ಉಗ್ರ ಸಂಘಟನೆಗಳ ಜತೆ ನಂಟು| ಪ್ರತ್ಯೇಕ ಕಡೆಗಳಲ್ಲಿ ದಾಳಿ; ಮೂವರ ಬಂಧನ

  • ರಾಜಸ್ಥಾನದಲ್ಲಿ ಇಬ್ಬರು ಉಗ್ರರ ಬಂಧನ
  • ವರ್ಚುವಲ್‌ ಐಡಿ ನಿಸ್ಸೀಮ ಎಟಿಎಸ್‌ ಬಲೆಗೆ

ಮೂರು ಪ್ರತ್ಯೇಕ ಘಟನೆಗಳಲ್ಲಿ ಪೊಲೀಸರು ದಾಳಿ ನಡೆಸಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 

ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ 19 ವರ್ಷದ ಹಬೀಬುಲ್ ಇಸ್ಲಾಮ್‌ನನ್ನು (ಸೈಫುಲ್ಲಾ) ಕಾನ್ಪುರದಲ್ಲಿ ಬಂಧಿಸಿದೆ.

ಪ್ರವಾದಿ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ ಶರ್ಮಾ ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿಸಲಾಗಿರುವ ಮೊಹಮ್ಮದ್ ನದೀಮ್ ನೀಡಿದ ಸುಳಿವಿನ ಮೇರೆಗೆ ಸೈಫುಲ್ಲಾ ಎಂಬ ಯುವಕನನ್ನು ಬಂಧಿಸಲಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಉಗ್ರರ ಜತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಆರೋಪಿಯನ್ನು ಎಟಿಎಸ್‌ ಬಂಧಿಸಿದೆ.  ಸೈಪುಲ್ಲಾ ವರ್ಚುವಲ್‌ ಐಡಿ ಮಾಡುವುದರಲ್ಲಿ ಪರಿಣಿತಿ ಹೊಂದಿದ್ದು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಭಯೋತ್ಪಾದಕರಿಗೆ ಸುಮಾರು 50 ಐಡಿಗಳನ್ನು ಮಾಡಿಕೊಟ್ಟಿದ್ದಾನೆ ಎನ್ನಲಾಗುತ್ತಿದೆ.

ಸೈಫುಲ್ಲಾನ ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಟಿಎಸ್) ನವೀನ್ ಅರೋರಾ ಪಿಟಿಐಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾವರ್ಕರ್ ದ್ವಿರಾಷ್ಟ್ರದ ಸಿದ್ಧಾಂತ ಹುಟ್ಟುಹಾಕಿದರು, ಜಿನ್ನಾ ಪರಿಪೂರ್ಣಗೊಳಿಸಿದರು| ಬಿಜೆಪಿ ವಿಡಿಯೊಗೆ ಜೈರಾಮ್ ತಿರುಗೇಟು

ಗಡಿಯಾಚೆಗಿನ ಉಗ್ರರರೊಂದಿಗೆ ಸೈಫುಲ್ಲಾ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಜನರನ್ನು ಪ್ರೇರೆಪಿಸಲು ಅನೇಕ ಉಗ್ರ ಗುಂಪುಗಳು ಜಿಹಾದಿ ವಿಡಿಯೊಗಳನ್ನು ಕಳುಹಿಸುತ್ತಿದ್ದರು ಎಂದು ಹೇಳಿದ್ದಾರೆ.

ಜೆಇಎಂನ  ಭಯೋತ್ಪಾದಕನೊಬ್ಬನು ಸೈಫುಲ್ಲಾನನ್ನು ಜಿಹಾದಿ ತರಬೇತಿಗಾಗಿ ಪಾಕಿಸ್ತಾನಕ್ಕೆ ಬಂದು ಬಳಿಕ ಭಾರತದಲ್ಲಿ ದಾಳಿ ನಡೆಸುವಂತೆ  ಕೇಳಿಕೊಂಡಿದ್ದನು ಎಂದು ಎಟಿಎಸ್ ಆರೋಪಿಸಿದೆ.

ರಾಜಸ್ಥಾನದಲ್ಲಿ ಇಬ್ಬರ ಬಂಧನ

ರಾಜಸ್ಥಾನದ ಭಿಲ್ವಾರಾ ಮತ್ತು ಪಾಲಿ ಜಿಲ್ಲೆಗಳಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ರಾಜಸ್ಥಾನ ಪೊಲೀಸರು ಶನಿವಾರ (ಆಗಸ್ಟ್‌ 13) ಬಂಧಿಸಿದ್ದಾರೆ.

ಆರೋಪಿಗಳನ್ನು 27 ವರ್ಷದ ನಾರಾಯಣ ಲಾಲ್ ಗಾದ್ರಿ ಮತ್ತು 24 ವರ್ಷದ ಕುಲದೀಪ್ ಸಿಂಗ್ ಶೇಖಾವತ್ ಎಂದು ಗುರುತಿಸಲಾಗಿದ್ದು, ಅವರು ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಆಂತರಿಕ ಗುಪ್ತಚರ ಸೇವೆ (ಐಎಸ್‌ಐ) ಜತೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್