ತೀವ್ರ ಟೀಕೆ, ಪ್ರತಿಭಟನೆ ನಂತರ ಮುಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಏರಿಸಿದ ಕೇಂದ್ರ

MSP
  • ಮುಂಗಾರು ಹಾಗೂ ಭತ್ತದ ಬೆಳೆಗಳಿಗೆ ಶೇ. 9ರಷ್ಟು ಬೆಂಬಲ ಬೆಲೆ
  • ಬೆಂಬಲ ಬೆಲೆ ಏರಿಕೆಗೆ ದೇಶಾದ್ಯಂತ ನಡೆದಿದ್ದ ಪ್ರತಿಭಟನೆ

ಭಾರಿ ಟೀಕೆಗಳು, ಪ್ರತಿಭಟನೆಗಳ ನಂತರ ಕೇಂದ್ರ ಸರ್ಕಾರ ಮುಂಗಾರು (ಬೇಸಿಗೆ) ಬೆಳೆಗಳಿಗೆ ಶೇ 4-9 ರಷ್ಟು ಬೆಂಬಲ ಬೆಲೆ ಹೆಚ್ಚಿಸಿದೆ. ಇದರಿಂದ ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) 100 ರೂಪಾಯಿ ಹೆಚ್ಚಿದಂತಾಗಿದೆ. 

ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ಸಭೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್ ಈ ನಿರ್ಧಾರ ಪ್ರಕಟಿಸಿದರು. 

14 ಮುಂಗಾರು ಬೆಳೆಗಳ ಬೆಂಬಲ ಬೆಲೆ ಮತ್ತು ಅವುಗಳ ವಿಧಗಳನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. 

ಈ ಸುದ್ದಿ ಓದಿದ್ದೀರಾ? ಲಾಕಪ್‌ ಡೆತ್‌ ಪ್ರಕರಣ: 10 ಲಕ್ಷ ರೂ ಪರಿಹಾರಕ್ಕೆ ತ್ರಿಪುರಾ ಹೈಕೋರ್ಟ್ ಆದೇಶ 

ಕಳೆದ  ವರ್ಷ ಕ್ವಿಂಟಲ್‌ಗೆ 940 ರೂಪಾಯಿ ಇದ್ದ ಸಾಮಾನ್ಯ ವಿಧದ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 2022-23ನೇ ಸಾಲಿಗೆ ಅನ್ವಯವಾಗುವಂತೆ 2,040 ರೂಪಾಯಿಗೆ ಹೆಚ್ಚಿಸಲಾಗಿದೆ . ಎ ಶ್ರೇಣಿಯ ಭತ್ತದ ವಿಧದ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 1,960 ರೂಪಾಯಿನಿಂದ 2,060 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಬೆಂಬಲ ಬೆಲೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ

2022-23ರ ಸಾಲಿಗೆ ಮುಂಗಾರು ಬೆಳೆಗಳಿಗೆ ಕೇಂದ್ರ ಸರ್ಕಾರ ಇತ್ತೀಚಿಗೆ ಕೇವಲ ಶೇ. 7ರಷ್ಟು ಕನಿಷ್ಠ ಬೆಂಬಲ ಬೆಲೆ ಏರಿಸಿತ್ತು. ಆರ್ಥಿಕತೆಯ ಸಾಮಾನ್ಯ ಹಣದುಬ್ಬರವನ್ನು ಸರಿದೂಗಿಸಲು ಕೇಂದ್ರ ಬಹುತೇಕ ಬೆಳೆಗಳಿಗೆ ಅತ್ಯಲ್ಪ ಪ್ರಮಾಣದ ಬೆಂಬಲ ಬೆಲೆ ಏರಿಸಿತ್ತು. ಇದರಿಂದ ದೇಶದಾದ್ಯಂತ ರೈತರು ಪ್ರತಿಭಟನೆ ನಡೆಸಿದ್ದರು. 

ಇಂಧನ ಮತ್ತು ಇತರ ವಸ್ತುಗಳ ಬೆಲೆ ಹೆಚ್ಚಳ ಹಾಗೂ ಬೆಲೆ ಏರಿಕೆಯಿಂದ ಗೊಬ್ಬರದ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದರಿಂದ ಬೆಂಬಲ ಬೆಲೆಯಲ್ಲಿ ಹೆಚ್ಚಳ ಮಾಡುವುದು ರೈತರಿಗೆ ಅಗತ್ಯವಾಗಿತ್ತು. ಕಳೆದ ಮುಂಗಾರಿನಲ್ಲಿಯೂ ರೈತರು ಈ ಸಮಸ್ಯೆ ಅನುಭವಿಸಿದ್ದರು. 

ದೇಶದಾದ್ಯಂತ ಜೈ ಕಿಸಾನ್‌ ಆಂದೋಲನ, ಕೋಲ್ಕತ್ತದ ಆಲ್‌ ಇಂಡಿಯಾ ಫಾರ್ಮರ್ಸ್ ಆರ್ಗನೈಸೇಷನ್‌, ಭಾರತೀಯ ಕಿಸಾನ್‌ ಮೋರ್ಚಾ ಸೇರಿದಂತೆ ಅನೇಕ ರೈತ ಸಂಘಟನೆಗಳು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದವು. 

ನಿಮಗೆ ಏನು ಅನ್ನಿಸ್ತು?
0 ವೋಟ್