ತೆಲಂಗಾಣ ಹಾಸ್ಟೆಲ್‌ನಲ್ಲಿ ರ್‍ಯಾಗಿಂಗ್; ಓರ್ವ ವಿದ್ಯಾರ್ಥಿಗೆ 12 ಮಂದಿ ಯುವಕರಿಂದ ಹಲ್ಲೆ

  • ಹಲ್ಲೆ ಮಾಡಿರುವ 12 ವಿದ್ಯಾರ್ಥಿಗಳಲ್ಲಿ ಎಂಟು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು
  • ಪ್ರವಾದಿ ವಿರುದ್ಧ ಹಿಮಾಂಕ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಹಲ್ಲೆ

ತೆಲಂಗಾಣದ ಹೈದರಾಬಾದ್‌ನ ವಸತಿ ನಿಲಯದ ಕೊಠಡಿಯಲ್ಲಿ 12 ಮಂದಿ ಯುವಕರು ಸೇರಿ ಕಾನೂನು ವಿದ್ಯಾರ್ಥಿಯೊಬ್ಬರಿಗೆ ಥಳಿಸಿದ್ದಾರೆ. ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೈದರಾಬಾದ್‌ನ ಐಸಿಎಫ್ಎಐ ಫೌಂಡೇಷನ್ ಫಾರ್ ಹೈಯರ್ ಎಜುಕೇಶನ್‌ನಲ್ಲಿ (ಐಎಫ್‌ಎಚ್ಇ) ಮೂರನೇ ವರ್ಷದ ಕಾನೂನು ವಿದ್ಯಾರ್ಥಿಯಾಗಿರುವ ಹಿಮಾಂಕ್ ಬನ್ಸಾಲ್ ಎಂಬಾತನಿಗೆ ವಸತಿ ನಿಲಯದಲ್ಲಿ ಕಪಾಳಮೋಕ್ಷ ಮಾಡಲಾಗಿದೆ. ಆತನಿಗೆ ಹಲ್ಲೆ ಮಾಡಿ, ಕೈಗಳನ್ನು ತಿರುಚಲಾಗಿದೆ. ರ್‍ಯಾಗಿಂಗ್ ಮಾಡಿದರೆ ಕಠಿಣ ಶಿಕ್ಷೆ ನೀಡಲಾಗುವುದು ಎಂಬ ಅರಿವಿದ್ದರೂ ಹೈದರಾಬಾದ್‌ನ ವಸತಿ ನಿಲಯದ ಕೊಠಡಿಯಲ್ಲಿ ವಿದ್ಯಾರ್ಥಿಗಳ ಗುಂಪು ವಿದ್ಯಾರ್ಥಿಯನ್ನು ಥಳಿಸಿ, ಧರ್ಮದ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿರುವ ಅಮಾನವೀಯ ಕೃತ್ಯ ಜರುಗಿದೆ.  

Eedina App

ವಿಡಿಯೋದಲ್ಲಿ ಯುವಕರು ಥಳಿಸುವುದನ್ನು ನಿಲ್ಲಿಸದ ಕಾರಣ ಆತ ಅವರು ಹೇಳಿದಂತೆ ‘ಜೈ ಮಾತಾ ದಿ’ ಮತ್ತು ‘ಅಲ್ಲಾಹು ಅಕ್ಬರ್’ ಘೋಷಣೆಗಳನ್ನು ಕೂಗಿದ್ದಾರೆ.

ಜೊತೆಗೆ "ಮೊದಲ ದಿನವೇ ಉತ್ತರ ಭಾರತ, ದಕ್ಷಿಣ ಭಾರತ ಎಂದು ಭೇದ ಮಾಡಬೇಡಿ ಎಂದು ಎಲ್ಲರೂ ಹೇಳಿದ್ದರು. ಮತ್ತೆ ನೀವು ತಾರತಮ್ಯ ಮಾಡುತ್ತಿದ್ದೀರಿ" ಎಂದು ಯುವಕನೊಬ್ಬ ಹೇಳುತ್ತಿರುವುದು ಕೇಳಿಬರುತ್ತಿದೆ.

ಈ ಸುದ್ದಿ ಓದಿದ್ದೀರಾ? ಕೇರಳ | ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಸಂಸ್ಕೃತ ಪಾಠ

ಕುಲಸಚಿವರು ಮತ್ತು ನಿರ್ದೇಶಕರು ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ ಐವರಿಗೆ ಪೊಲೀಸರ ಮುಂದೆ ಹಾಜರಾಗುವಂತೆ ಆದೇಶಿಸಲಾಗಿದೆ. 

“ವಿದ್ಯಾರ್ಥಿಯ ಹೊಟ್ಟೆಯ ಭಾಗಕ್ಕೆ ಹೊಡೆದಿದ್ದು, ಆತನ ಖಾಸಗಿ ಅಂಗಗಳನ್ನು ಮುಟ್ಟಿದ್ದಾರೆ. ಕೆಲವು ರಾಸಾಯನಿಕಗಳು ಮತ್ತು ಪುಡಿಗಳನ್ನು ತಿನ್ನುವಂತೆ ಒತ್ತಾಯಿಸಲಾಗಿದೆ. ಆರೋಪಿಗಳು ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಬಟ್ಟೆ ಬಿಚ್ಚಲು ಯತ್ನಿಸಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್ 1ರಂದು ಹಿಮಾಂಕ್ ಅವರು ಪ್ರವಾದಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಿದ ನಂತರ ರ‍್ಯಾಗಿಂಗ್ ನಡೆದಿದೆ. ಸದ್ಯ ಹಲ್ಲೆ ಮಾಡಿರುವ ವಿದ್ಯಾರ್ಥಿಗಳ ವಿರುದ್ಧ ಸಂತಸ್ತ ವಿದ್ಯಾರ್ಥಿ, "ದೈಹಿಕವಾಗಿ ಮತ್ತು ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ" ಎಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಲೆ ಯತ್ನದ ಆರೋಪದ ಮೇಲೆ ಅಪ್ರಾಪ್ತ ವಯಸ್ಕ ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳಲ್ಲಿ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app