ಉಪರಾಷ್ಟ್ರಪತಿ ಚುನಾವಣೆ| ಮತದಾನ ಪ್ರಕ್ರಿಯೆ ಆರಂಭ, ಮತ ಚಲಾಯಿಸಿದ ಪ್ರಧಾನಿ ಮೋದಿ

Narendra Modi
  • ಉಭಯ ಸದನಗಳ 780 ಸದಸ್ಯರು ಚುನಾವಣೆಯಲ್ಲಿ ಮತಚಲಾವಣೆ
  • ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್‌ ಆಳ್ವಾ ಅವರಿಗೆ ಟಿಆರ್‍‌ಎಸ್ ಬೆಂಬಲ

ರಾಷ್ಟ್ರಪತಿ ಆಯ್ಕೆಯ ಬಳಿಕ ಉಪರಾಷ್ಟ್ರಪತಿ ಚುನಾವಣೆ ಭಾರಿ ಕುತೂಹಲ ಕೆರಳಿಸಿದ್ದು ಶನಿವಾರ ಬೆಳಗ್ಗೆಯಿಂದ ಮತದಾನ ಆರಂಭವಾಗಿದೆ.

ಬೆಳಿಗ್ಗೆ 10 ಗಂಟೆಯಿಂದ ಉಪರಾಷ್ಟ್ರಪತಿ ಆಯ್ಕೆಗೆ ಮತದಾನ ಆರಂಭವಾಗುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ಮತವನ್ನು ಚಲಾಯಿಸಿದ್ದಾರೆ. ಮತದಾನದ ನಂತರ ಮತ ಎಣಿಕೆ ನಡೆಯಲಿದ್ದು ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ ಎನ್ನಲಾಗಿದೆ. 

ಪಶ್ಚಿಮಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್‌ ಧನಕರ್‍‌ (71) ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ. ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್‌ ಆಳ್ವಾ (80) ಅವರು ಸ್ಪರ್ಧಿಸುತ್ತಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಮುಂಗಾರು ಅಧಿವೇಶನ | ಸಂಸದರಿಗೆ ವಿಚಾರಣೆಯಿಂದ ವಿನಾಯಿತಿ ಇಲ್ಲ ಎಂದ ವೆಂಕಯ್ಯ ನಾಯ್ಡು

ಆಡಳಿತಾರೂಢ ಬಿಜೆಪಿಯು ಲೋಕಸಭೆಯಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿದೆ. ರಾಜ್ಯಸಭೆಯಲ್ಲಿ 91 ಸದಸ್ಯರ ಬಲವನ್ನು ಹೊಂದಿದೆ. 

ಎನ್‌ಡಿಎ ಅಭ್ಯರ್ಥಿ ಧನ್‌ಕರ್‍‌ ಅವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ಹೇಳಿವೆ. ಹಾಲಿ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರವಧಿಯು ಆಗಸ್ಟ್‌ 10ರಂದು ಮುಕ್ತಾಯಗೊಳ್ಳಲಿದೆ. 

ಯಾರು ಮತ ಚಲಾಯಿಸಬಹುದು?

ನಾಮನಿರ್ದೇಶಿತ ಸದಸ್ಯರು ಸೇರಿ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸಂಸದರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಲು ಅರ್ಹರು. 

ಎಷ್ಟು ಸದಸ್ಯರು ಮತ ಚಲಾವಣೆ?

ಸಂಸತ್ತಿನ ಎರಡು ಸದನಗಳಿಂದ ಒಟ್ಟು 788 ಮತಗಳಿವೆ. ರಾಜ್ಯಸಭೆಯಲ್ಲಿ ಎಂಟು ಸ್ಥಾನಗಳು ಖಾಲಿ ಇವೆ. ಆದ್ದರಿಂದ 780 ಮಂದಿ ಮಾತ್ರ ಈ ಚುನಾವಣೆಯಲ್ಲಿ ಮತಚಲಾವಣೆ ಮಾಡಲಿದ್ದಾರೆ. 

ದೂರ ಉಳಿಯಲಿರುವ ಟಿಎಂಸಿ

ಉಪರಾಷ್ಟ್ರಪತಿ ಚುನಾವಣೆಯ ಮತದಾನದಿಂದ ದೂರ ಉಳಿಯಲು ಟಿಎಂಸಿ ನಿರ್ಧರಿಸಿದೆ. ಈ ಬಗ್ಗೆ ಟಿಎಂಸಿ ಸಂಸದ ಮತ್ತು ಲೋಕಸಭೆ ಸಂಸದೀಯ ಪಕ್ಷದ ನಾಯಕ ಸುದೀಪ್‌ ಬಂಡೋಪಾಧ್ಯಾಯ ಅವರು ಪಕ್ಷದ ಸಂಸದರಿಗೆ ಸೂಚನೆ ನೀಡಿದ್ದಾರೆ. 

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍‌ಎಸ್) ಪಕ್ಷವು ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್‌ ಆಳ್ವಾ ಅವರನ್ನು ಬೆಂಬಲಿಸುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್