ತಮಿಳುನಾಡು | ಸಾವಯವ ಭತ್ತದ ಗೋದಾಮಿಗೆ ಪನಗುಡಿ ರೈತರಿಂದ ಒತ್ತಾಯ

  • ಮಳೆಗಾಲದಲ್ಲಿ ಬೀಜಗಳನ್ನು ತುಂಬಿದ ಚೀಲಗಳಿಗೆ ಹಾನಿ
  • ಭತ್ತದ ಕೊಯ್ಲಿಗೆ ಪ್ರತ್ಯೇಕ ಗೋದಾಮಿಗೆ  ರೈತರಿಂದ ಮನವಿ 

ತಮಿಳುನಾಡಿನ ಪನಗುಡಿ ಜಿಲ್ಲೆಯಲ್ಲಿ ಭತ್ತದ ಕೊಯ್ಲಿಗೆ ಪ್ರತ್ಯೇಕ ಗೋದಾಮು ಮತ್ತು ಪ್ರತ್ಯೇಕ ಖರೀದಿ ಕೇಂದ್ರ ನಿರ್ಮಿಸುವಂತೆ ಆಗ್ರಹಿಸಿ ಪನಗುಡಿಯ ಸಾವಯವ ರೈತರು ಭಾನುವಾರ ರಾಜ್ಯ ಸರ್ಕಾರ ಮತ್ತು ಕೃಷಿ ಇಲಾಖೆಗೆ ಮನವಿ ಸಲ್ಲಿಸಿದರು.

“ಪನಗುಡಿಯ ರೈತರು ಕಳೆದ 10 ವರ್ಷಗಳಿಂದ ಸಾವಯವ ಭತ್ತದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ನಮ್ಮ ಭತ್ತದ ಕೊಯ್ಲು ಸಂಗ್ರಹಿಸಲು ಗೋದಾಮು ವ್ಯವಸ್ಥೆ ಇಲ್ಲ, ಇದರಿಂದಾಗಿ ಬೀಜಗಳನ್ನು ಒಣಗಿಸಲು ಸ್ಥಳಾವಕಾಶ ಇಲ್ಲದೆ ಪ್ರತಿ ವರ್ಷ ಮಳೆಗಾಲದಲ್ಲಿ ಬೀಜಗಳನ್ನು ತುಂಬಿರುವ ಚೀಲಗಳು ಹಾಳಾಗುತ್ತಿವೆ” ಎಂದು ಸಾವಯವ ಕೃಷಿಕ ಮಹೇಶ್ವರನ್ ಹೇಳಿರುವುದಾಗಿ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿಯಲ್ಲಿ ಹೇಳಲಾಗಿದೆ.

ಈ ಸುದ್ದಿ ಓದಿದ್ದೀರಾ ? ಆಹಾರ ಬಿಕ್ಕಟ್ಟು | ಜೀವನೋಪಾಯಕ್ಕಾಗಿ ಗುಳೇ ಹೊರಟಿರುವ ಮಧ್ಯಪ್ರದೇಶದ ಆದಿವಾಸಿಗಳು

ಸಾವಯವ ಕೃಷಿ ಬೀಜಗಳನ್ನು ಸಾಂಪ್ರದಾಯಿಕವಾಗಿ ಸಂಸ್ಕರಿಸಬೇಕು ಮತ್ತು ಈಗಿರುವ ಅಕ್ಕಿ ಗಿರಣಿಗಳಲ್ಲಿ ಅಥವಾ ಗೋದಾಮುಗಳಲ್ಲಿ ಸಂಸ್ಕರಣಾ ಪ್ರಕ್ರಿಯೆಗಳನ್ನು ನಡೆಸಿದರೆ, ಜನರು ರಸಗೊಬ್ಬರಗಳೊಂದಿಗೆ ಕೃಷಿಗೆ ಮರಳುವುದರಿಂದ ಸಾವಯವ ಕೃಷಿಯ ಅಗತ್ಯ ಬೀಳುವುದಿಲ್ಲ ಎಂದು ಅವರು ಹೇಳಿದರು.

ರೈತರ ಕಲ್ಯಾಣಕ್ಕಾಗಿ ಭತ್ತದ ಸಾವಯವ ಕೃಷಿಗೆ ಗೋದಾಮುಗಳನ್ನು ತೆರೆಯಲು ರಾಜ್ಯ ಸರ್ಕಾರ ಮತ್ತು ಕೃಷಿ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್