ಮಾಲ್‌ಗಾಗಿ ಶಾಲೆ ಧ್ವಂಸ ಕಾನೂನು ಬಾಹಿರ ಎಂದ ದೆಹಲಿ ಹೈಕೋರ್ಟ್‌

  • ಶಾಲೆಗೆ ಮೀಸಲಿಟ್ಟ ಸ್ಥಳದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಕಾನೂನು ಬಾಹಿರ
  • ₹181 ಕೋಟಿಗೆ ನಿರ್ಮಾಣ ಕಾರ್ಯಾರಂಭಿಸಿದ ಘಟಕಕ್ಕೆ ನೋಟಿಸ್ ಜಾರಿ

ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಸ್ಥಳಾವಕಾಶ ಬೇಕೆಂದು ದೆಹಲಿಯ ಕರೋಲ್‌ ಬಾಗ್‌ನ ಪ್ರಾಥಮಿಕ ಶಾಲೆ ಧ್ವಂಸಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ದೆಹಲಿ ನಗರ ಪಾಲಿಕೆಯ ಉತ್ತರ ವಿಭಾಗ ಹಾಗೂ ದೆಹಲಿಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಹೈಕೋರ್ಟ್ ಕೇಳಿದೆ.

ಈ ಬಗ್ಗೆ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ  ಹರಾಜು ಪ್ರಕ್ರಿಯೆಯಲ್ಲಿ ₹181 ಕೋಟಿಗೆ ನಿರ್ಮಾಣ ಕಾರ್ಯ ವಹಿಸಿಕೊಂಡ ಘಟಕಕ್ಕೆ ನೊಟೀಸ್ ಜಾರಿ ಮಾಡಿದೆ.

ಇದನ್ನು ಓದಿದ್ದೀರಾ?  ಕೋವಿಡ್‌ ಲಸಿಕೆ ಹಾಕಿಸಲು ಒತ್ತಾಯ ಬೇಡ: ಸುಪ್ರೀಂ ಕೋರ್ಟ್‌

ಪ್ರಶ್ನೆಯಲ್ಲಿರುವ ಭೂಮಿಯು, ಬಡಾವಣೆಯ ವಿನ್ಯಾಸ ಯೋಜನೆಯಲ್ಲಿ ಶಾಲೆಯ ಉದ್ದೇಶಕ್ಕಾಗಿ ಮೀಸಲಿತ್ತು. ಈವರೆಗೂ ಅದಕ್ಕೆ ಸಂಬಂಧಿಸಿ ಯಾವುದೇ ತಿದ್ದುಪಡಿ ತಂದಿಲ್ಲ. ಆದ್ದರಿಂದ ಸ್ಥಳದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮತ್ತು ಕಾರು ನಿಲ್ಲಿಸಲು ಬಳಕೆ ಮಾಡುವುದು ಕಾನೂನು ಬಾಹಿರ ಮತ್ತು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಏಕರೂಪ ಶಿಕ್ಷಣಕ್ಕೆ ಆಹ್ವಾನ

ಹನ್ನೆರಡನೆಯ ತರಗತಿಗೆ ವಿದ್ಯಾರ್ಥಿಗಳಿಗೆ ಏಕರೂಪ ಶಿಕ್ಷಣ ನೀತಿ ಜಾರಿಗೊಳಿಸುವಂತೆ ಸಲ್ಲಿಸಿದ ಅರ್ಜಿಗೂ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಿಲುವನ್ನು ನ್ಯಾಯಾಲಯ ಕೇಳಿದೆ.

ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯಯವರ ಅರ್ಜಿಗೆ ಸಂಬಂದಿಸಿದಂತೆ ನೋಟಿಸ್ ಜಾರಿ ಮಾಡುವಾಗ ಸೆಂಟ್ರಲ್ ಬೋರ್ಡ್ ಆಫ್ ಸೆಂಕೆಡರಿ ಎಜುಕೇಶನ್ (ಸಿಬಿಎಸ್ಇ), ಹಾಗೂ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮೀನೇಶನ್ (ಸಿಐಎಸ್‌ಸಿಇ) ಅವರ ನಿಲುವನ್ನು ಹೈಕೋರ್ಟ್‌ ಕೋರಿದೆ.

ಉತ್ತರಕ್ಕೆ ಸಂಬಂಧಿಸಿದ ಅಫಿಡವಿಟ್‌ನಲ್ಲಿ, ಏಕರೂಪ ಶಿಕ್ಷಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತೀರ್ಪಿನ ಅಡಿಯಲ್ಲಿ ಸಾಮಾನ್ಯ ಪಠ್ಯಕ್ರಮ ಅಳವಡಿಸಿಕೊಂಡ ಮತ್ತು ಅಳವಡಿಸಿಕೊಳ್ಳಲು ಸರ್ಕಾರ ಪ್ರಸ್ತಾಪಿಸಿರುವ ನೀತಿಯ ವಿವರಗಳು ಇರಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಈದಿನ ಡೆಸ್ಕ್
ನಿಮಗೆ ಏನು ಅನ್ನಿಸ್ತು?
1 ವೋಟ್
eedina app