ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಪಿಒ ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಪ್ರವೇಶಾತಿ: ಆನ್‌ಲೈನ್ ನೋಂದಣಿ ದಿನಾಂಕ ವಿಸ್ತರಣೆ

  • ಆನ್‌ಲೈನ್ ನೋಂದಣಿ ದಿನಾಂಕ ವಿಸ್ತರಣೆ ಬಗ್ಗೆ ಮಾಹಿತಿ ನೀಡಿದ ಕೆಇಎ
  • 2022ನೇ ಸಾಲಿನ ಸರ್ಕಾರಿ ಕೋಟಾದ ಮೊದಲನೇ ವರ್ಷದ ಕೋರ್ಸ್‌ಗಳಿಗೆ ನೋಂದಣಿ

2022ನೇ ಸಾಲಿನ ಸರ್ಕಾರಿ ಕೋಟಾದ ಮೊದಲನೇ ವರ್ಷದ ಬಿಎಸ್ಸಿ ನರ್ಸಿಂಗ್, ಬಿ.ಪಿ.ಟಿ (ಬ್ಯಾಚಲರ್ ಆಫ್ ಪಿಸಿಯೋಥೆರಪಿ) ಬಿ.ಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಬಿಪಿಒ (ಬ್ಯಾಚುಲರ್ ಆಫ್ ಪ್ರೊಸ್ತೊಟಿಕ್ಸ್ ಆಂಡ್ ಆರ್ಥೊಟಿಕ್ಸ್) ಕೋರ್ಸುಗಳ ಪ್ರವೇಶಾತಿಗೆ ಆನ್‌ಲೈನ್ ಅರ್ಜಿ ಮತ್ತು ನೋಂದಣಿಯ ದಿನಾಂಕವನ್ನು‌ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿಸ್ತರಿಸಿದೆ.

ಈ ಹಿಂದೆ ಸೆಪ್ಟೆಂಬರ್ 19 ಆನ್‌ಲೈನ್ ಅರ್ಜಿ ತುಂಬಿಸಲು ಕೊನೆಯ ದಿನವಾಗಿ ಘೋಷಿಸಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರಡಿಸಿರುವ ಹೊಸ ಪ್ರಕಟಣೆಯಂತೆ, ಆಸಕ್ತ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 23ರ ಮಧ್ಯಾಹ್ನ‌ 12ರ ಒಳಗಾಗಿ ಅರ್ಜಿ ತುಂಬಿಸಿ, ಮಧ್ಯಾಹ್ನ 2ರ ಒಳಗಾಗಿ ಅರ್ಜಿ ಶುಲ್ಕ ಪಾವತಿಸಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.

ಈ ಸುದ್ದಿ ಓದಿದ್ದೀರಾ? ಜಾತಿ ನಿಂದನೆ ಆರೋಪ| ಪಿರಿಯಾಪಟ್ಟಣ ಬಿಇಒ ವಿರುದ್ದ ಪ್ರಕರಣ ದಾಖಲು

ಹೆಚ್ಚಿನ ವಿವರಗಳು ಪ್ರಾಧಿಕಾರದ ವೆಬ್ ಸೈಟ್ kea.kar.nic.in ನಿಂದ ಪಡೆಯಬಹುದಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್