ಭೂಸ್ವಾಧೀನ ವಿರೋಧಿ ಹೋರಾಟ | ಅನ್ನದಾತನ ಕಣ್ಣೀರಿಗೆ ಮರುಗಿದ ಪೊಲೀಸರು; ಅಳಲು ಕೇಳದ ಸರ್ಕಾರ

DEVANAHALLI RAITHA PROTEST  (1)
  • ಸಚಿವ ಮುರುಗೇಶ್‌ ನಿರಾಣಿ ವಿರುದ್ಧ ರೈತ ಮುಖಂಡರ ಆಕ್ರೋಶ 
  • 10 ಗಂಟೆಗೆ 3 ಸಾವಿರ ರೈತರಿಂದ ತಾಲೂಕು ಕಚೇರಿಗೆ ಮುತ್ತಿಗೆ

ಭೂಸ್ವಾಧೀನದ ವಿರುದ್ಧ ಕಳೆದ 74 ದಿನಗಳಿಂದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಪಂಜಿನ ಮೆರವಣಿಗೆ ನಡೆಸಲು ಮುಂದಾದ ರೈತರನ್ನು ಪೊಲೀಸರು ತಡೆದ ಘಟನೆ ನಡೆಯಿತು.

ಭೂಸ್ವಾಧೀನ ವಿರೋಧಿಸಿ ರೈತರ ಅನಿರ್ಧಿಷ್ಟಾವಧಿ ಹೋರಾಟದ ಹಿನ್ನೆಲೆಯಲ್ಲಿ ಪಂಜಿನ ಮೆರವಣಿಗೆ ನಡೆಸಲು ಮುಂದಾಗಿದ್ದ ರೈತರನ್ನು ಅನುಮತಿವಿಲ್ಲವೆಂಬ ನೆಪವೊಡ್ಡಿ ಪೊಲೀಸರು ತಡೆಯಲು ಯತ್ನಿಸಿದರು. ಆದರೆ ನೊಂದ ರೈತರು ಕಣ್ಣೀರು ಹಾಕಿ ಹೋರಾಟ ತಡೆಯಬಾರದು ಎಂದು ಪಟ್ಟು ಹಿಡಿದ ಮೇಲೆ ಪೊಲೀಸರು ಹಿಂದೆ ಸರಿದರು.

ಈ ವೇಳೆ ಚೀಮಾಚನಹಳ್ಳಿಯ ರೈತ ಮುಕಂದ್ ಜೀವನೋಪಾಯವೇ ಆದ ಜಮೀನು ಕಳೆದುಕೊಂಡು ಬದುಕುವುದಾದರೂ ಹೇಗೆಂದು ಪೊಲೀಸರನ್ನು ಪ್ರಶ್ನಿಸಿ ಕಣ್ಣೀರಿಟ್ಟರು. ಈ ವೇಳೆ ಮರು ಮಾತಾಡದೇ ಪೊಲೀಸರು ಹಿಂದೆ ಸರಿದರು.

ನಂತರ ಪಂಜಿನ ಮೆರವಣಿಗೆ ಮುಂದುವರಿಸಿದ ರೈತರು, ಪ್ರಮುಖ ಬೀದಿಗಳಲ್ಲಿ ಬಂದ್ ಬೆಂಬಲಿಸುವಂತೆ ಮನವಿ ಮಾಡುತ್ತ ಪ್ರವಾಸಿ ಮಂದಿರಕ್ಕೆ ಆಗಮಿಸಿ ಮೆರವಣಿಗೆ ಪೂರ್ಣಗೊಳಿಸಿದರು.

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಅನಿಧಿಷ್ಠಾವಧಿ ಹೋರಾಟ 75ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಶುಕ್ರವಾರ ದೇವನಹಳ್ಳಿ ಬಂದ್‌, ತಾಲೂಕು ಕಚೇರಿ ಮುತ್ತಿಗೆಗೆ ಕರೆ ನೀಡಿದೆ.

