ಅಫ್ಘಾನಿಸ್ತಾನದಲ್ಲಿ ಮತ್ತೆ ಬಾಂಬ್ ದಾಳಿ; ತಾಲಿಬಾನ್‌ನ ಗುರು ರಹೀಮುಲ್ಲಾ ಹಕ್ಕಾನಿ ಸಾವು

  • ಕೃತಕ ಪ್ಲಾಸ್ಟಿಕ್ ಕಾಲಿನಲ್ಲಿ ಸ್ಫೋಟಕಗಳನ್ನು ಅಡಗಿಸಿಟ್ಟಿದ್ದ ಹಂತಕ
  • ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ

ಅಫ್ಘಾನಿಸ್ತಾನದಲ್ಲಿ ಬಾಂಬ್ ದಾಳಿ ನಡೆದಿದ್ದು, ತಾಲಿಬಾನ್‌ನ ಗುರು ಶೇಖ್ ರಹೀಮುಲ್ಲಾ ಹಕ್ಕಾನಿ ಬಾಂಬ್‌ ದಾಳಿಯಲ್ಲಿ ಹತರಾಗಿದ್ದಾರೆ ಎಂದು ವರದಿಯಾಗಿದೆ.

ಬಾಂಬ್‌ ದಾಳಿ ನಡೆಸಿ ಧಾರ್ಮಿಕ ಕೇಂದ್ರದಲ್ಲೇ  ಹಕ್ಕಾನಿ ಹತ್ಯೆ ಮಾಡಲಾಗಿದೆ ಎಂದು ತಾಲಿಬಾನ್‌ ಸಹ ವಕ್ತಾರ ಬಿಲಾಲ್‌ ಕರೀಮಿ ಮಾಹಿತಿ ನೀಡಿದ್ದಾರೆ. ಅದರೆ ಈ ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ. 

ದಾಳಿ ಮಾಡಿದ ವ್ಯಕ್ತಿ ಈ ಮೊದಲು ತನ್ನ ಕಾಲು ಕಳೆದುಕೊಂಡಿದ್ದ ಮತ್ತು ಕೃತಕ ಪ್ಲಾಸ್ಟಿಕ್ ಕಾಲಿನಲ್ಲಿ ಸ್ಫೋಟಕಗಳನ್ನು ತನ್ನ‌ ಬಳಿ ಅಡಗಿಸಿಟ್ಟಿದ್ದ ಎಂದು ತಾಲಿಬಾನ್ ಮೂಲಗಳು ಹೇಳಿವೆ.

"ದಾಳಿ‌ ಮಾಡಿದ ವ್ಯಕ್ತಿ ಯಾರು ಮತ್ತು ಶೇಖ್ ರಹೀಮುಲ್ಲಾ ಹಕ್ಕಾನಿಯ ಕಚೇರಿಯನ್ನು ಪ್ರವೇಶಿಸಲು ಈ ಪ್ರಮುಖ ಸ್ಥಳಕ್ಕೆ ಕರೆತಂದವರು ಯಾರು ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ಗೆ ಧರ್ಮ ಗುರುವಿನ ‌ಹತ್ಯೆ ದೊಡ್ಡ ನಷ್ಟವಾಗಿದೆ" ಎಂದು ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯದ ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಕ್ಕಾನಿ ತಾಲಿಬಾನಿಗಳ ಪ್ರಮುಖ ಧರ್ಮಗುರುಗಳಾಗಿದ್ದರು. ಏಳು ಜನರು ಸಾವಿಗೀಡಾಗಿದ್ದ 2020ರ ಉತ್ತರ ಪಾಕಿಸ್ತಾನದ ನಗರವಾದ ಪೇಶಾವರದಲ್ಲಿ ನಡೆದ ದೊಡ್ಡ ಸ್ಫೋಟ ಸೇರಿದಂತೆ ಈ ಹಿಂದೆ ನಡೆದಿದ್ದ ಹಲವು ಬಾಂಬ್ ದಾಳಿಗಳಿಂದ‌‌‌ ಪಾರಾಗಿದ್ದರು. 

ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೆರಿಕ ತನ್ನ‌‌ ಸೇನಾ ಪಡೆ‌ಗಳನ್ನು ಹಿಂತೆಗೆದುಕೊಂಡ ನಂತರ ಅಲ್ಲಸಂಖ್ಯಾತರು ಮತ್ತು‌ ಧರ್ಮ ಗುರುಗಳು‌ ಮುಂತಾದವರನ್ನುಗುರಿಯಾಗಿಸಿಕೊಂಡು, ಇಸ್ಲಾಮಿಕ್ ಸ್ಟೇಟ್ ಸಂಘಟನೆ ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್