ಬೆಂಗಳೂರು | ಹೈಕೋರ್ಟ್‌ನಲ್ಲಿ ಬಿಬಿಎಂಪಿ ವಾರ್ಡ್‌ ವಿಂಗಡಣೆ ಕುರಿತ ಅರ್ಜಿ ಇಂದು ವಿಚಾರಣೆ

  • ವಾರ್ಡ್ ಮೀಸಲಾತಿ ಕರಡು ಪಟ್ಟಿಗೆ ನೀಡಿದ್ದ ಮೌಖಿಕ ತಡೆ ಇಂದಿಗೆ ಅಂತ್ಯ
  • ಮೀಸಲಾತಿ ಪಟ್ಟಿಗೆ ಅನುಮತಿ ಕೊಟ್ಟರೆ ಇನ್ನೊಂದು ವಾರದಲ್ಲಿ ಪ್ರಕಟ

ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಇಂದು (ಮಂಗಳವಾರ) ಹೈಕೋರ್ಟ್‌ನಲ್ಲಿ ನಡೆಯಲಿದೆ.

ವಾರ್ಡ್ ಮೀಸಲಾತಿ ಕರಡು ಪಟ್ಟಿಗೆ ಮೌಖಿಕವಾಗಿ ನೀಡಲಾಗಿದ್ದ ತಡೆ ಇಂದಿಗೆ ಅಂತ್ಯವಾಗಲಿದೆ. ಇಂದೇ ಮೀಸಲಾತಿ ಪಟ್ಟಿ ಪ್ರಕಟಕ್ಕೆ ನ್ಯಾಯಾಲಯ ಅನುಮತಿ ನೀಡುವ ಸಾಧ್ಯತೆಯಿದೆ.

ಬಿಬಿಎಂಪಿಯ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ಪರಿವರ್ತಿಸುವ ವೇಳೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳನ್ನು ಅವೈಜ್ಞಾನಿಕವಾಗಿ ವಿಂಗಡಿಸಲಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್ ನೀಡಿತ್ತು. ಅಲ್ಲದೆ, ವಾರ್ಡ್ ಮೀಸಲಾತಿ ಕುರಿತಂತೆ ಆಗಸ್ಟ್ 16ರವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಂತೆ ಮೌಖಿಕ ಆದೇಶ ನೀಡಿತ್ತು. ಈ ಆದೇಶ ಇಂದಿಗೆ ಮುಕ್ತಾಯವಾಗಲಿದೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು |‌ ಧ್ವಜ ಕಟ್ಟಲು ಟೆರೇಸ್‌ ಹತ್ತಿದ್ದ ಯುವಕ ಕೆಳಗೆ ಬಿದ್ದು ಸಾವು

ಒಂದು ವೇಳೆ ಮೀಸಲಾತಿ ಪ್ರಕಟಣೆಗೆ ನ್ಯಾಯಾಲಯ ಅನುಮತಿ ಕೊಟ್ಟರೆ ಇನ್ನೊಂದು ವಾರದಲ್ಲಿ ಅಂತಿಮ ಪಟ್ಟಿ ಪ್ರಕಟವಾಗಲಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್