ಛತ್ತೀಸ್‌ಘಡ್| ಆದಿವಾಸಿಗಳ ಒಪ್ಪಿಗೆ ಇಲ್ಲದೆಯು ಕಾಡು ಕಡಿಯಲು ನಿಯಮ ಜಾರಿ

  • ಹೊಸ ನಿಯಮಗಳನ್ನು ರೂಪಿಸಿರುವ ಕೇಂದ್ರ ಸರ್ಕಾರ
  • ಆದಿವಾಸಿಗಳ ಅರಣ್ಯ ಹಕ್ಕು ಕಾಯ್ದೆಗೆ ವಿರುದ್ಧವಾಗಿ ತಿದ್ದುಪಡಿ

ಆದಿವಾಸಿ ಬುಡಕಟ್ಟು ಸಮುದಾಯದ ಒಪ್ಪಿಗೆ ಪಡೆಯದೆ ಖಾಸಗಿ ಡೆವಲಪರ್‌ಗಳಿಗೆ ಕಾಡಿನ ಮರಗಳನ್ನು ಕಡಿಯಲು ಅವಕಾಶ ನೀಡಲು ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ರೂಪಿಸಿದೆ.

ಆದಿವಾಸಿಗಳ ಸಾಂಪ್ರದಾಯಿಕ ಅರಣ್ಯ ಭೂಮಿಗೆ ಅವರ ಹಕ್ಕುಗಳನ್ನು ಗುರುತಿಸಲಾಗಿದೆ ಮತ್ತು ಅವರ ಅರಣ್ಯಗಳನ್ನು ಕಡಿಯುವ ಮೊದಲು ಅವರ ಒಪ್ಪಿಗೆ ತೆಗೆದುಕೊಳ್ಳಬೇಕಿತ್ತು. ಜೂನ್ 28ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅರಣ್ಯ ಸಂರಕ್ಷಣಾ ನಿಯಮಗಳು - 2022 ಅನ್ನು ರಾಜ್ಯ ಸರ್ಕಾರಗಳ ಮೇಲೆ ವರ್ಗಾಯಿಸಲು ಸೂಚಿಸಿದೆ.

ಆದಿವಾಸಿಗಳ ಜತೆಗೆ ಸಮಾಲೋಚಿಸದೆ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಲು ಹೊಸ ನಿಯಮವು ಕೇಂದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಡುತ್ತದೆ. ಬುಡಕಟ್ಟು ಮತ್ತು ಇತರ ಸಮುದಾಯಗಳಿಂದ ಒಪ್ಪಿಗೆ ಪಡೆಯಲು ಸಂಬಂಧಪಟ್ಟ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.

ಈ ಹಿಂದೆ, ಅರಣ್ಯ ಭೂಮಿಯನ್ನು ಖಾಸಗಿ ಯೋಜನೆಗಳಿಗೆ ಹಸ್ತಾಂತರಿಸುವ ಮೊದಲು ಆದಿವಾಸಿಗಳ ಒಪ್ಪಿಗೆ ಪಡೆದು ಮತ್ತು ಅರಣ್ಯ ಭೂಮಿಯ ಮೇಲಿನ ಅವರ ಹಕ್ಕುಗಳ ಮಾನ್ಯತೆ ಖಚಿತಪಡಿಸಿಕೊಳ್ಳಬೇಕಿತ್ತು. ಈಗ, ಅರಣ್ಯದ ಹಸ್ತಾಂತರವನ್ನು ಕೇಂದ್ರ ಸರ್ಕಾರ ಅನುಮೋದಿಸಬಹುದು. ರಾಜ್ಯ ಸರ್ಕಾರವು ಆದಿವಾಸಿಗಳ ಹಕ್ಕುಗಳನ್ನು ಇತ್ಯರ್ಥಪಡಿಸುವ ಮತ್ತು ಒಪ್ಪಿಗೆ ಪಡೆಯುವ ಮೊದಲೇ ಖಾಸಗಿ ಡೆವಲಪರ್‍‌ನಿಂದ ಪರಿಹಾರದ ಮೊತ್ತ ಸಂಗ್ರಹಿಸಬಹುದು.

