ಚಿಕ್ಕಮಗಳೂರು | ಭಾರಿ ಮಳೆಗೆ ಕೊಚ್ಚಿ ಹೋದ ಬೆಳೆ; ಮನನೊಂದ ರೈತ ಆತ್ಮಹತ್ಯೆ

suicide
  • ಕೃಷಿ ಚಟುವಟಿಕೆಗಾಗಿ ಸಾಲ ಮಾಡಿಕೊಂಡಿದ್ದ ಗಣೇಶ್‌
  • ಭಾರಿ ಮಳೆಗೆ ಅಡಿಕೆ, ಕಾಫಿ, ಮೆಣಸು ಬೆಳೆಗಳಿಗೆ ಹಾನಿ

ಚಿಕ್ಕಮಗಳೂರಿನಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಬೆಳೆಗಳು ಕೊಚ್ಚಿ ಹೋಗಿವೆ. ಕಷ್ಟಪಟ್ಟು ಬೆಳೆದ ಬೆಳೆ ಕೊಚ್ಚಿ ಹೋಗಿದ್ದಕ್ಕೆ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಪ್ಪ ತಾಲೂಕಿನ ಜಯಪುರ ಗ್ರಾಮದ ಗಣೇಶ್‌ (38) ಮೃತ ದುರ್ದೈವಿ. ಗಣೇಶ್‌ ಬೆಳೆ ಬೆಳೆಯುವ ಸಲುವಾಗಿ ಬ್ಯಾಂಕಿನಿಂದ 2 ಲಕ್ಷ 45 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದ. ಜತೆಗೆ ಕೈಸಾಲವೂ ಜಾಸ್ತಿಯಾಗಿತ್ತು. ಉತ್ತಮ ಫಸಲು ತೆಗೆದು ಸಾಲ ತೀರಿಸುವ ಉದ್ದೇಶ ಹೊಂದಿದ್ದ ಗಣೇಶ್‌ಗೆ ಇತ್ತೀಚೆಗೆ ಸುರಿದ ಭಾರಿ ಮಳೆ ಪೆಟ್ಟು ನೀಡಿತು.

ಧಾರಾಕಾರ ಮಳೆಗೆ ತೋಟದಲ್ಲಿ ಬೆಳೆದಿದ್ದ ಅಡಿಕೆ, ಕಾಫಿ, ಮೆಣಸು ಬೆಳೆಗಳು ಹಾಳಾದವು. ಬೆಳೆಗಳು ಹಾಳಾಗಿದ್ದರಿಂದ ಸಾಲ ಹೇಗೆ ತೀರಿಸಲಿ ಎಂದು ಚಿಂತೆಗೀಡಾದ ರೈತ ಗಣೇಶ್‌ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. 

ಈ ಸುದ್ದಿ ಓದಿದ್ದೀರಾ?: ತುಮಕೂರು | ಅರುಂಧತಿ ಸಿನಿಮಾ ನೋಡಿ ಪ್ರೇರಿತನಾದ ಯುವಕ: ಆತ್ಮಹತ್ಯೆಗೆ ಯತ್ನ

ಘಟನೆ ಕುರಿತಂತೆ ಮೃತನ ತಂದೆ ಬಾಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.
ನಿಮಗೆ ಏನು ಅನ್ನಿಸ್ತು?
0 ವೋಟ್