ಮೇಕೆದಾಟು ಯೋಜನೆ | ಜಲಾಶಯ ನಿರ್ಮಾಣ ವಿವಾದ ಇತ್ಯರ್ಥ: ಪ್ರಾಧಿಕಾರಕ್ಕಿಲ್ಲ ಅಧಿಕಾರ ಎಂದ ತಮಿಳುನಾಡು

ಮೇಕೆದಾಟು ಯೋಜನೆ
  • ಕುಡಿಯುವ ನೀರಿಗಾಗಿ ಕರ್ನಾಟಕದ ಮೇಕೆದಾಟು ಯೋಜನೆ: ಸಿಡಬ್ಲ್ಯುಎಂಎ ಸಮ್ಮತಿ
  • ಹರಿಯುವ ನೀರಿಗೆ ತಡೆ ನಿರ್ಮಿಸುವ ಅಧಿಕಾರ ಕರ್ನಾಟಕಕ್ಕಿಲ್ಲ: ತಮಿಳುನಾಡು

ಕಾವೇರಿ ನದಿಗೆ ಅಡ್ಡಲಾಗಿರುವ ಮೇಕೆದಾಟು ಜಲಾಶಯದ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ಯಾವುದೇ ಅಧಿಕಾರವಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಕುರಿತು ಮಂಗಳವಾರ, ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವ ತಮಿಳುನಾಡು ಸರ್ಕಾರ, "2007ರ ಫೆಬ್ರುವರಿ 2ರಂದು ಕಾವೇರಿ ಜಲ ವಿವಾದ ನ್ಯಾಯಮಂಡಳಿ ನೀಡಿರುವ ಆದೇಶವನ್ನು ಅನುಷ್ಠಾನ ಮಾಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸಲಾಗಿದೆ. ಆದರೆ ಮೇಕೆದಾಟು ಸಮತೋಲನ ಜಲಾಶಯ ಸೇರಿದಂತೆ ಹೊಸ ಯೋಜನೆಗಳ ಬಗ್ಗೆ ಚರ್ಚೆ ನಡೆಸುವ ಅಧಿಕಾರ ಈ ಪ್ರಾಧಿಕಾರಕ್ಕಿಲ್ಲ" ಎಂದು ಹೇಳಿದೆ.

Eedina App

ಅನಿಯಂತ್ರಿತ (ಮಧ್ಯಂತರ) ಜಲಾಶಯ ಅಥವಾ ಹರಿಯುವ ನೀರಿಗೆ ತಡೆ ನಿರ್ಮಿಸುವ ಅಧಿಕಾರ ಕರ್ನಾಟಕಕ್ಕಿಲ್ಲ. ಆದುದರಿಂದ ಮೇಕೆದಾಟಿನಲ್ಲಿ 67.16 ಟಿಎಂಸಿ ಸಾಮರ್ಥ್ಯದ ಶೇಖರಣಾ ಜಲಾಶಯವನ್ನು ನಿರ್ಮಿಸಲು ಪ್ರಸ್ತಾಪಿಸುವ ಮೂಲಕ ನೀರಿನ ಅನಿಯಂತ್ರಿತ ಹರಿವನ್ನು ತಡೆಹಿಡಿಯುವ ಯಾವುದೇ ಪ್ರಯತ್ನ ಅಥವಾ ಯೋಜನೆ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದಂತೆ ಎಂದಿದೆ.

ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಈ ಹಿಂದಿನ ಅಭಿಪ್ರಾಯವನ್ನು ಉಲ್ಲೇಖಿಸಿ, "ಮಾರ್ಪಡಿಸಿದ ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಪ್ರಕಾರ ಮೇಕೆದಾಟು ಯೋಜನೆಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಸಿಡಬ್ಲ್ಯುಎಂಎ ಹೊಂದಿದೆ" ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

AV Eye Hospital ad

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಕನಕಪುರ ಸಮೀಪದ ಮೇಕೆದಾಟು ಎಂಬಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸರಿದೂಗಿಸುವ (ಬ್ಯಾಲೆನ್ಸಿಂಗ್) ಜಲಾಶಯ ನಿರ್ಮಿಸಲು ಕರ್ನಾಟಕ ಮುಂದಾಗಿದೆ. ಆದರೆ, ತಮಿಳುನಾಡು ಸರ್ಕಾರ ಹಿಂದಿನಿಂದಲೂ ಈ ಯೋಜನೆಯನ್ನು ವಿರೋಧಿಸುತ್ತಲೇ ಬಂದಿದೆ.

ಈ ಸುದ್ದಿ ಓದಿದ್ದೀರಾ? ಪಿಎಂ ಕಿಸಾನ್‌ ಯೋಜನೆ | ಫಲಾನುಭವಿಗಳ ಸಂಖ್ಯೆ 10 ಕೋಟಿ ದಾಟಿದೆ: ಕೇಂದ್ರ ಸರ್ಕಾರ

ಮೇಕೆದಾಟು ಯೋಜನೆಗೆ ಚರ್ಚಿಸಿ ಅನುಮೋದನೆ ನೀಡುವ ಅಧಿಕಾರ ತನಗೆ ಇದೆ. ಜೊತೆಗೆ ತಮಿಳುನಾಡು ಸರ್ಕಾರ ಕೂಡ ಈ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಒತ್ತಾಯಿಸಿದೆ. ಆದರೆ ಪಟ್ಟುಬಿಡದ ತಮಿಳುನಾಡು ಸರ್ಕಾರ, ಕಾವೇರಿ ಜಲಾನಯನ ಪ್ರದೇಶದ ಯೋಜನೆಗಳ ಬಗ್ಗೆ ಚರ್ಚಿಸಲು ಸಿಡಬ್ಲ್ಯುಎಂಎಗೆ ಅಧಿಕಾರವೇ ಇಲ್ಲ ಎಂದು ವಾದಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app