ಅಂಡಮಾನ್‌ ಮತ್ತು ನಿಕೋಬಾರ್ ನಲ್ಲಿ ಭೂಕಂಪ

Accational Photo

ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪ ಸಮೂಹದ ಫೋರ್ಟ್‌ ಬ್ಲೇರ್  ನಲ್ಲಿ ಸುಮಾರು 253 ಕಿ.ಮೀ ದೂರದ ಆಗ್ನೇಯ ದಿಕ್ಕಿನ ಕಡೆಗೆ 4.3 ತಿವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್‌) ಗುರುವಾರ (ನ.10) ತಿಳಿಸಿದೆ. 

ಈ ಬಗ್ಗೆ ಎನ್‌ಸಿಎಸ್‌ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದು  ಬುಧವಾರ (ನ.9) ತಡರಾತ್ರಿ 2.29ರ ವೇಳೆಗೆ ಭೂಮಿ ಕಂಪಿಸಿದೆ ಎಂದು ತಿಳಿಸಿದೆ. 

Eedina App

ಭೂಕಂಪವು ಸುಮಾರು 10 ಕಿ.ಮೀ ಆಳದಲ್ಲಿ ಕೇಂದ್ರಿತವಾಗಿತ್ತು. ಮಂಗಳವಾರ ಮುಂಜಾನೆಯಷ್ಟೇ ನೇಪಾಳ ಮತ್ತು ಉತ್ತರಾಖಂಡ್‌ನಲ್ಲಿ ಭೂಕಂಪ ಸಂಭವಿಸಿತ್ತು.  ದಿಲ್ಲಿ ಮತ್ತು ಸುತ್ತಲಿನ ಪ್ರದೇಶಗಳೂ ಇದರಿಂದ ಕಂಪಿಸಿದ್ದವು.

AV Eye Hospital ad

“ಅಂಡಮಾನ್‌ ಮತ್ತು ನಿಕೋಬಾರ್ ನ  ರಾಜಧಾನಿ ಫ್ಲೋಟ್‌ ಬ್ಲೇರ್ ನಿಂದ 253 ಕಿ.ಮೀ ದೂರದಲ್ಲಿ ಅಕ್ಷಾಂಶ 9.45 ಮತ್ತು ರೇಖಾಂಶ 93.44 ನಡುವೆ ಗುರುವಾರ ನಸುಕಿನ ಜಾವ 2.29ರ ಸುಮಾರಿನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ” ಎಂದು ಎನ್‌ಸಿಎಸ್‌ ಟ್ವೀಟ್‌ನಲ್ಲಿ ಹೇಳಿದೆ. 

ಆದರೆ ಇದುವರೆಗೂ ಯಾವುದೇ ಹಾನಿಯ ವರದಿಯಾಗಿಲ್ಲ. ಬುಧವಾರ ಮಧ್ಯರಾತ್ರಿ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ಉತ್ತರ ಭಾರತ ತತ್ತರಿಸಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app