ಮುನಿರತ್ನ ಆಪ್ತರ ಮನೆಯಲ್ಲಿ ನಕಲಿ ಗುರುತಿನ ಚೀಟಿ ತಯಾರಿಸಲಾಗುತ್ತಿತ್ತು : ಎಂಎಲ್ಸಿ ಮುನಿರಾಜುಗೌಡ

munirathna
  • ಮುನಿರತ್ನ ಆಯ್ಕೆ ಅನೂರ್ಜಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ
  • ನಮ್ಮ ಮೇಲೆ ಮುನಿರತ್ನ ಆಪ್ತರು ಹಲ್ಲೆ ನಡೆಸಿ ಗಾಯಗೊಳಿಸಿದ್ದರು

ಸಚಿವ ಮುನಿರತ್ನ ವಿರುದ್ಧದ ನಕಲಿ ಗುರುತಿನ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಬಿಜೆಪಿ ಮುಖಂಡ ಮುನಿರಾಜುಗೌಡ ಅವರು ಪಾಟೀಸವಾಲು ಎದುರಿಸಿದ್ದಾರೆ. 

ಚುನಾವಣಾ ಅಕ್ರಮ ಎಸಗಿರುವ ಮುನಿರತ್ನ ಆಯ್ಕೆಯನ್ನು ʼಜನತಾ ಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 123ʼರ  ಅಡಿಯಲ್ಲಿ ಅನೂರ್ಜಿತಗೊಳಿಸುವಂತೆ ಕೋರಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಮುನಿರಾಜುಗೌಡ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ನಡೆಸಿತು.

"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರ್ ಆರ್ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನಿರತ್ನ ಅವರ ಆಪ್ತರ  ಮನೆಯಲ್ಲಿ ನಕಲಿ ಚುನಾವಣಾ ಗುರುತಿನ ಚೀಟಿಗಳನ್ನು ತಯಾರಿಸಲಾಗುತ್ತಿತ್ತು. ಅಲ್ಲಿನ ಕೊಠಡಿಯೊಂದರಲ್ಲಿ ವೋಟರ್ ಐಡಿಗಳ ರಾಶಿ, ಪ್ರಿಂಟಿಂಗ್ ಮಷಿನ್‌ಗಳು, ಲ್ಯಾಮಿನೇಷನ್ ಯಂತ್ರಗಳು ಬಿಬಿಎಂಪಿ ಸೀಲ್‌ಗಳು, ಲ್ಯಾಪ್‌ಟಾಪ್‌, ಮೊಬೈಲ್ ಮತ್ತಿತರ ವಸ್ತುಗಳು ಪತ್ತೆಯಾಗಿದ್ದವು” ಎಂದು ಮುನಿರಾಜುಗೌಡ ಸಾಕ್ಷಿ ಹೇಳಿದರು.

ಈ ಸುದ್ದಿ ಓದಿದ್ದೀರಾ?: ಈಶ್ವರಪ್ಪಗೆ ತಪ್ಪದ ಸಂಕಷ್ಟ | ಸಂತೋಷ್‌ ಆತ್ಮಹತ್ಯೆ ಪ್ರಕರಣದ ಬಿ ರಿಪೋರ್ಟ್ ಪ್ರಶ್ನಿಸಿ ಕೋರ್ಟ್​ಗೆ ಅರ್ಜಿ

ಅರ್ಜಿದಾರರ ಪರ ವಕೀಲ ಎಂ ಶಿವಪ್ರಕಾಶ್ ಪ್ರಶ್ನೆಗಳಿಗೆ ಉತ್ತರಿಸಿದ ಮುನಿರಾಜುಗೌಡ, "ಎಸ್ಎಲ್‌ವಿ ಪಾರ್ಕ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿದ್ದ ಮುನಿರತ್ನ ಆಪ್ತರೊಬ್ಬರ ಮನೆಯಲ್ಲಿ ನಕಲಿ ಗುರುತಿನ ಚೀಟಿಗಳನ್ನು ತಯಾರಿಸುತ್ತಿರುವ ಕುರಿತು ನಮಗೆ ಮಾಹಿತಿ ದೊರೆತಿತ್ತು. ರಾಕೇಶ್ ಮತ್ತು ಲಿಖಿತ್ ಎಂಬುವರ ಜತೆಗೆ ಅಲ್ಲಿಗೆ ತೆರಳಿದ್ದೆವು. ಸ್ಥಳಕ್ಕೆ ತೆರಳಿದ್ದ ನಮ್ಮ ಮೇಲೆ ಮುನಿರತ್ನ ಅವರ ಸಹಚರರು ಹಲ್ಲೆ ನಡೆಸಿದರು. ಒಳಗಿದ್ದವರು ವಾಹನಗಳ ಮೂಲಕ ಪರಾರಿಯಾದರು. ಕೋದಂಡರಾಮ, ಆನಂದನ್ ಹಾಗೂ ಕುಮಾರ್ ಎಂಬುವವರು ಕೊಠಡಿಯಲ್ಲಿದ್ದ ವೋಟರ್ ಐಡಿಗಳನ್ನು ಬೆಂಕಿಗೆ ಹಾಕಿ ನಾಶ ಮಾಡುತ್ತಿದ್ದರು. ಈ ಎಲ್ಲ ದೃಶ್ಯಗಳು ಅದೇ ಪ್ರದೇಶದ ಕಾರು ವಾಶಿಂಗ್ ಸೆಂಟರ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ" ಎಂದು ಅವರು ವಿವರಿಸಿದರು. 

ನಿಮಗೆ ಏನು ಅನ್ನಿಸ್ತು?
1 ವೋಟ್