ಲಿಂಗತ್ವ ಅಲ್ಪಸಂಖ್ಯಾತರು | ಸಮುದಾಯದ ಏಳಿಗೆಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿಗೆ ಆಗ್ರಹಿಸಿದ ದೆಹಲಿ ಮಹಿಳಾ ಆಯೋಗ

  • ದೆಹಲಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಒಂದೇ ಒಂದು ಆಶ್ರಯತಾಣವಿಲ್ಲ ಎಂದ ಮಲಿವಾಲ್‌
  • ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುವ ʻಟ್ರಾನ್ಸ್‌ಜೆಂಡರ್‌ ಸೆಲ್ʼ

ಎಲ್‌ಜಿಬಿಟಿಕ್ಯೂ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿರುವ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯೂ), ಅವರ ಯೋಗಕ್ಷೇಮಕ್ಕಾಗಿ ಕೈಗೊಂಡ ಕ್ರಮಗಳ ವಿವರಗಳನ್ನು ನೀಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ನೋಟಿಸ್ ಕಳುಹಿಸಿದೆ.

ಆಯೋಗವು ತನ್ನ ʻಟ್ರಾನ್ಸ್‌ಜೆಂಡರ್‌ ಸೆಲ್ʼ ಮೂಲಕ ನಿಯಮಿತವಾಗಿ ಸಮುದಾಯದವರೊಂದಿಗೆ ಸಂವಹನ ನಡೆಸಲಿದ್ದು, ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ತಿಳಿಸಿದರು.

ʻʻಟ್ರಾನ್ಸಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ನಿಯಮಗಳು- 2020 ಈ ಹೊಸ ಕಾಯ್ದೆಯನ್ನು ರಾಜಧಾನಿಯಲ್ಲಿ ಪರಿಚಯಿಸಲಾಗಿದೆಯೇ? ಈ ಹೊಸ ಕಾಯ್ದೆಯಿಂದಾಗಿ ಸಮುದಾಯದವರಿಗೆ ದೊರೆತಿರುವ ಸೌಲಭ್ಯಗಳ ಬಗ್ಗೆ ಸರ್ಕಾರ ಜಾಹೀರಾತು ನೀಡಲು ಯಾವ ಕ್ರಮಗಳನ್ನು ತೆಗೆದುಕೊಂಡಿದೆ? ಈ ಕ್ರಮಗಳ ಹೊರತಾಗಿ ಜಾಹೀರಾತು ನೀಡಲು ವಿಳಂಬವಾಗಿದ್ದರೆ ಅದಕ್ಕೆ ಸೂಕ್ತ ಕಾರಣಗಳೇನು ಎಂಬುದನ್ನು ವಿವರಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ತಿಳಿಸಲಾಗಿದೆʼʼ ಎಂದು ಅವರು ವಿವರಿಸಿದರು.

ʻʻದೆಹಲಿ ಸರ್ಕಾರವು ಸ್ಥಾಪಿಸಬೇಕಿದ್ದ ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿಯ ರಚನೆಯು ಯಾವ ಹಂತದಲ್ಲಿದೆ ಎಂಬುದನ್ನು ತಿಳಿಯಲು ಆಯೋಗವು ಪ್ರಯತ್ನಿಸುತ್ತಿದೆʼʼ ಎಂದರು.

ಎಲ್‌ಜಿಬಿಟಿಕ್ಯೂ+ ಸಮುದಾಯು ಈಗಲೂ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಅವರ ಹಕ್ಕುಗಳು ಮತ್ತು ಇಡೀ ಸಮುದಾಯದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆʼʼ ಎಂದು ಅವರು ಆಗ್ರಹಿಸಿದರು.

"ಸಮುದಾಯದ ಏಳಿಗೆಗಾಗಿ ಜಾರಿಗೊಳಿಸಿದ ಕ್ರಮಗಳ ಬಗ್ಗೆ ಮಾಹಿತಿ ಕೋರಿ ದೆಹಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ನೋಟಿಸ್ ನೀಡಿದ್ದೇನೆ. ದೇಶದ ರಾಜಧಾನಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಒಂದೇ ಒಂದು ನಿರಾಶ್ರಿತರ ತಾಣ ಇಲ್ಲದೇ ಇರುವುದು ಕಳವಳಕಾರಿ" ಎಂದು ಅವರು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app