ಮಹಾರಾಷ್ಟ್ರ | ದಲಿತ ಯುವಕನಿಗೆ ಬೂಟು ನೆಕ್ಕಲು ಪೊಲೀಸ್ ಒತ್ತಾಯ: ಎಫ್ಐಆರ್ ದಾಖಲು

Dalit Lives Matter
  • ದೂರು ಸ್ವೀಕರಿಸಲು ನಿರಾಕರಿಸಿದ್ದರಿಂದ ಮೇಲಧಿಕಾರಿಗೆ ದೂರು ನೀಡಿದ್ದ ವ್ಯಕ್ತಿ
  • ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್‌ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು

ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಬೂಟು ನೆಕ್ಕುವಂತೆ ಒತ್ತಾಯಿಸಿದ್ದ ಮಹಾರಾಷ್ಟ್ರದ ನವಿ ಮುಂಬೈನ ಕಲಾಂಬೋಲಿ ಪೊಲೀಸ್ ಠಾಣೆಯ  ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್‌ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿಕಾಸ್ ಉಜ್ಗರೆ (28) ಹಲ್ಲೆಗೆ ಒಳಗಾದ ದಲಿತ ಯುವಕ. ಈತನ ಮೇಲೆ ಹಲ್ಲೆ ನಡೆಸಿದ್ದ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್‌ ದಿನೇಶ್ ಪಾಟೀಲ್ ವಿರುದ್ಧ ಎಸ್‌ಸಿ - ಎಸ್‌ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಕರಣವೊಂದರ ಸಂಬಂಧ ದೂರು ನೀಡಿಲು ವಿಕಾಸ್ ಉಜ್ಗರೆ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಆದರೆ ದೂರು ದಾಖಲಿಸಿಕೊಳ್ಳಲು ಕಲಂಬೋಳಿ ಠಾಣೆಯ ಪೊಲೀಸರು ಹಿಂದೇಟು ಹಾಕಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಉಜ್ಗರೆ ದೂರು ನೀಡಿದ್ದ. ಈ ಹಿನ್ನೆಲೆ ಠಾಣೆಗೆ ಬಂದಿದ್ದ ಉಜ್ಗರೆ ವಿರುದ್ಧ ದಿನೇಶ್ ಪಾಟೀಲ್ ಮೇಲೆ ಹಲ್ಲೆ ನಡೆಸಿ ಆತನ ಮುಖಕ್ಕೆ ಉಗುಳಿ, ಜಾತಿ ನಿಂದನೆ ಮಾಡಿ ತನ್ನ ಬೂಟು ನೆಕ್ಕುವಂತೆ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ದೌರ್ಜನ್ಯಕ್ಕೆ ಒಳಗಾಗಿರುವ ಉಜ್ಗರೆ ಸುದ್ದಿಗಾರರೊಂದಿಗೆ ಮಾತನಾಡಿ, “ಜನವರಿ 6ರಂದು ರಾತ್ರಿ 8 ಗಂಟೆಯ ಸುಮಾರಿಗೆ, ನಾನು ನನ್ನ ಸ್ನೇಹಿತನೊಂದಿಗೆ ಚೈನೀಸ್ ರೆಸ್ಟೋರೆಂಟ್‌ನಲ್ಲಿದ್ದೆ. ಈ ವೇಳೆ ರೆಸ್ಟೋರೆಂಟ್ ಮಾಲೀಕರು ಜಗಳಮಾಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಪೊಲೀಸರಿಗೆ ಕರೆ ಮಾಡಿದೆ. ಶೀಘ್ರದಲ್ಲೇ, ಕಲಾಂಬೋಲಿ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಬಂದಿತ್ತು” ಎಂದು ಹೇಳಿದ್ದಾರೆ.

“ಸ್ನೇಹಿತ ಗಾಯಗೊಂಡಿದ್ದರಿಂದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸ್ ಅಧಿಕಾರಿಗಳಲ್ಲಿ ಕೋರಿದೆ. ಆದರೆ, ಅವರು ನಿರಾಕರಿಸಿದರು. ಸಾಕಷ್ಟು ಮನವಿ ಮಾಡಿದ ನಂತರ, ಅಧಿಕಾರಿಗಳು ನಮ್ಮನ್ನು ಪನ್ವೇಲ್ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಪೊಲೀಸರಿಗೆ ಸೂಚಿಸಿದರು. ಆದರೆ, ಅಧಿಕಾರಿಗಳು ನನ್ನನ್ನು ಕಾಲಂಬೋಲಿ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ನಾನು ನೆಲದ ಮೇಲೆ ಕುಳಿತುಕೊಳ್ಳುವಂತೆ ಒತ್ತಾಯಿಸಲಾಯಿತು. ಆಗ ಪಾಟೀಲ್‌ ಬಂದು ನನ್ನ ಮೇಲೆ ಹಲ್ಲೆ ನಡೆಸಿದರು.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಬೈಕ್‌ಗೆ ಅಡ್ಡ ಬಂದ ಕಾರಣಕ್ಕೆ ದಲಿತ ಯುವಕನನ್ನು ಥಳಿಸಿ ಹತ್ಯೆ

“ನಂತರ ನನ್ನನ್ನು ಕೋಣೆಯೊಂದಕ್ಕೆ ಎಳೆದೊಯ್ದ ಅಲ್ಲಿ ಕ್ರೂರವಾಗಿ ಹಲ್ಲೆ ನಡೆಸಿದರು. ನಂತರ ನನ್ನ ಜಾತಿಯ ಬಗ್ಗೆ ಕೇಳಿದರು. ನಾನು ದಲಿತ ಎಂದು ಹೇಳಿದಾಗ, ಆತ ನನ್ನ ಜಾತಿಯನ್ನು ನಿಂದಿಸಿದರು. ಕೆಳ ಜಾತಿಗೆ ಸೇರಿದವನೆಂದು ನನ್ನ ಮೇಲೆ ಉಗುಳಿದರು. ಪಾಟೀಲ್ ತನ್ನ ಬೂಟುಗಳನ್ನು ನೆಕ್ಕುವಂತೆ ಒತ್ತಾಯಿಸಿದರು” ಎಂದು ಆರೋಪಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app