ಮಹಾರಾಷ್ಟ್ರ | ಕಂದಕಕ್ಕೆ ಉರುಳಿದ ಬಸ್ಸು, ಮೂವರ ಸಾವು ಹಲವರಿಗೆ ಗಾಯ

  • ಮಹಾರಾಷ್ಟ್ರದ ರಾಯುಗಢ ಬಳಿ ಕಂದಕಕ್ಕೆ ಉರುಳಿದ ಬಸ್ಸು
  • ಘೋನ್ಸೆ ಗ್ರಾಮದಲ್ಲಿರುವ 50ರಿಂದ 60 ಅಡಿ ಆಳದ ಕಂದಕ

ಚಲಿಸುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು, 3 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದ ರಾಯುಗಢ ಜಿಲ್ಲೆಯ ಮೆಸ್ಲಾ ತೆಲಸಿಯ ಸಮೀಪ ಭಾನುವಾರ ಸಂಭವಿಸಿದೆ. ದುರಂತದಲ್ಲಿ ಹಲವರು  ಗಾಯಗೊಂಡಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಥಾಣೆಯಿಂದ 35 ಪ್ರಯಾಣಿಕರನ್ನು ಹೊತ್ತು ಸಮಾರಂಭವೊಂದರಲ್ಲಿ ಭಾಗವಹಿಸಲು ಶಿವವರ್ಧನ್ ಗ್ರಾಮದ ಕಡೆಗೆ ತೆರಳಿದ ಬಸ್ಸು ಘೋನ್ಸೆ ಗ್ರಾಮದಲ್ಲಿ 50ರಿಂದ 60 ಅಡಿ ಆಳದ ಕಂದಕಕ್ಕೆ ಉರುಳಿದೆ.

ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ. 

ಕರ್ನಾಟಕದಲ್ಲೂ ಬಸ್ ಅವಘಡದಲ್ಲಿ ಹಲವರು ಸಾವನ್ನಪ್ಪಿರುವ ಪ್ರಕರಣಗಳನ್ನು ಇತ್ತೀಚೆಗೆ ನೋಡಿದ್ದೇವೆ. ಇದೇ ವರ್ಷ ಮಾರ್ಚ್‌ನಲ್ಲಿ ಚಾಲಕನ ನಿರ್ಲಕ್ಷ್ಯದಿಂದ  ಬಸ್ ಒಂದು ಪಲ್ಟಿಯಾಗಿ ನಾಲ್ವರು ಪ್ರಯಾಣಿಕರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಬಳಿ ನಡೆದಿದೆ. ವೈ ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಸಾಗುತ್ತಿದ್ದ ಈ ಬಸ್‌ನಲ್ಲಿ 130ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಏಪ್ರಿಲ್‌ನಲ್ಲಿ ಹುಬ್ಬಳ್ಳಿಯ ಶಿರಗುಪ್ಪಿಯಲ್ಲಿ ವೋಲ್ವೋ ಬಸ್ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್