ಗೂಗಲ್‌ ಪರಿಚಯಿಸುತ್ತಿದೆ ʻಗೂಗಲ್‌ ಸ್ಟ್ರೀಟ್‌ ವ್ಯೂʼ

  • ಗೂಗಲ್‌ ನಕ್ಷೆಯಲ್ಲಿ ನೀವು ರಸ್ತೆ ಇಕ್ಕೆಲಗಳನ್ನು ನೋಡಬಹುದು
  • ಸ್ಥಳೀಯ ಕಂಪನಿಗಳ ಪಾಲುದಾರಿಕೆಯಲ್ಲಿ ಸ್ಟ್ರೀಟ್ ವ್ಯೂ ಪರಿಚಯ

ಗೂಗಲ್‌ ನಕ್ಷೆಯಲ್ಲಿ ಎಷ್ಟೆಲ್ಲಾ ಅಪ್‌ಡೇಟ್‌ ಆಗಿದೆಯೆಂದರೆ, ನಮ್ಮೂರು, ನಮ್ಮ ಮನೆ ಎಲ್ಲವನ್ನು ಉಪಗ್ರಹ ಚಿತ್ರಣದ ಮೂಲಕ ವೀಕ್ಷಿಸಬಹುದು. ಪ್ರಸ್ತುತ ಗೂಗಲ್‌ ಇನ್ನಷ್ಟು ಸುಧಾರಣೆಯೊಂದಿಗೆ ಹೊಸ ವೈಶಿಷ್ಟ್ಯತೆಗಳನ್ನು ಬಳಕೆದಾರರ ಮುಂದಿಡಲು ಯೋಜಿಸಿದೆ. ಅಂದರೆ, ಬರೀ ಭೂಪ್ರದೇಶ ಮಾತ್ರವಲ್ಲದೆ ರಸ್ತೆಯ, ಇಕ್ಕೆಲಗಳು, ಜನರ ಓಡಾಟವನ್ನು ಗೂಗಲ್‌ ನಕ್ಷೆ ಮೂಲಕವೇ ಸ್ಪಷ್ಟವಾಗಿ ನೋಡುವಂತಹ ಹೊಸ ತಂತ್ರಜ್ಞಾನ ಭಾರತದಲ್ಲಿ ಪರಿಚಯಿಸಿದೆ.

ಅಂದರೆ ಭಾರತದ ನಗರ ಪ್ರದೇಶಗಳಲ್ಲಿ ನಾವಿರುವ ರಸ್ತೆಯನ್ನು ಕಣ್ಣಿಗೆ ಕಾಣುವಂತೆ ಚಿತ್ರಿಸುವ, 360 ಕೋನದಲ್ಲಿ ನಾವು ನಿಂತ ಪ್ರದೇಶದ ಸುತ್ತಲೂ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ನಮ್ಮ ಸುತ್ತಲಿನ ಪರಿಸರವನ್ನು ಫೋಟೊ ಮೂಲಕ ಸೆರೆಹಿಡಿಯುವ ಕ್ರಮಕ್ಕೆ ಪನೊರಮಾ ಎಂದು ಕರೆಯಲಾಗುತ್ತದೆ. ಗೂಗಲ್‌ ಭಾರತದ ಹತ್ತು ನಗರಗಳಲ್ಲಿ ಈ ಪನೊರಮಾ ವೈಶಿಷ್ಟ್ಯತೆಯನ್ನು ಆರಂಭಿಸುತ್ತಿದೆ. ಇಲ್ಲಿನ ಸ್ಥಳೀಯ ಕಂಪನಿಯಗಳಾದ ಟೆಕ್‌ ಮಹೀಂದ್ರಾ ಮತ್ತು ಮುಂಬೈ ಮೂಲದ ಜೆನೆಸಿಸ್‌ ಇಂಟರ್‌ನ್ಯಾಷನಲ್‌ ಪಾಲುದಾರಿಕೆಯೊಂದಿಗೆ ಈ ಯೋಜನೆ ಶುರುವಾಗಿದೆ.

ರಸ್ತೆ, ಪ್ರದೇಶಗಳ ಸಂಪೂರ್ಣ ಚಿತ್ರಣ ಸೆರೆಹಿಡಿದು ಗ್ರಾಹಕರಿಗೆ ಆ ಮಾಹಿತಿ ನೀಡಲು ದಶಕದ ಹಿಂದೆಯೇ ವಿರೋಧ ವ್ಯಕ್ತವಾಗಿತ್ತು. ಪ್ರಸ್ತುತ ಗೂಗಲ್‌ ಈ ಸೇವೆಯನ್ನು ನೀಡಲು ಮುಂದಾಗಿದೆ.

