ಬೆಂಗಳೂರು | ಮಾಜಿ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ಗೂ ರೈತ ಸಂಘಕ್ಕೂ ಸಂಬಂಧವಿಲ್ಲ; ಎಚ್‌ ಆರ್‌ ಬಸವರಾಜಪ್ಪ ಹೇಳಿಕೆ

RAITH MUKHANDA BASAVARAJ

ಕೋಟ್ಯಂತರ ಅವ್ಯವಹಾರ‌ ಆರೋಪ ಎದುರಿಸುತ್ತಿರುವ ರೈತ ಸಂಘ ಮತ್ತು ಹಸಿರು ಸೇನೆಯ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೂ ರೈತ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್‌ ಆರ್‌ ಬಸವರಾಜಪ್ಪ ಸ್ಪಷ್ಟಪಡಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ರಾಜ್ಯ ರೈತ ಸಂಘದ ರಾಜ್ಯ ಸಮಿತಿ 'ರಾಜ್ಯಾಧ್ಯಕ್ಷ' ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಬುಧವಾರ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಧ್ಯ ರೈತ ಸಂಘಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಹಾಗೊಮ್ಮೆ ಸಂಘದಲ್ಲಿ ಪುನಃ ಗುರುತಿಸಿಕೊಳ್ಳಬೇಕು, ಹಸಿರು ವಸ್ತ್ರ ಧರಿಸಿ ಓಡಾಡುವ ಅರ್ಹತೆ ಪಡೆಯಬೇಕಾದರೆ ತಮ್ಮ ವಿರುದ್ಧದ ಆರೋಪಗಳಿಂದ ಮುಕ್ತರಾಗಬೇಕು ಎಂದರು.

ಈ ಸುದ್ದಿ ಓದಿದ್ದೀರಾ:? ಕೋಡಿಹಳ್ಳಿ ಚಂದ್ರಶೇಖರ್‌| ಪರ್ಯಾಯ ರಾಜಕೀಯ ನಡೆಯ ತೀರ್ಮಾನ

ತಮ್ಮ ಅವಧಿಯಲ್ಲಿ ರೈತ ಸಂಘದ ಎಲ್ಲ ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಪ್ರಸ್ತುತ ಓಡಾಡುತ್ತಿರುವ ಕಾರು, ವಾಸವಿರುವ ನಿವಾಸದ ಕುರಿತ ಸಮರ್ಪಕ ದಾಖಲೆ ಹಾಜರುಪಡಿಸಬೇಕು. ರೈತ ಸಂಘದ ಕೇಂದ್ರ ಕಚೇರಿ ಮತ್ತು ಸಮಾವೇಶಗಳಿಗೆ ಸಂಗ್ರಹವಾಗುತ್ತಿದ್ದ ಹಣದ ಮೂಲವನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.

ಸಾಲಮನ್ನಾ ಹೆಸರಿನಲ್ಲಿ ರಾಜ್ಯದ 21 ಜಿಲ್ಲೆಗಳಲ್ಲಿ ನಡೆಸಿದ ಅರ್ಜಿ ಚಳವಳಿಯಲ್ಲಿ ಸಂಗ್ರಹಗೊಂಡ ಹಣ ಏನಾಯಿತು ಎಂಬ ಬಗ್ಗೆ ಎಲ್ಲರಿಗೂ ಬಹಿರಂಗವಾಗಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ರೈತಮುಖಂಡರಾದ  ಈಚಘಟ್ಟದ ಸಿದ್ದವೀರಪ್ಪ, ಚನ್ನಪ್ಪ ಪೂಜಾರಿ, ಅಬ್ಬಣಿ ಶಿವಪ್ಪ, ನಜೀರ್‌ಸಾಬ್‌ ಮೂಲಿಮನಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್