನಂತರ ಭ್ರೂಣದ ಶೈತೀಕರಣದಿಂದ ಲಿಡಿಯಾ ಮತ್ತು ತಿಮೋತಿ ಜನಿಸಿದ್ದಾರೆ.

ಈಗಾಗಲೇ 8, 6, 3 ಹಾಗೂ ಸುಮಾರು 2 ವರ್ಷ ವಯಸ್ಸಿನ ಇತರ ನಾಲ್ಕು ಮಕ್ಕಳನ್ನು ಹೊಂದಿರುವ ರಿಡ್‌ಜ್ವೇ ಅವರು ದಾನ ಮಾಡಿದ ಭ್ರೂಣಗಳನ್ನು ಬಳಸಿ ಹೆಚ್ಚಿನ ಮಕ್ಕಳನ್ನು ಪಡೆಯಲು ನಿರ್ಧರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180