ಚೆನೈಗೆ ಪ್ರಧಾನಿ ಮೋದಿ ಭೇಟಿ; ಮತ್ತೆ ಟ್ರೆಂಡ್‌ ಆದ ‘ಗೋ ಬ್ಯಾಕ್‌ ಮೋದಿ’ ಹ್ಯಾಶ್‌ ಟ್ಯಾಗ್

modi-chennai
  • 2018ರಲ್ಲಿ ಪ್ರಧಾನಿ ವಿರುದ್ಧ ಟ್ರೆಂಡ್‌ ಆಗಿದ್ದ ಹ್ಯಾಶ್‌ ಟ್ಯಾಗ್‌ 
  • ಚೆನ್ನೈ ಮತ್ತಿತರ ರಾಜ್ಯಗಳಲ್ಲೂ ಜನಪ್ರಿಯವಾದ 'ಮೋದಿ ಗೋ ಬ್ಯಾಕ್‌' 

ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಚೆನ್ನೈಗೆ ಬಂದಿದ್ದ ಪ್ರಧಾನಿ ಮೋದಿ ಅವರಿಗೆ ರಾಜ್ಯದ ಜನತೆ 2018ರಂತೆ ಮತ್ತೊಮ್ಮೆ  'ಮೋದಿ ಗೋ ಬ್ಯಾಕ್‌' ಸಂದೇಶದ ಮೂಲಕ ಎಚ್ಚರಿಕೆ ರವಾನಿಸಿದ್ದಾರೆ.
5,855 ಕೋಟಿ ವೆಚ್ಚದ 20.6 ಕಿಲೋ ಮೀಟರ್ ಉದ್ದದ ಡಬಲ್ ಡೆಕ್ಕರ್ ಎಲಿವೇಟೆಡ್ ಎಕ್ಸ್‌ಪ್ರೆಸ್ ಮಾರ್ಗದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚೆನೈಗೆ ಬಂದಿದ್ದ ಮೋದಿ ಅವರಿಗೆ ‘ಗೋ ಬ್ಯಾಕ್‌ ಮೋದಿ’ ಎಂದು ಅವರ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 

2018ರಲ್ಲೂ ಪ್ರಧಾನಿ ಮೋದಿ ತಮಿಳುನಾಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಟ್ವೀಟರ್‌ನಲ್ಲಿ ‘ಗೋ ಬ್ಯಾಕ್‌ ಮೋದಿ’ (#GoBackModi) ಹ್ಯಾಶ್‌ ಟ್ಯಾಗ್ ಟ್ರೆಂಡ್‌ ಆಗಿತ್ತು. ಟ್ವಿಟರ್‌ ಬಳಕೆದಾರರು ಗುರುವಾರ ಮತ್ತೆ ಈ ಹ್ಯಾಶ್‌ಟ್ಯಾಗ್‌ಗಳನ್ನು ಮರುಬಳಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. 

ಅಗತ್ಯ ವಸ್ತುಗಳು ಮತ್ತು ತೈಲಬೆಲೆ ಏರಿಕೆ, ಹಿಂದಿ ಭಾಷಾ ಹೇರಿಕೆ, ಉದ್ಯಮಿಗಳ ಓಲೈಕೆ, ಸೈದ್ಧಾಂತಿಕ ರಾಜಕಾರಣ, ಬುಲ್ಡೋಜರ್‌ ತಂತ್ರ, ಕೋಮು ಭಾವ ಮತ್ತಿತರ ಕಾರಣಗಳಿಂದ ಬಿಜೆಪಿ ನೇತೃತ್ವದ ಕೇಂದ್ರಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಜನರು ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

2018ರ ಏಪ್ರಿಲ್ 12ರಂದು ಚೆನ್ನೈನಲ್ಲಿ ‘ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಸೇಶನ್’ ಆಯೋಜಿಸಿದ್ದ ರಕ್ಷಣಾ ಇಲಾಖೆಯ ಪ್ರದರ್ಶನ ಉದ್ಘಾಟನೆಗೆ ಮೋದಿ ಆಗಮಿಸಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ‘ಗೋ ಬ್ಯಾಕ್ ಮೋದಿ’ ಹ್ಯಾಶ್‌ ಟ್ಯಾಗ್ ಕಾಣಿಸಿಕೊಂಡಿತ್ತು. ಅಂದಿನಿಂದ ತಮಿಳುನಾಡಿಗೆ ಭೇಟಿ ನೀಡಿದಾಗಲೆಲ್ಲ ‘ಗೋ ಬ್ಯಾಕ್ ಮೋದಿ’ ಹ್ಯಾಶ್‌ ಟ್ಯಾಂಗ್ ಟ್ರೆಂಡ್‌ ಆಗುತ್ತಲಿದೆ.

