ದೆಹಲಿಯಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರ ಬಂಧನ

  • ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿಲ್ಲದ ಕಾಮುಕರ ಅಟ್ಟಹಾಸ
  • ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

ಹದಿನಾರು ವರ್ಷದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪದಡಿ ದೆಹಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಓರ್ವ ಸಂತ್ರಸ್ತೆಯ ಸ್ನೇಹಿತ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಜುಲೈ 6ರಂದು ಬಾಲಕಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಸುತ್ತಾಡಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು, ಟ್ಯಾಕ್ಸಿ ಚಾಲಕ ಸೇರಿ ಮೂವರನ್ನು ಬಂಧಿಸಿದ್ದಾರೆ.  

ಆರೋಪಿಗಳನ್ನು ಮೊಹಮ್ಮದ್ ಆರಿಫ್ (23), ಮನೋಜ್ ಕುಮಾರ್ (25) ಹಾಗೂ ರೂಪೇಶ್ ಕುಮಾರ್ (35) ಎಂದು ಗುರುತಿಸಲಾಗಿದೆ. 

ನಾವು ಸಿಆರ್‌ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ. ಜುಲೈ 8ರ ಮುಂಜಾನೆ 4ರ ಸುಮಾರಿಗೆ ಆಸ್ಪತ್ರೆಯಿಂದ ಬಾಲಕಿ ತಂದೆ ಕರೆ ಮಾಡಿ, "ನನ್ನ ಮಗಳಿಗೆ ಮೂವರು ದುಷ್ಕರ್ಮಿಗಳು ಕಿರುಕುಳ ನೀಡಿದ್ದಾರೆ ಎಂದು ಹೇಳಿದರು. ಜುಲೈ 6ರಂದು ರಾತ್ರಿ 8.30ರ ಸುಮಾರಿಗೆ ನನ್ನ ಮಗಳು ಸುತ್ತಾಡಲು ತನ್ನ ಗೆಳೆಯರೊಂದಿಗೆ ಹೊರಗೆ ಹೋಗಿದ್ದಳು. ಜುಲೈ 7ರ ಬೆಳಗ್ಗೆ 7ಕ್ಕೆ ಸುಮಾರಿಗೆ ಮನೆಗೆ ಹಿಂದಿರುಗಿದ ಆಕೆ ನಡೆದ ಎಲ್ಲ ವಿಷಯ ನಮಗೆ ತಿಳಿಸಿದಳು" ಎಂದು ಆಕೆಯ ತಂದೆ ಹೇಳಿರುವುದಾಗಿ ಡಿಸಿಪಿ ಮನೋಜ್‌ ಮಾಹಿತಿ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? : ಆಂಧ್ರಪ್ರದೇಶ | ಮಹಿಳೆಯನ್ನು ಬೆದರಿಸಿ ಅತ್ಯಾಚಾರವೆಸಗಿದ ಪೊಲೀಸ್‌ ಅಧಿಕಾರಿ ಅಮಾನತು

ಜುಲೈ 6ರ ರಾತ್ರಿ ವ್ಯಾಗನ್‌ ಆರ್‌ ಕಾರಿನಲ್ಲಿ ಜಾಲಿರೈಡ್‌ಗೆಂದು ಬಾಲಕಿ ತನ್ನ ಸ್ನೇಹಿತರೊಂದಿಗೆ ಹೊರಗೆ ಹೋಗಿದ್ದಾಳೆ. ಚಾಲಕನೂ ಸೇರಿ ನಾಲ್ವರು ಮದ್ಯ ಸೇವಿಸಿದ್ದು, ಆಕೆಯನ್ನು ಅಜ್ಞಾನ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಕಾರಿನೊಳಗೆ ಇಬ್ಬರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. 

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app