ಬಿಬಿಎಂಪಿ | ದೋಷಪೂರಿತ ರಾಷ್ಟ್ರಧ್ವಜ ಮಾರಾಟ ಮಾಡಬೇಡಿ: ವಿಶೇಷ ಆಯುಕ್ತ ರಂಗಪ್ಪ

polyester flag
  • ಬಿಬಿಎಂಪಿಯು 10 ಲಕ್ಷ ರಾಷ್ಟ್ರಧ್ವಜಗಳನ್ನು ನಾಗರಿಕರಿಗೆ ವಿತರಿಸುತ್ತಿದೆ
  • ಆಗಸ್ಟ್ 13 ರಿಂದ 15ರವರೆಗೆ ‘ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ’ ಅಭಿಯಾನ

‘ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ’ ಅಭಿಯಾನದ ಸಲುವಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ರಿವರ್ಣ ಧ್ವಜಗಳನ್ನು ಜನರಿಗೆ ವಿತರಣೆ ಮಾಡುತ್ತಿದೆ. ಅವುಗಳಲ್ಲಿ ಲೋಪದೋಷ ಕಂಡು ಬಂದಲ್ಲಿ ಹಿಂದುರಿಗಿಸಬೇಕೆಂದು ನಾಗರಿಕರಿಗೆ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಸೂಚನೆ ನೀಡಿದ್ದಾರೆ.

ದೋಷಪೂರಿತ ರಾಷ್ಟ್ರಧ್ವಜಗಳನ್ನು ಯಾರಿಗೂ ಮಾರಾಟ ಮಾಡಬಾರದು ಎಂದು ಬಿಬಿಎಂಪಿ ಸಿಬ್ಬಂದಿಗೆ ರಂಗಪ್ಪ ಸೂಚನೆ ನೀಡಿದ್ದಾರೆ. 

ದೊಷ ಪೂರಿತ ತ್ರಿವರ್ಣ ಧ್ವಜವನ್ನು ನಾಗರಿಕರು ಪಡೆದಿದ್ದರೆ, ಅಂತಹ ರಾಷ್ಟ್ರ ಧ್ವಜವನ್ನು ನಾಗರಿಕರು ಬಿಬಿಎಂಪಿಯ ಯಾವುದೇ ಕಚೇರಿಗಳಲ್ಲಿ ಹಿಂದಿರಿಗಿಸಬಹುದೆಂದು ತಿಳಿಸಿದ್ದಾರೆ. 

ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ, ‘ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ’ ಅಭಿಯಾನವನ್ನು ಆಗಸ್ಟ್‌ 13ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ದಿನಗಳಂದು ಎಲ್ಲ ಮನೆಗಳು, ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಆರೋಹಣ ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ನೀಡಿತ್ತು.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ವಾರ್ಡ್‌ವಾರು ಮೀಸಲಾತಿಗೆ ತೀವ್ರ ಆಕ್ಷೇಪ; ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ

"ಅಭಿಯಾನದ ಭಾಗವಾಗಿ ಬಿಬಿಎಂಪಿಯು 10 ಲಕ್ಷ ರಾಷ್ಟ್ರಧ್ವಜಗಳನ್ನು ನಾಗರಿಕರಿಗೆ ವಿತರಿಸುವ ಕಾರ್ಯವನ್ನು ಈಗಾಗಲೇ ಕೈಗೊಂಡಿದೆ. ವಲಯದ ಜಂಟಿ ಆಯುಕ್ತರ ಕಚೇರಿ, ವಾರ್ಡ್‌ ಕಚೇರಿಗಳು, ಪ್ರಮುಖ ಜನನಿಬಿಡ ಪ್ರದೇಶಗಳು, ಮಾಲ್‌ಗಳಲ್ಲಿ ರಾಷ್ಟ್ರಧ್ವಜಗಳನ್ನು ವಿತರಿಸಲಾಗುತ್ತಿದೆ" ಎಂದು ಬಿಬಿಎಂಪಿ ವಿಶೇಷ ಆಯುಕ್ತರು ಹೇಳಿದ್ದಾರೆ.

ತ್ರಿವರ್ಣಧ್ವಜ ಪಡೆಯುವ ಮುನ್ನ ಅವುಗಳನ್ನು ಪರಿಶೀಲಿಸಿ, ಧ್ವಜಕ್ಕೆ ಬಳಕೆಯಾಗಿರುವ ಬಟ್ಟೆಯಲ್ಲಿ ಯಾವುದೇ ಲೋಪ ಇಲ್ಲದಿರುವುದು ಖಚಿತವಾದ ನಂತರ ಅದನ್ನು ಬಳಸಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್