ಈ ತಿದ್ದುಪಡಿಯು ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಆದಿವಾಸಿಗಳ ಅರಣ್ಯ ಹಕ್ಕು ಕಾಯ್ದೆಗೆ ವಿರುದ್ಧವಾಗಿದೆ. 2006ರ ಕಾನೂನಿನ ಅನ್ವಯ ಸರ್ಕಾರಗಳು ಆದಿವಾಸಿಗಳ ಸಾಂಪ್ರದಾಯಿಕ ಭೂಮಿಯಲ್ಲಿ ಯೋಜನೆಗಳಿಗೆ ಅನುಮತಿ ನೀಡುವ ಮೊದಲು ಆದಿವಾಸಿಗಳಿಂದ ಒಪ್ಪಿಗೆ ಪಡೆಯಬೇಕು.

ಹೊಸ ನಿಯಮಗಳು ಪ್ರಾರಂಭವಾಗುವವರೆಗೆ ಅರಣ್ಯ ಸಂರಕ್ಷಣಾ ಕಾಯಿದೆ 1980ರ ಅಡಿಯಲ್ಲಿ ಕಾಡು ಕಡಿಯುವುದನ್ನು ನಿರ್ಣಯಿಸುವುದು ಮತ್ತು ಅನುಮೋದಿಸುವುದು ಅರಣ್ಯ ಸಚಿವಾಲಯದ ಕೆಲಸವಾಗಿತ್ತು. ಯೋಜನೆಗೆ ಅಗತ್ಯವಿರುವ ಭೂಮಿ ನಿರ್ದಿಷ್ಟ ಗಾತ್ರಕ್ಕಿಂತ ಹೆಚ್ಚಿದ್ದರೆ ರಾಜ್ಯವು ತನ್ನ ಶಿಫಾರಸುಗಳೊಂದಿಗೆ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸುತ್ತದೆ. ಅರಣ್ಯ ಅಧಿಕಾರಿಗಳು ಮತ್ತು ತಜ್ಞರನ್ನು ಒಳಗೊಂಡ ಸಚಿವಾಲಯದ ಅರಣ್ಯ ಸಲಹಾ ಸಮಿತಿಯು ಒಪ್ಪಿಗೆ ನೀಡಿದರೆ, ಯೋಜನೆಯು ತಾತ್ವಿಕ ಅನುಮೋದನೆ ಪಡೆಯುತ್ತದೆ. 

ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಬುಡಕಟ್ಟು ಮಹಿಳೆ ಹೆಗಲ ಮೇಲೆ ಪತಿಯ ಕೂರಿಸಿ ಮೆರವಣಿಗೆ

ಪ್ರಾಜೆಕ್ಟ್ ಡೆವಲಪರ್ ಕಾಡು ಕಡಿಯಲು ಪ್ರಸ್ತುತ ಮೌಲ್ಯ ಪಾವತಿಯಂತಹ ಅನುಮೋದನೆಗೆ ಷರತ್ತುಗಳನ್ನು ಪೂರೈಸಿದರೆ, ಅವರು ಅಂತಿಮ ಅನುಮೋದನೆ ಪಡೆಯುತ್ತಾರೆ. ನಂತರ ರಾಜ್ಯ ಸರ್ಕಾರವು ಡೆವಲಪರ್‌ಗೆ ಪತ್ರ ನೀಡುತ್ತದೆ. ಈ ಕುರಿತು "ನ್ಯೂಸ್‌ ಲಾಂಡ್ರಿ" ವೆಬ್‌ಸೈಟ್‌ ಸುದ್ದಿ ಪ್ರಕ್ರಟಿಸಿದೆ.

"ಈ ಬದಲಾವಣೆಯು ಅರಣ್ಯ ತೆರವು ಕಾರ್ಯವನ್ನು ಸುಲಭಗೊಳಿಸುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಕಾಡು ಕಡಿಯಲು ಕೇಂದ್ರ ಸರ್ಕಾರದಿಂದ ಈಗಾಗಲೇ ಅನುಮೋದನೆ ಸಿಕ್ಕಿರುವುದರಿಂದ ಅರಣ್ಯ ಹಕ್ಕು ಕಾಯ್ದೆ ಹಕ್ಕುಗಳ ರಕ್ಷಣೆ ಆಗಲಿದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ" ಎಂದು ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಆಂಡ್ ಎನ್ವಿರಾನ್‌ಮೆಂಟ್ ಗೌರವ ಸಂಯೋಜಕ ಶರಚಂದ್ರ ಲೇಲೆ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್