ಸುಕನ್ಯಾ ಸಮೃದ್ಧಿ, ಪಿಪಿಎಫ್ ಗ್ರಾಹಕರಿಗೆ ಸಿಹಿ ಸುದ್ದಿ: ಅಂಚೆ ಕಚೇರಿಗಳಲ್ಲಿನ ಖಾತೆದಾರರಿಗೆ ʼಇ-ಪಾಸ್‌ಬುಕ್‌ʼ ಸೌಲಭ್ಯ

  • ಸುಕನ್ಯಾ ಸಮೃದ್ಧಿ, ಪಿಪಿಎಫ್ ಮುಂತಾದ ಯೋಜನೆದಾರರಿಗೆ ಅನುಕೂಲ
  • ಅ.12ರಿಂದಲೇ ದೇಶದಾದ್ಯಂತ ಅಂಚೆ ʼಇ-ಪಾಸ್‌ಬುಕ್‌ʼ ಸೌಲಭ್ಯ ಪರಿಚಯ

ಅಂಚೆ ಕಚೇರಿಗಳಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ʼಇ-ಪಾಸ್‌ಬುಕ್‌ʼ ಸೌಲಭ್ಯವನ್ನು ಬುಧವಾರ ಪರಿಚಯಿಸಿದೆ.

ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ (ಪಿಒಎಸ್‌ಬಿ) ಹಾಗೂ ಸುಕನ್ಯಾ ಸಮೃದ್ಧಿ, ಪಿಪಿಎಫ್ ಯೋಜನೆಗಳ ಖಾತೆದಾರರಿಗೆ ಇ-ಪಾಸ್‌ಬುಕ್ ಸೌಲಭ್ಯವನ್ನು ಪ್ರಾರಂಭಿಸಿದ್ದು, ಸಂಪರ್ಕ ಖಾತೆ ರಾಜ್ಯ ಸಚಿವ ದೇವುಸಿನ್ಹ ಚೌಹಾಣ್ ಅದನ್ನು ಲೋಕಾರ್ಪಣೆಗೊಳಿಸಿದರು.

Eedina App

ಅ.12ರಿಂದಲೇ ದೇಶದಾದ್ಯಂತ ಇರುವ ಎಲ್ಲ ಅಂಚೆ ಕಚೇರಿಗಳಲ್ಲಿ ಇ-ಪಾಸ್‌ಬುಕ್‌ ಸೇವೆಯನ್ನು ಪರಿಚಯಿಸಲಾಗಿದ್ದು, ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳ ಗ್ರಾಹಕರಿಗೆ ಈ ಸೌಲಭ್ಯ ಉಪಯುಕ್ತವಾಗಿದೆ. ಎಲ್ಲಿಂದ ಬೇಕಿದ್ದರೂ, ಯಾವ ಸಮಯದಲ್ಲಾದರೂ ಸರಿ ನೆಟ್‌ ಬ್ಯಾಂಕಿಂಗ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಇಲ್ಲದೆ ವೈಯಕ್ತಿಕ ಖಾತೆಯ ಮಾಹಿತಿ ಪಡೆಯಬಹುದು.

ಗ್ರಾಹಕರು ರಾಷ್ಟ್ರೀಯ ಉಳಿತಾಯ ಯೋಜನೆಗಳ ಮೊತ್ತ, ಸುಕನ್ಯಾ ಸಮೃದ್ಧಿ, ಪಿಪಿಎಫ್ ಮುಂತಾದ ಯೋಜನೆಗಳ ಮಿನಿ ಸ್ಟೇಟ್‌ಮೆಂಟ್‌ ಪಡೆಯುವುದು ಸೇರಿದಂತೆ ಅನೇಕ ಸೇವೆಗಳನ್ನು ಇ-ಪಾಸ್‌ಬುಕ್‌ ಫೀಚರ್‌ ಮೂಲಕ ಪಡೆಯಬಹುದು.

AV Eye Hospital ad

ಈ ಬಗ್ಗೆ ಸಚಿವ ದೇವುಸಿನ್ಹ ಚೌಹಾಣ್ ಅವರು ತಮ್ಮ ಟ್ವೀಟರ್‌ ಖಾತೆಯಲ್ಲಿ, "ತ್ವರಿತ ಮತ್ತು ಪಾರದರ್ಶಕ ನಾಗರಿಕ-ಕೇಂದ್ರಿತ ಸೇವೆಗಳನ್ನು ನೀಡಲು ತಂತ್ರಜ್ಞಾನವನ್ನು ಬಳಸಬೇಕು ಎಂದು ಪ್ರಧಾನಿಯವರು ಒತ್ತಿ ಹೇಳುತ್ತಾರೆ. ಅದಕ್ಕನುಗುಣವಾಗಿ, ಇಂದು ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕ್ (ಪಿಒಎಸ್‌ಬಿ) ಯೋಜನೆಗಳಿಗಾಗಿ 'ಇ-ಪಾಸ್‌ಬುಕ್ ಸೌಲಭ್ಯ'ವನ್ನು ಪ್ರಾರಂಭಿಸಲಾಗಿದೆ" ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮನಾದ ಬೋನಸ್ ನೀಡಿದ ಕೇಂದ್ರ ಸರ್ಕಾರ

ಬಳಕೆಯ ವಿಧಾನ ಹೇಗೆ?

  1. ಅಂಚೆಯಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯ ಮೂಲಕ ಇ-ಪಾಸ್‌ಬುಕ್‌ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.
  2. www.indiapost.gov.in ಅಥವಾ www.ippbonline.com ನಲ್ಲಿ ನೀಡಲಾದ “ಇ-ಪಾಸ್‌ಬುಕ್‌’ ಲಿಂಕ್‌ ಒತ್ತಿ. ಮೊಬೈಲ್‌ ಸಂಖ್ಯೆ ಹಾಕಿ ಲಾಗಿನ್‌ ಆಗಬೇಕು. ಒಟಿಪಿ ಬಂದ ನಂತರ ಅದನ್ನು ನಮೂದಿಸಿ ಸಬ್ಮಿಟ್ ಕೊಡುವುದು.
  3. ಎರಡನೇ ಹಂತದಲ್ಲಿ “ಇ-ಪಾಸ್‌ಬುಕ್‌’ ಎಂಬುದನ್ನು ಕ್ಲಿಕ್‌ ಮಾಡಿ, ನಿಮ್ಮ ಯೋಜನೆಯ ಹೆಸರಿನ ಆಯ್ಕೆ ಒತ್ತಿರಿ, ಖಾತೆ ಸಂಖ್ಯೆ, ನೋಂದಾಯಿತ ಮೊಬೈಲ್‌ ಸಂಖ್ಯೆ ಹಾಕಿದ ಬಳಿಕ ಒಟಿಪಿ ನಮೂದಿಸಿ, ದೃಢೀಕರಿಸಬೇಕು.
  4. ಮೂರನೇ ಹಂತದಲ್ಲಿ “ಬ್ಯಾಲೆನ್ಸ್‌ ಎಂಕ್ವೈರಿ’, “ಮಿನಿ ಸ್ಟೇಟ್‌ಮೆಂಟ್‌’, “ಫ‌ುಲ್‌ ಸ್ಟೇಟ್‌ಮೆಂಟ್‌’ ಎಂಬ ಆಯ್ಕೆಗಳು ಬರುತ್ತವೆ. ಅಗತ್ಯವಿರುವ ಸೇವೆಗಳ ಸೌಲಭ್ಯ ಪಡೆಯಬಹುದು.
ನಿಮಗೆ ಏನು ಅನ್ನಿಸ್ತು?
0 ವೋಟ್
eedina app