ಇದರ ಭಾಗವಾಗಿ ಬೆಳಗ್ಗೆ 5 ಗಂಟೆಗೆ 40ಕ್ಕೂ ಅಧಿಕ ರೈತ ಮುಖಂಡರು ದೇವನಹಳ್ಳಿಯ ಪ್ರವಾಸಿ ಮಂದಿರದಿಂದ ಪ್ರಮುಖ ಮಾರ್ಗಗಳ ಮೂಲಕ ಪಂಜಿನ ಮೆರವಣಿಗೆ ನಡೆಸಿ, ಬಂದ್ ಬೆಂಬಲಿಸುವಂತೆ ಸಾರ್ವಜನಿಕರು, ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು. ಪಂಜಿನ ಮೆರವಣಿಗೆ ಹಳೆ ಬಸ್‌ನಿಲ್ದಾಣ ಸಮೀಪಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ದೇವನಹಳ್ಳಿ ಪೋಲಿಸರು, ಹೈಕೋರ್ಟ್ ಆದೇಶದ ಮೇರೆಗೆ ಮೆರವಣಿಗೆಗೆ ಅವಕಾಶವಿಲ್ಲವೆಂದು ರೈತ ಮುಖಂಡರನ್ನು ತಡೆದರು. 

Image
DEVANAHALLI BANDH raith 1

ಈ ವೇಳೆ ಬಹಳ ಸಮಯದವರೆಗೆ ರೈತ ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಮೆರವಣಿಗೆಗೆ ಅನುಮತಿ ಇಲ್ಲವೆಂದು ನಿರಾಕರಿಸಿದರೂ ಪಟ್ಟು ಬಿಡದ ರೈತರು ಪೊಲೀಸರು, ಸರ್ಕಾರದಿಂದ ತಮಗೆ ಅನ್ಯಾಯವಾಗುತ್ತಿದೆ. ಮುರುಗೇಶ್ ನಿರಾಣಿ ವಿರುದ್ಧವೂ ರೈತ ಮುಖಂಡರು ಬೆಳಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ:? ದೇವನಹಳ್ಳಿಗೆ ಅಭಿವೃದ್ಧಿಯೇ ಶಾಪ; ಭಾಗ-2| ಹೊಟ್ಟೆಗೆ ಏನು ತಿಂತಾರೆ, ಈ ಸರ್ಕಾರಕ್ಕೆ ಅಪ್ಪ-ಅಮ್ಮ ಇಲ್ಲವಾ?

ಚಿ ಮಾಚನಹಳ್ಳಿಯ ರೈತ ಮುಕಂದ್ ಜೀವನೋಪಾಯವೇ ಆದ ಜಮೀನು ಕಳೆದುಕೊಂಡು ಬದುಕುವುದಾದರೂ ಹೇಗೆಂದು ಪೊಲೀಸರನ್ನು ಪ್ರಶ್ನಿಸಿ ಕಣ್ಣೀರಿಟ್ಟದ್ದನ್ನು ಕಂಡ ಪೊಲೀಸರು ರೈತರ ಪಂಜಿನ ಮೆರವಣಿಗೆಗೆ ಅನುವು ಮಾಡಿಕೊಟ್ಟು ಹಿಂದೆ ಸರಿದರು. ನಂತರ ಪಂಜಿನ ಮೆರವಣಿಗೆ ಮುಂದುವರಿಸಿದ ರೈತರು, ಪ್ರಮುಖ ಬೀದಿಗಳಲ್ಲಿ ಸಾಗಿ ಪ್ರವಾಸಿ ಮಂದಿರ ತಲುಪಿದರು.

