ರಾಜಕೀಯ ಪಕ್ಷಗಳ ದೇಣಿಗೆಗೆ ಮಿತಿ ಹೇರಲು ಮುಂದಾದ ಚುನಾವಣಾ ಆಯೋಗ

  • ಸ್ವೀಕೃತಿ ದೇಣಿಗೆಯನ್ನು 20 ಕೋಟಿಗೆ ಮಿತಿಗೊಳಿಸುವ ಪ್ರಸ್ತಾಪ
  • ಕಾನೂನು ಸಚಿವರಿಗೆ ಪತ್ರ ಬರೆದ ಮುಖ್ಯ ಚುನಾವಣಾ ಆಯುಕ್ತ

ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಕಾನೂನು ಸಚಿವಾಲಯ ಮತ್ತು ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದು, 2,000 ರೂಪಾಯಿಗಿಂತಲೂ ಹೆಚ್ಚಿನ ದೇಣಿಗೆಯ ವಿವರವನ್ನು ಬಹಿರಂಗಪಡಿಸುವಂತೆ ಸೂಚಿಸುವ ತಿದ್ದುಪಡಿ ತರುವ ಪ್ರಸ್ತಾಪ ಮುಂದಿಟ್ಟಿದೆ. 

ಅಲ್ಲದೆ, ಪಕ್ಷಗಳು ಸ್ವೀಕರಿಸುವ ನಗದು ದೇಣಿಗೆಯ ಮಿತಿಯನ್ನು ₹20 ಕೋಟಿಗೆ ಸೀಮಿತಗೊಳಿಸುವ ಕುರಿತು ಪ್ರಸ್ತಾಪಿಸಲಾಗಿದೆ.

ಆಯೋಗದ ಪ್ರಸ್ತಾಪಗಳನ್ನು ಜಾರಿಗೆ ತರಲು ಚುನಾವಣಾ ನೀತಿ ಸಂಹಿತೆ 1961ರ ನಿಯಮ 89ರ ತಿದ್ದುಪಡಿ ಮಾಡಬೇಕಾಗುತ್ತದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ ಹಾಗೂ ಜನಪ್ರತಿನಿಧಿ ಕಾಯಿದೆಯ ತಿದ್ದುಪಡಿ ಮೂಲಕ ರಾಜಕೀಯ ಪಕ್ಷಗಳನ್ನು ವಿದೇಶಿ ದೇಣಿಗೆಯಿಂದ ದೂರವಿಡುವ ಯೋಜನೆ ರೂಪಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಟ್ಟವರ ಹೆಸರು ಬಹಿರಂಗಪಡಿಸಬೇಕು ಮತ್ತು ಪಕ್ಷಗಳು 2,000 ರೂಪಾಯಿಗಿಂತಲೂ ಹೆಚ್ಚಿನ ಮೊತ್ತದೆ ದೇಣಿಗೆಯನ್ನು ಅನಾಮದೇಯವಾಗಿ ಉಳಿಸಿಕೊಳ್ಳುವಂತಿಲ್ಲ ಎಂದು ಭಾರತೀಯ ಚುನಾವಣಾ ಆಯೋಗದ ಕರಡು ತಿದ್ದುಪಡಿಯಲ್ಲಿ ಹೇಳಲಾಗಿದೆ.

ರಾಜಕೀಯ ಪಕ್ಷಗಳು ಈವರೆಗೆ 20,000ಕ್ಕಿಂತ ಹೆಚ್ಚಿನ ದೇಣಿಗೆಗಳನ್ನು ಚುನಾವಣಾ ಆಯೋಗಕ್ಕೆ ತಿಳಿಸಬೇಕೆನ್ನುವ ನಿಯಮ ಜಾರಿಯಲ್ಲಿದೆ.

ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ. ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹ ಪರಿಷ್ಕರಿಸುವ ಉದ್ದೇಶದಿಂದ ಜನಪ್ರತಿನಿಧಿ ಕಾಯಿದೆ ತಿದ್ದುಪಡಿ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? 10 ಸಾವಿರ ಕೋಟಿ ರೂ. ಗಡಿ ದಾಟಿದ ಚುನಾವಣಾ ಬಾಂಡ್‌ ಮಾರಾಟ, ಬಿಜೆಪಿಗೆ ಸಿಂಹಪಾಲು

ಚುನಾವಣಾ ಹಣಕಾಸಿನ ವ್ಯವಹಾರದ ಮೇಲೆ ಗಮನವಿಡುವ ಉದ್ದೇಶದಿಂದ ಆಯೋಗವು, ಪ್ರತಿ ಚುನಾವಣೆಯಲ್ಲೂ ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಶಾಸಕ ಸ್ಥಾನ ಮತ್ತು ಸಂಸದ ಎರಡೂ ಸ್ಥಾನಗಳಿಗೆ ಸ್ಪರ್ಧಿಸಿದರೆ ಪ್ರತ್ಯೇಕ ಎರಡು ಖಾತೆಗಳನ್ನು ತೆರೆಯಬೇಕಾಗುತ್ತದೆ. 

ಕೆಲವು ರಾಜಕೀಯ ಪಕ್ಷಗಳು ದೊಡ್ಡ ಮೊತ್ತವನ್ನು ಸ್ವೀಕರಿಸಿದ್ದರೂ ಆಯೋಗಕ್ಕೆ ಯಾವುದೇ ಮಾಹಿತಿ ನೀಡಿಲ್ಲ. 20,000 ರೂಪಾಯಿ ಮಿತಿಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆದಿದೆ. ಹಾಗಾಗಿ 2,000ಕ್ಕಿಂತ ಹೆಚ್ಚಿನ ಸ್ವೀಕೃತಿ ದೇಣಿಗೆಯನ್ನು ಬಹಿರಂಗಪಡಿಸುವಂತೆ ಆಯೋಗ ಸೂಚಿಸಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180