"1957ರಲ್ಲಿ ಪ್ರಧಾನಿ ನೆಹರು ತಮಿಳುನಾಯಕರನ್ನು ಟೀಕಿಸಿದ್ದರ ಪರಿಣಾಮ ತಮಿಳುನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ವಿರೋಧ ವ್ಯಕ್ತವಾಗಿತ್ತು. 1977ರ ತುರ್ತು ಪರಿಸ್ಥಿತಿ ನಂತರ ಇಂದಿರಗಾಂಧಿ ಚೆನೈಗೆ ಭೇಟಿ ನೀಡಿದ ಸಂದರ್ಭದಲ್ಲೂ ತಮಿಳುನಾಡಿನ ಜನತೆ ಕಪ್ಪು ಬಾವುಟ ತೋರಿಸಿ ಅಸಮಾಧಾನ ಹೊರಹಾಕಿದ್ದರು. ಆದರೆ ಮುಂದಿನ ಚುನಾವಣೆಗಳಲ್ಲಿ ಇಬ್ಬರೂ ಗೆದ್ದಿದ್ದರು. ಇದೆಲ್ಲ ಸಾಮಾನ್ಯವಾಗಿದ್ದು ಬಿಜೆಪಿಗೂ ಗೆಲ್ಲುವ ಅವಕಾಶವಿದೆ" ಎಂದು ಬರಹಗಾರ ಮತ್ತು ರಾಜಕೀಯ ವಿಶ್ಲೇಷಕ ಆರ್‌ ಮುತ್ತುಕುಮಾರ್ ವಿಶ್ಲೇಷಿಸಿದ್ದಾರೆ. 

ಆದರೆ ಮೋದಿ ಮತ್ತು ಬಿಜೆಪಿಯನ್ನು ತಮಿಳಿಗರು ತಿರಸ್ಕರಿಸಿದ್ದಾರೆ ಎಂಬುದನ್ನು  ಹ್ಯಾಶ್‌ ಟ್ಯಾಗ್ ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ವಿರೋಧ ಪಕ್ಷಗಳು ಹೇಳಿವೆ.

2016ರಲ್ಲಿ ಮೋದಿ ಕೇರಳ ಚುನಾವಣೆ ಪ್ರಚಾರಕ್ಕೆ ಹೋದಾಗ ಮಲೆಯಾಳಂ ಭಾಷೆಯಲ್ಲಿ ‘ಪೊಮೊನೆಮೋದಿ’ (PoMoneModi) ಎಂಬ ಹ್ಯಾಶ್‌ಟ್ಯಾಗ್‌ ಕೇರಳದಲ್ಲಿ ಟ್ರೆಂಡ್‌ ಆಗಿತ್ತು.

ROFL 😹😹😹😹#GoBackModi #GoBack_Modi pic.twitter.com/5EoOFwLDmi

ರಾಜ್ಯದ ತುಮಕೂರಿನ ಸಿದ್ದಗಂಗಾ ಮಠಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದಾಗಲೂ ‘ಗೋ ಬ್ಯಾಕ್‌ ಮೋದಿ’ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗಿತ್ತು. ಬೆಳಗಾವಿ ಗಡಿ ವಿವಾದ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ-ರಾಜ್ಯದ ಪರ ಧ್ವನಿ ಎತ್ತಲಿಲ್ಲವೆಂಬ ಅಸಮಾಧಾನವನ್ನು ಜನರು ಈ ರೀತಿ ವ್ಯಕ್ತಪಡಿಸಿದ್ದರು.  

 

ನಿಮಗೆ ಏನು ಅನ್ನಿಸ್ತು?
1 ವೋಟ್