ಹೊಸ ರಾಷ್ಟ್ರೀಯ ಭೌಗೋಳಿಕ ನೀತಿ-2021 (National Geospatial Policy) ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಸ್ಥಳೀಯ ಕಂಪನಿಗಳು ರಸ್ತೆ, ಪ್ರದೇಶಗಳ ವೀಕ್ಷಣೆಯ ಹೊಸ ವೈಶಿಷ್ಟ್ಯ ಪರಿಚಯಿಸುವ ನಿಟ್ಟಿನಲ್ಲಿ ಪಾಲುದಾರರಾಗಲಿವೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ ಹತ್ತಿರ ಆದಂತೆಲ್ಲ ನೆತ್ತರ ಓಕುಳಿ ಹರಿಯುತ್ತಿದೆ! ನೆತ್ತರ ಮೇಲೆ ರಾಜಕೀಯ ಆಟ ವಿಜೃಂಭಿಸುತ್ತಿದೆ: ಎಚ್‌ಡಿಕೆ ವಿಷಾದ

ʻʻಯೋಜನೆ ʻಗಲ್ಲಿಫೈʼ ಆರಂಭದಲ್ಲಿ ಹತ್ತು ನಗರಗಳಲ್ಲಿ  ಜಾರಿಯಾಗಲಿದೆ. ವರ್ಷಾಂತ್ಯಕ್ಕೆ ಸುಮಾರು 50 ನಗರಗಳಲ್ಲಿ ಪರಿಚಯಿಸಲಾಗುವುದು. ಅಂದರೆ ಎರಡು ವರ್ಷಗಳಲ್ಲಿ ಸುಮಾರು 7 ಲಕ್ಷ ಕಿಮೀ ನಗರ ವ್ಯಾಪ್ತಿಯಲ್ಲಿ ಜನರ ಸಮೇತ ರಸ್ತೆಗಳನ್ನು ನೋಡುವಂತೆ ಮಾಡಲಾಗುವುದುʼʼ ಎಂದು ಗೂಗಲ್‌ ಮ್ಯಾಪ್‌ ಸಂಸ್ಥೆಯ ಮಿರಿಯಾಮ್‌ ಕಾರ್ಕಿಯಾ ಡೇನಿಯಲ್‌ ತಿಳಿಸಿದ್ದಾರೆ.

ಪ್ರಾಥಮಿಕವಾಗಿ ಸ್ಥಳೀಯ ಕಂಪನಿಗಳು ಎಲ್ಲ ದತ್ತಾಂಶಗಳನ್ನು ಸಂಗ್ರಹಿಸುವ ಅಗತ್ಯವಿದೆ. ಪ್ರಸ್ತುತ ಕಂಪನಿಗಳು ಮಾಹಿತಿ ಸಂಗ್ರಹಿಸುತ್ತಿವೆ. ಕ್ಯಾಮೆರಾ ಆಧರಿಸಿ ನಮ್ಮ ಅಗತ್ಯಕ್ಕೆ ತಕ್ಕಂತೆ ಸೆಟ್ಟಿಂಗ್ಸ್‌ ಮಾಡುವುದನ್ನು ಪಾಲುದಾರರು ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

ಗೂಗಲ್‌ ನಕ್ಷೆ ಬಳಸಲು ವೇಗದ ಮಿತಿ ಡೇಟಾವನ್ನು ಬೆಂಗಳೂರು ಮತ್ತು ಚಂಡೀಗಢದಲ್ಲಿ ಬಳಸಲು ಅನುಕೂಲವಾಗುವಂತೆ ಬಿಡುಗಡೆ ಮಾಡುವುದಾಗಿ ಗೂಗಲ್ ಘೋಷಿಸಿದೆ. ಇದರೊಂದಿಗೆ ಒಂಬತ್ತು ನಗರಗಳಲ್ಲಿ ರಸ್ತೆ ದಟ್ಟಣೆಯ ಬಗ್ಗೆಯೂ ಮ್ಯಾಪ್‌ನಲ್ಲಿ ಮಾಹಿತಿ ದೊರೆಯಲಿದೆ.

ಗೂಗಲ್ ಈ ಬಗೆಯ ಪಾಲುದಾರಿಕೆ ಮಾದರಿಯನ್ನು ಪ್ರಪಂಚದ ಇತರ ಭಾಗಗಳಲ್ಲು ಪರಿಚಯಿಸಲು ಯೋಜಿಸುತ್ತಿದೆ. ರಸ್ತೆ, ಪ್ರದೇಶಗಳ ವೀಕ್ಷಣೆಯು ಗೂಗಲ್‌ ನಕ್ಷೆಯ ಕಾರ್ಯವೈಖರಿ ಸುಧಾರಿಸಲು ಸಹಾಯ ಮಾಡುತ್ತದೆ. ಉಪಗ್ರಹ ಚಿತ್ರಣದಲ್ಲಿ ಇದು ಅಸ್ಪಷ್ಟವಾಗಿ ಗೋಚರಿಸುತ್ತಿದ್ದು, ಈ ಹೊಸ ಯೋಜನೆಯು ಇನ್ನಷ್ಟು ಸ್ಪಷ್ಟವಾಗಿ ಚಿತ್ರಗಳು ಕಾಣುವಂತೆ ಮಾಡಲಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್