ಗೂಗಲ್‌ ಫೋಟೋ | ಶೀಘ್ರದಲ್ಲೇ ಬರಲಿದೆ ʻಸಿನಿಮೀಯʼ ರೀತಿಯಲ್ಲಿ ನೆನಪು ಮೆಲುಕು ಹಾಕುವ ವೈಶಿಷ್ಟ್ಯ

  • ʻಸಿನಿಮೀಯʼ ರೀತಿಯಲ್ಲಿ ಫೋಟೋ ನೆನಪು ಮೆಲುಕಿನ ಆಯ್ಕೆ
  • ʻಗೂಗಲ್‌ ಫೋಟೋʼ ಆ್ಯಪ್‌ ಪರಿಚಯಿಸುತ್ತಿದೆ ಹೊಸ ವೈಶಿಷ್ಟ್ಯ

ʻಸಿನಿಮೀಯʼ ರೀತಿಯಲ್ಲಿ ನೆನಪುಗಳನ್ನು ಮೆಲುಕು ಹಾಕುವ ಹೊಸ ವೈಶಿಷ್ಟ್ಯವನ್ನು ʻಗೂಗಲ್‌ ಫೋಟೋʼ ಅಪ್ಲಿಕೇಷನ್‌ (ಆ್ಯಪ್‌) ಪರಿಚಯಿಸಲು ಮುಂದಾಗಿದೆ.

ʻಗೂಗಲ್‌ ಫೋಟೋʼ ಅಪ್ಲಿಕೇಷನ್‌ (ಆ್ಯಪ್‌) ಸೃಜನಶೀಲ ಹೊಸ ಸಾಧನಗಳೊಂದಿಗೆ ʻಕೊಲ್ಯಾಜ್‌ ಎಡಿಟರ್‌ʼ ಅನ್ನು ಅಪ್‌ಡೇಟ್‌ ಮಾಡುತ್ತಿದೆ. ಈಗಾಗಲೇ ಕೊಲ್ಯಾಜ್‌ ಮಾಡುವ ಆಯ್ಕೆ ಗೂಗಲ್‌ ಫೋಟೋ ಆ್ಯಪ್‌ನಲ್ಲಿತ್ತು. ಆದರೆ ಈ ಹೊಸ ಸಾಧನಗಳಿಂದ ಸಿನಿಮೀಯ ವಿಶುವೆಲ್‌ ಎಫೆಕ್ಟ್‌ಗಳು, ಮ್ಯೂಸ್‌ ಸೇರಿದಂತೆ ಹೊಸ ಆಯ್ಕೆಗಳನ್ನು ಈ ವೈಶಿಷ್ಟ್ಯದಲ್ಲಿ ನೀಡಲಾಗಿದೆ.

2019ರಲ್ಲಿ ಮೊದಲ ಬಾರಿಗೆ ಬಳಕೆದಾರರಿಗಾಗಿ ಮೆಮೊರಿ ಅಪ್‌ಗ್ರೇಡ್‌ನ ಭಾಗವಾಗಿ ಈ ಹೊಸ ವೈಶಿಷ್ಟ್ಯವನ್ನು ಹೊರತರಲಾಗುತ್ತದೆ ಎಂದು ಕಂಪನಿಯು ಈ ವಾರದ ಆರಂಭದಲ್ಲಿ  ಘೋಷಿಸಿತು.

ಒಂದು ವರ್ಷ ಅಥವಾ ಅದಕ್ಕಿಂತ ಹಿಂದಿನ ಫೋಟೋ, ಸ್ಟೋರಿಗಳನ್ನು ಸಿನಿಮೀಯ ಆಡಿಯೊ- ವಿಶುವಲ್ ಅನುಭವದ ಮೂಲಕ ಬಳಕೆದಾರರು ತಮ್ಮ ಹಳೆಯ ಫೋಟೋಗಳ ಟೈಮ್‌ಲೈನ್‌ನಲ್ಲಿ ಹಿಂತಿರುಗಿ ನೋಡುವ ಆಯ್ಕೆ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಗೂಗಲ್‌ ಫೋಟೋ ಆ್ಯಪ್‌ ನೆನಪುಗಳ ವೈಶಿಷ್ಟ್ಯವನ್ನು ನವೀಕರಿಸುತ್ತಿರುವುದಾಗಿ ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಿದೆ.

ಈ ಸುದ್ದಿ ಓದಿದ್ದೀರಾ?: ಕೋಲಾರ | ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು: ಶಾಸಕ ಕೆ.ಆರ್ ರಮೇಶ್ ಕುಮಾರ್

ಕಂಪನಿಯ ಪ್ರಕಾರ, ಗೂಗಲ್‌ ಫೋಟೋಗಳ ನೆನಪುಗಳು ಈಗ ಸ್ವಯಂಚಾಲಿತವಾಗಿ ಕೆಲವು ಉತ್ತಮ ತುಣುಕುಗಳನ್ನು ಆಯ್ಕೆ ಮಾಡಿ, ಬಳಕೆದಾರರನ್ನು ಆಕರ್ಷಿಸುತ್ತಿತ್ತು. ಪ್ರಸ್ತುತ ಈ ಹೊಸ ವೈಶಿಷ್ಟ್ಯವು ಸಿನಿಮೀಯ ರೀತಿಯಲ್ಲಿ ನೆನಪುಗಳನ್ನು ಮೆಲುಕು ಹಾಕಲು ಅವಕಾಶ ಮಾಡಿಕೊಡುತ್ತದೆ.

ಗೂಗಲ್ ಪ್ರಕಾರ, ʻಮೆಮೊರೀಸ್‌ʼ ವರ್ಗದಲ್ಲಿರುವ ಸ್ಥಿರ ಚಿತ್ರಗಳು, ಸ್ವಯಂಚಾಲಿತ ಸೂಕ್ಷ್ಮ ಜೂಮಿಂಗ್ ವಿಡಿಯೋ ಪರಿಣಾಮಗಳೊಂದಿಗೆ ಬಳಕೆದಾರರಿಗೆ ಹೆಚ್ಚು ತಲ್ಲೀನವಾಗುವಂತೆ ಕಾಣಿಸುತ್ತವೆ.

ಗೂಗಲ್ ಫೋಟೋಗಳು ʻಸ್ಟೈಲ್ಸ್ʼ ಎಂಬ ಹೊಸ ಆಯ್ಕೆಯನ್ನು ಕೊಲಾಜ್ ಎಡಿಟರ್‌ನಲ್ಲಿ ನೀಡಲಾಗಿದೆ. ಅಲ್ಲಿ ಬಳಕೆದಾರರು ʻಗ್ರಿಡ್ ವ್ಯವಸ್ಥೆʼ ಮೂಲಕ ಕೊಲಾಜ್‌ಗಳನ್ನು ಸಂಪಾದಿಸಬಹುದು ಮತ್ತು ಹಿನ್ನೆಲೆ ಸಂಗೀತವನ್ನು ಕೂಡ ಸೇರಿಸಬಹುದಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180