ಕೆಂಪು ಕೋಟೆಯಲ್ಲಿ 10 ಸಾವಿರ ಪೊಲೀಸರ ನಿಯೋಜನೆ; 7 ಸಾವಿರ ಆಹ್ವಾನಿತರ ನಿರೀಕ್ಷೆ

  • ಕೆಂಪುಕೋಟೆಯ ಸುತ್ತ ಗಾಳಿಪಟಗಳ ನಿಷೇಧ
  • ಭದ್ರತೆಗಾಗಿ ಹತ್ತು ಸಾವಿರ ಪೊಲೀಸರ ನಿಯೋಜನೆ

ಪ್ರಧಾನಿ ನರೇಂದ್ರ ಮೋದಿ ಅವರು ದ್ವಜರೋಹಣ ಮಾಡುವ ಕೆಂಪು ಕೋಟೆಯಲ್ಲಿ ದೆಹಲಿ ಪೊಲೀಸರು ಬಿಗಿ ಭದ್ರತೆ ಹೆಚ್ಚಿಸಿದ್ದಾರೆ. ಸುಮಾರು 7000 ಸಾವಿರ ಆಹ್ವಾನಿತರು ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿದೆ.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 7000 ಆಹ್ವಾನಿತರು ಕೆಂಪುಕೋಟೆಗೆ ಬರುವ ನಿರೀಕ್ಷೆ ಇದೆ. ಪ್ರವೇಶ ದ್ವಾರದಲ್ಲಿ ಬಹು ಪದರದ ಭದ್ರತಾ ಕವಚ ಮತ್ತು ಮುಖ ಗುರುತಿಸುವಿಕೆಯ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಸುಮಾರು 10,000 ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ರೀತಿಯ ಬೆದರಿಕೆಗಳನ್ನು ಸುಲಭವಾಗಿ ಎದುರಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಗಾಳಿಪಟಗಳನ್ನು ಹಿಡಿಯಲು 400 ಮಂದಿಯನ್ನು ನಿಯೋಜಿಸಲಾಗಿದೆ. ಇನ್ನು ಕಟ್ಟಡದ ಮೇಲ್ಛಾವಣಿ ಸೇರಿದಂತೆ ಸೂಕ್ಷ್ಮಪ್ರದೇಶಗಳಲ್ಲೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕೆಂಪು ಕೋಟೆಯ ಐದು ಕಿಲೋ ಮೀಟರ್ ಸುತ್ತಲಿನ ಪ್ರದೇಶವನ್ನು ದ್ವಜಾರೋಹಣದ ತನಕ ‘ಗಾಳಿಪಟ ಹಾರಿಸದ ವಲಯ’ ಎಂದು ಘೋಷಿಸಲಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಇತರ ಭದ್ರತಾ ಸಂಸ್ಥೆಗಳಿಂದ ಡ್ರೋನ್ ವಿರೋಧಿ ವ್ಯವಸ್ಥೆ ಸಹ ಅಳವಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ನವದೆಹಲಿ | ಎನ್‌ಐಎಯಿಂದ ಸಕ್ರಿಯ ಐಸಿಸ್‌ ಸದಸ್ಯ ಬಂಧನ

"ಕೆಂಪು ಕೋಟೆ ಮತ್ತು ಸುತ್ತಮುತ್ತ ಹೆಚ್ಚಿನ ರೆಸಲ್ಯೂಶನ್ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕೆಂಪುಕೋಟೆಗೆ ಆಗಮಿಸುವವರ ಮುಖವನ್ನು ಸುಲಭವಾಗಿ ಗುರುತಿಸಬಹುದು. ಈ ಬಾರಿ, ಆಹ್ವಾನಿತರ ಸಂಖ್ಯೆ 7,000ಕ್ಕೆ ಏರಿದೆ. ಹಾಗಾಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಂಪು ಕೋಟೆ ಆವರಣದಲ್ಲಿ ಊಟದ ಬಾಕ್ಸ್, ನೀರಿನ ಬಾಟಲ್, ರಿಮೋಟ್ ಕಂಟ್ರೋಲ್ ಕಾರ್ ಕೀ, ಸಿಗರೇಟ್ ಲೈಟರ್, ಬ್ರೀಫ್ ಕೇಸ್, ಹ್ಯಾಂಡ್ ಬ್ಯಾಗ್, ಕ್ಯಾಮೆರಾ, ಬೈನಾಕ್ಯುಲರ್, ಛತ್ರಿಯಂತಹ  ವಸ್ತುಗಳನ್ನು ನಿರ್ಬಂಧಿಸಲಾಗಿದೆ.

ದೆಹಲಿಯಲ್ಲಿ ಈಗಾಗಲೇ ಸೆಕ್ಷನ್ 144ನ ನಿಬಂಧನೆಗಳನ್ನು ಜಾರಿಗೊಳಿಸಲಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೇವೇಂದ್ರ ಪಾಠಕ್ ಹೇಳಿರುವುದಾಗಿ' ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.

ಹೋಟೆಲ್‌ಗಳು, ಅತಿಥಿ ಗೃಹಗಳು, ಪಾರ್ಕಿಂಗ್ ಸ್ಥಳಗಳು ಹಾಗೂ ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಬಾಡಿಗೆದಾರರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ಯಾರಾಗ್ಲೈಡರ್‌ಗಳು, ಹ್ಯಾಂಗ್ ಗ್ಲೈಡರ್‌ಗಳು ಮತ್ತು ಬಿಸಿ ಗಾಳಿಯ ಬಲೂನ್‌ಗಳಂತಹ ವೈಮಾನಿಕ ವಸ್ತುಗಳ ಹಾರಾಟವನ್ನು ನಿಷೇಧಿಸಿ ಜುಲೈ 22ರಂದು ಪೊಲೀಸರು ಆದೇಶ ಹೊರಡಿಸಿದ್ದು, ಇದು ಆಗಸ್ಟ್ 16ರವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್