ಮೆಟಾ ವರದಿ | ಫೇಸ್‌ಬುಕ್‌ನಲ್ಲಿ ಶೇ. 38ರಷ್ಟು ದ್ವೇಷ ಭಾಷಣ ಹೆಚ್ಚಳ

  • ಏಪ್ರಿಲ್‌ ತಿಂಗಳ ವರದಿ ಮೇ ಅಂತ್ಯದಲ್ಲಿ ಬಿಡುಗಡೆ
  • "ನಿಯಮ ಮೀರುವವರ ವಿರುದ್ದ ಕ್ರಮಕ್ಕೆ ಮೆಟಾ ಸಿದ್ದತೆ" 

ದೇಶದಲ್ಲಿ ದ್ವೇಷ ಭಾಷಣಗಳು ಮತ್ತು ಧಾರ್ಮಿಕ ಉನ್ಮಾದಗಳು ಹಾಗೂ ಹಿಂಸಾತ್ಮಕ ವಿಷಯಗಳು ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಇದೇ ಹೊತ್ತಿನಲ್ಲಿ ಜನಪ್ರಿಯ ಸಾಮಾಜಿಕ ಜಾಲತಾಣ ಮೆಟಾ ಒಡೆತನದ ಫೇಸ್‌ಬುಕ್‌ನಲ್ಲಿ ದ್ವೇಷ ಭಾಷಣದಂತಹ ವಿಷಯಗಳ ಹಂಚಿಕೆಯಲ್ಲಿ ಶೇ. 37.82ರಷ್ಟು ಏರಿಕೆಯಾಗಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. 

"ಇನ್‌ಸ್ಟಾಗ್ರಾಮ್‌ನಲ್ಲಿ ‘ಹಿಂಸಾತ್ಮಕ ಪ್ರಚೋದನೆ' ವಿಷಯಗಳು ಶೇ. 86ರಷ್ಟು ಏರಿಕೆಯಾಗಿವೆ. ಇಂತಹ ಆಘಾತಕಾರಿ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಮುಖ್ಯತೆ ಪಡೆಯುತ್ತಿರುವುದು ಭಾರತದಂತಹ ಪ್ರಜಾಪ್ರಭುತ್ವ ದೇಶಕ್ಕೆ ಮುಳ್ಳಾಗಿದ್ದು, ಎಲ್ಲರೂ ಆಲೋಚನೆ ಮಾಡಬೇಕಾದ ಸಮಯ ಬಂದಿದೆ" ಎಂದು ಮೆಟಾ ಬಿಡುಗಡೆ ಮಾಡಿದ ಏಪ್ರಿಲ್‌ ತಿಂಗಳ ವರದಿಯಲ್ಲಿ ಹೇಳಲಾಗಿದೆ.

ಈ ಸುದ್ದಿ ಓದಿದ್ದೀರಾ? ಇನ್‌ಸ್ಟಾಗ್ರಾಂನಲ್ಲಿ ಡಿಜಿಟಲ್ ಎನ್‌ಎಫ್‌ಟಿ ಪ್ರಾರಂಭಿಸಲಿದ್ದೇವೆ: ಮಾರ್ಕ್ ಜುಕರ್‌ಬರ್ಗ್

ವರದಿಯಲ್ಲಿರುವ ಹೆಚ್ಚಿನ ವಿಷಯಗಳನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ವರದಿ ಮಾಡುವ ಮುಂಚಿತಾವಾಗಿ, ಆಯಾ ತಾಣಗಳೇ ಪತ್ತೆಹಚ್ಚಿವೆ. 

ಮೇ 31ರಂದು ಬಿಡುಗಡೆಗೊಳಿಸಿದ ವರದಿ ಪ್ರಕಾರ, "ಏಪ್ರಿಲ್ ತಿಂಗಳಿನಲ್ಲಿ 53,200 ದ್ವೇಷ ಭಾಷಣಗಳನ್ನು ಫೇಸ್‌ಬುಕ್‌ ಪತ್ತೆಹಚ್ಚಿದೆ. ಅದಕ್ಕೂ ಹಿಂದಿನ ತಿಂಗಳು ಮಾರ್ಚ್‌ನಲ್ಲಿ 38,600 ದ್ವೇಷ ಭಾಷಣಗಳನ್ನು ಪತ್ತೆಹಚ್ಚಿದೆ. ಫೇಸ್‌ಬುಕ್‌ನಲ್ಲಿ ಮಾರ್ಚ್‌ಗಿಂತ ಏಪ್ರಿಲ್‌ ತಿಂಗಳಲ್ಲಿ ಶೇ. 37.82ರಷ್ಟು ದ್ವೇಷ ಭಾಷಣದ ಪ್ರಮಾಣ ಹೆಚ್ಚಾಗಿದೆ. 

ಇನ್‌ಸ್ಟಾಗ್ರಾಮ್‌ ಕುರಿತ ವರದಿ ಪ್ರಕಾರ, "ಹಿಂಸಾತ್ಮಕ ಪ್ರಚೋದನೆಗೆ ಸಂಬಂಧಿಸಿದ 77,000 ದ್ವೇಷಪೂರಿತ ಪೋಸ್ಟ್‌ಗಳನ್ನು ಏಪ್ರಿಲ್‌ನಲ್ಲಿ ಪತ್ತೆಮಾಡಲಾಗಿದೆ. 41,300 'ಪೋಸ್ಟ್‌'ಗಳು ಮಾರ್ಷ್‌ನಲ್ಲಿ ಪತ್ತೆಯಾಗಿವೆ.

“ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ದ್ವೇಷ ಭಾಷಣದಂತಹ ವಿಷಯಗಳನ್ನು ತೆಗೆದು ಹಾಕುವುದು ಅಥವಾ ಅಂತಹ ವಿಡಿಯೋ ಮತ್ತು ಪೋಟೋಗಳ ಮೇಲೆ ಎಚ್ಚರಿಕೆ ಸಂದೇಶಗಳನ್ನು ಹಾಕುವ ಮೂಲಕ ಕ್ರಮ ತೆಗೆದುಕೊಳ್ಳತ್ತಿದೆ” ಎಂದು ವರದಿ ತಿಳಿಸಿದೆ. 

"ಪೋಸ್ಟ್ , ಪೋಟೊ, ವಿಡಿಯೋ, ಕಾಮೆಂಟ್ - ಎಲ್ಲವನ್ನು ಕುಲಂಕೂಷವಾಗಿ ಪರಿಶೀಲಿಸಿ ವರದಿ ಮಾಡಲಾಗಿದ್ದು, ಸಂಸ್ಥೆಯ ನೀತಿಗೆ ವಿರುದ್ದವಾಗಿ ಪೋಸ್ಟ್‌ ಹಾಕುವ ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ವರದಿಯಲ್ಲಿ ಮೆಟಾ ಹೇಳಿದೆ.
 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app