ಮಂಗಳೂರು | ಸುರತ್ಕಲ್ ಫಾಝಿಲ್‌ ಹತ್ಯೆ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪಿಯ ಬಂಧನ

Fazil Harsha
  • ಬಂಟ್ವಾಳ ತಾಲೂಕಿನ ಹರ್ಷಿತ್‌ ಬಂಧನ
  • ಆರೋಪಿಯಿಂದ ಕಾರು ವಶಕ್ಕೆ ಪಡೆದ ಪೊಲೀಸರು

ಮಂಗಳೂರಿನ ಸುರತ್ಕಲ್‌ ಸಮೀಪದ ಮಂಗಳಪೇಟೆ ನಿವಾಸಿ ಮೊಹಮ್ಮದ್ ಫಾಝಿಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬಂಟ್ವಾಳ ತಾಲೂಕಿನ ಹರ್ಷಿತ್ (28) ಎಂದು ಗುರುತಿಸಲಾಗಿದೆ. ಈತ ಆರೋಪಿಗಳು ಕೃತ್ಯ ನಡೆಸಿದ ಬಳಿಕ ಅವರನ್ನು ಇನ್ನೊಂದು ಕಾರಿನಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ಆಶ್ರಯ‌ ನೀಡಿದ್ದ ಎನ್ನಲಾಗಿದೆ. ಆರೋಪಿಗಳನ್ನು ಕರೆದುಕೊಂಡು ಹೋಗಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಫಾಝಿಲ್ ಹತ್ಯೆ| ಶಿಯಾ-ಸುನ್ನಿ ಪ್ರೇಮ ಪ್ರಕರಣ ಎಂಬ ಸುಳ್ಳು ಕತೆ ಎಲ್ಲಿಂದ, ಹೇಗೆ ಹುಟ್ಟಿತು?

ಜುಲೈ 28ರ ರಾತ್ರಿ ಫಾಝಿಲ್ ಮೇಲೆ ದುಷ್ಕರ್ಮಿಗಳು ತಲ್ವಾರ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಪ್ರಕರಣ ಸಂಬಂಧ ಈಗಾಗಲೇ ಕೃತ್ಯದಲ್ಲಿ ನೇರ ಭಾಗಿಯಾಗಿದ್ದ ಆರು ಮಂದಿ ಮತ್ತು ಕೃತ್ಯ ನಡೆಸಲು ಕಾರು ನೀಡಿದ್ದ ಓರ್ವ ಸೇರಿ ಒಟ್ಟು ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಹರ್ಷಿತ್ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟು ಎಂಟು ಮಂದಿಯ ಬಂಧನವಾದಂತಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180