Image
devanahalli police

10 ಗಂಟೆಗೆ ಸಾವಿರಾರು ರೈತರು ದೇವನಹಳ್ಳಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಸರ್ಕಾರದ ಭೂ ಸ್ವಾಧೀನ ಪ್ರಕ್ರಿಯೆ ವಿರುದ್ಧ ಮುಷ್ಕರ ನಡೆಸಲಿದ್ದಾರೆ. 

ಸಂತ್ರಸ್ತ ರೈತರು, ರೈತ ಮುಖಂಡರ ಈ ಅನಿರ್ಧಿಷ್ಠಾವಧಿ ಹೋರಾಟಕ್ಕೆ 50ಕ್ಕೂ ಅಧಿಕ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ದಲಿತ, ಕಾರ್ಮಿಕ, ಮಹಿಳೆ, ಕನ್ನಡ ಪರ ಸಂಘಟನೆಗಳ 3 ಸಾವಿರಕ್ಕೂ ಅಧಿಕ ಹೋರಾಟಗಾರರು ಭಾಗವಹಿಸಲಿದ್ದಾರೆ.

Image
DEVANAHALLI BANDH

ರೈತ ಹೋರಾಟಕ್ಕೆ ವ್ಯಾಪಾರಸ್ಥರು, ಸ್ಥಳೀಯರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಹಾಲು, ಮೆಡಿಕಲ್‌ ಶಾಪ್‌ ಹೊರತುಪಡಿಸಿದಂತೆ ಮತ್ತಿತರ ಅಂಗಡಿ-ಮುಂಗಟ್ಟುಗಳನ್ನು ಬೆಳಗ್ಗೆ ಬಂದ್‌ ಮಾಡಿದ್ದಾರೆ.

ಕೆಐಎಡಿಬಿ ಮೂರನೇ ಹಂತದ ಭೂಸ್ವಾಧೀನಕ್ಕೆ ಹೊರಡಿಸಿದ ನೊಟೀಸ್ ವಿರೋಧಿಸಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ನಾಡಕಚೇರಿ ಮುಂದೆ ಏಪ್ರಿಲ್ 4ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದೆ.

13 ಗ್ರಾಮಗಳ ನೂರಾರು ರೈತರಿಗೆ ನೊಟೀಸ್
ಕರ್ನಾಟಕ ಸರ್ಕಾರ ರಾಜ್ಯಪತ್ರ ಸಂಖ್ಯೆ, ಸಿಐ 121 ಎಸ್ಪಿಕ್ಯೂ (ಇ) 2021 ರಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ಕಲಂ 3(1) ರನ್ವಯ ಅಧಿಸೂಚನೆ ಪ್ರಕಾರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮಟ್ಟುಬಾರ್ಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ಶ್ರೋತ್ರಿಯ ತೆಲ್ಲೋಹಳ್ಳಿ ಮತ್ತು ಹಾಡ್ಯಾಳ ಈ 13 ಗ್ರಾಮಗಳ 1777-02 ಎಕರೆ ಕೃಷಿ ಭೂಮಿಯನ್ನು ಕೆಐಎಡಿಬಿ ಕೈಗಾರಿಕೆಗಳ ಅಭಿವೃದ್ಧಿಯ ಹೆಸರಲ್ಲಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಕುರಿತು ಖಾತೆದಾರರಿಗೆ ವಿಧಿ 28(1) ರನ್ವಯ ಪ್ರಾರಂಭಿಕ ನೊಟೀಸ್ ನೀಡಲಾಗಿದೆ.
ಕೆಐಎಡಿಬಿ ಭೂಸ್ವಾಧೀನ ಕೈ ಬಿಡುವಂತೆ ಹಕ್ಕೊತ್ತಾಯ ಪತ್ರದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ , ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೆಐಎಡಿಬಿ ವಿಶೇಷಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ. ಅನಿರ್ಧಿಷ್ಟಾವಧಿ ಧರಣಿ 75ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ದೇವನಹಳ್ಳಿ ಬಂದ್‌ಗೆ ಕರೆ ನೀಡಲಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್