ರಾಜ್ಯಪಾಲರ ಹೆಸರಲ್ಲಿ ವಂಚಿಸುತ್ತಿದ್ದ ಬಳ್ಳಾರಿ ಮೂಲದ ವ್ಯಕ್ತಿಯನ್ನು ಬಂಧಿಸಿದ ಸಿಸಿಬಿ

ccb
  • ಕೋವಿಡ್‌ ಸಮಯದಲ್ಲಿ ಉದ್ಯೋಗ ಕಳೆದುಕೊಂಡಿದ್ದ ಆರೋಪಿ
  • ಹಣ ಸಂಪಾದನೆಗಾಗಿ ರಾಜ್ಯಪಾಲರ ಹೆಸರಲ್ಲಿ ನಾನಾ ವಂಚನೆ

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌ ಅವರ ಹೆಚ್ಚುವರಿ ಕಾರ್ಯದರ್ಶಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಬಳ್ಳಾರಿ ಮೂಲದ ಸದ್ರುಲ್ಲಾ ಖಾನ್‌ ಎನ್ನುವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿಯಿಂದ ನಕಲಿ ಗುರುತಿನ ಚೀಟಿ ಸೇರಿ ವಿವಿಧ ದಾಖಲೆಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್ ಅವರು ಆರೋಪಿ ವಿರುದ್ಧ ಜುಲೈ 29ರಂದು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು.‌

ಈ ಸುದ್ದಿ ಓದಿದ್ದೀರಾ?: ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದು ಕ್ಯಾನ್ಸರ್‌ಗಿಂತಲೂ ಗಂಭೀರ: ನ್ಯಾಯಮೂರ್ತಿ ಕೆ ನಟರಾಜನ್

ಆರೋಪಿ ಸದ್ರುಲ್ಲಾ ಖಾನ್, ಬಳ್ಳಾರಿಯಲ್ಲಿ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದ. ಆದರೆ, ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಟ್ಯೂಷನ್‌ ಬಂದ್ ಮಾಡಿದ್ದರಿಂದ ಹಣಕಾಸಿನ ತೊಂದರೆ ಎದುರಾಗಿತ್ತು. ಹಾಗಾಗಿ, ರಾಜ್ಯಪಾಲರ ಹೆಸರಿನಲ್ಲಿ ವಂಚನೆಗೆ ಇಳಿದಿದ್ದ ಎಂದು ತಿಳಿದುಬಂದಿದೆ. 

ಈತ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಹಲವಾರು ಜನರ ಬಳಿ ಹಣ ಪಡೆದು ವಂಚಿಸಿದ್ದ ಎನ್ನಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್