ಹೆಣ್ಣು ಮಕ್ಕಳು ರಾಷ್ಟ್ರದ ದೊಡ್ಡ ಭರವಸೆ: ರಾಷ್ಟ್ರಪತಿಯಾಗಿ ಚೊಚ್ಚಲ ಭಾಷಣದಲ್ಲಿ ದ್ರೌಪದಿ ಮುರ್ಮು

ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದ ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶವನ್ನುದ್ದೇಶಿಸಿ ಚೊಚ್ಚಲ ಭಾಷಣ ಮಾಡಿದ ದ್ರೌಪದಿ ಮುರ್ಮು ಅವರು,"ಹೆಣ್ಣು ಮಕ್ಕಳು ರಾಷ್ಟ್ರದ ದೊಡ್ಡ ಭರವಸೆ” ಎಂದು ಹೇಳಿದರು.

ಇಂದು (ಆಗಸ್ಟ್‌ 14ರಂದು) ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮುರ್ಮು, "ನಾಳೆ ವಸಾಹತುಶಾಹಿಗಳ ಆಡಳಿತದ ಸಂಕೋಲೆಯಿಂದ ನಮ್ಮನ್ನು ಮುಕ್ತಗೊಳಿಸಿದ ದಿನವಾಗಿದೆ. ನಾವು ಸ್ವತಂತ್ರ ಭಾರತದಲ್ಲಿ ಬದುಕಲು ಸಾಧ್ಯವಾಗುವಂತೆ ಅಪಾರ ತ್ಯಾಗ ಮಾಡಿದವರಿಗೆ ನಾವು ಧನ್ಯವಾದ ಅರ್ಪಿಸುತ್ತಾ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತೇವೆ” ಎಂದು ಹೇಳಿದರು.

"ಇತರ ಪ್ರಜಾಪ್ರಭುತ್ವಗಳಲ್ಲಿ, ಮಹಿಳೆಯರು ಮತದಾನದ ಹಕ್ಕನ್ನು ಪಡೆಯಲು ದೀರ್ಘಾವಧಿಯ ಹೋರಾಟ ನಡೆಸಬೇಕಾಯಿತು. ಆದರೆ ಪ್ರಜಾಪ್ರಭುತ್ವದ ನಿಜವಾದ ಸಾಮರ್ಥ್ಯವನ್ನು ಕಂಡುಹಿಡಿಯಲು ಜಗತ್ತಿಗೆ ತೋರಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ನಮ್ಮ ಹೆಣ್ಣುಮಕ್ಕಳು ರಾಷ್ಟ್ರದ ದೊಡ್ಡ ಭರವಸೆಯಾಗಿದ್ದಾರೆ” ಎಂದು ಹೇಳಿದರು.

"ಅನೇಕ ವೀರರ ಹೋರಾಟಗಳನ್ನು ವಿಶೇಷವಾಗಿ ರೈತರು ಮತ್ತು ಬುಡಕಟ್ಟು ಜನಾಂಗದವರು ಮರೆತು ಹೋಗಿದ್ದಾರೆ. ನವೆಂಬರ್ 15 ಅನ್ನು 'ಜನಜಾತಿಯ ಗೌರವ್ ದಿವಸ್' ಎಂದು ಆಚರಿಸುವ ಸರ್ಕಾರದ ನಿರ್ಧಾರವು ಸ್ವಾಗತಾರ್ಹವಾಗಿದೆ. ನಮ್ಮ ಬುಡಕಟ್ಟು ನಾಯಕರು ಕೇವಲ ಸ್ಥಳೀಯ ಅಥವಾ ಪ್ರಾದೇಶಿಕ ಐಕಾನ್‌ಗಳಲ್ಲ. ಹಾಗಾಗಿ ಇದು ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯ ವಿಷಯ" ಎಂದರು.

"ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ, ನಾವು ನಮ್ಮ 'ಭಾರತೀಯತೆ'ಯನ್ನು ಆಚರಿಸುತ್ತೇವೆ. ಭಾರತವು ವೈವಿಧ್ಯತೆಯಿಂದ ತುಂಬಿದೆ. ಈ ಸಾಮಾನ್ಯ ಎಳೆಯು ನಮ್ಮನ್ನು ಒಟ್ಟಿಗೆ ಇರಿಸುತ್ತದೆ ಮತ್ತು ಒಂದು ಎಂಬ ಮನೋಭಾವ ಒಟ್ಟಿಗೆ ಜೀವಿಸಲು ಪ್ರೇರೇಪಿಸುತ್ತದೆ. ಭಾರತ ಶ್ರೇಷ್ಠ ಭಾರತ' ಎಂದು ತಮ್ಮ ಭಾಷಣ ಮುಗಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್