ಆಂಧ್ರಪ್ರದೇಶ | ಸಮಸ್ಯೆಗೆ ಸ್ಪಂದಿಸದ ಸರ್ಕಾರ: ತಾವೇ ಸೇತುವೆ ನಿರ್ಮಿಸಿಕೊಂಡ ಆದಿವಾಸಿಗಳು

tribal build a bridge
  • ಒಂದು ವಾರದಲ್ಲಿ 50 ಮೀಟರ್ ಉದ್ದದ ಬಿದಿರಿನ ತಾತ್ಕಾಲಿಕ ಸೇತುವೆ ನಿರ್ಮಾಣ
  • ವೈದ್ಯಕೀಯ ಮತ್ತು ಶೈಕ್ಷಣಿಕ ಕಾರಣಕ್ಕೆ ಪಟ್ಟಣ ತಲುಪಲು 150 ಕುಟುಂಬಗಳಿಗೆ ಅನುಕೂಲ

ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದಿದ್ದರಿಂದ ಬೇಸತ್ತ ಆದಿವಾಸಿಗಳು ಹೊಳೆ ದಾಟಲು ಸೇತುವೆ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡಿದ್ದಾರೆ. ಪಟ್ಟಣ ಸಂಪರ್ಕಿಸುವ ಮಾರ್ಗದಲ್ಲಿ ಅಡ್ಡಲಾಗಿ ಹರಿಯುವ ಹೊಳೆಗೆ ತಾತ್ಕಾಲಿಕ ಬಿದಿರಿನ ಸೇತುವೆ ನಿರ್ಮಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಪರವತಿಪುರಂ ಮಾನ್ಯಂ ಜಿಲ್ಲೆಯ ಕುರುಪಾಂ ಮಂಡಲದ ಬಂಡಿಗುಡಾ ಮತ್ತು ಬೋರಿ ಗ್ರಾಮಗಳ ಆದಿವಾಸಿಗಳು ವೋಟಿ ಗೆದ್ದ ಹೊಳೆಗೆ ಬಿದಿರಿನ ಸೇತುವೆ ಕಟ್ಟಿದ್ದಾರೆ.

Eedina App

ಕಳೆದ ಎರಡು ತಿಂಗಳಿನಿಂದ ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಂಡಿಗುಡಾ ಮತ್ತು ಬೋರಿ ಗ್ರಾಮಗಳ ಆದಿವಾಸಿಗಳು ಪಟ್ಟಣಕ್ಕೆ ಹೋಗಲು ದಾರಿಯಿಲ್ಲದ ಪರಿಸ್ಥಿತಿ ಇತ್ತು. ಮಕ್ಕಳು ಶಾಲೆಗೆ ಹೋಗಲು ಸಹ ಬೇರೆ ದಾರಿ ಇರಲಿಲ್ಲ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಹೊಳೆಯನ್ನು ದಾಟಬೇಕಿತ್ತು. ಗ್ರಾಮಸ್ಥರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾರೂ ನೆರವಿಗೆ ಬಂದಿರಲಿಲ್ಲ.

ಹೊಳೆದಾಟುವ ಅನಿವಾರ್ಯ ಪರಿಸ್ಥಿತಿ ಇದ್ದಿದ್ದರಿಂದ ಆದಿವಾಸಿಗಳೆ ಬಿದಿರಿನ ಸೇತುವೆ ನಿರ್ಮಿಸಿಕೊಳ್ಳಲು ಮುಂದಾದರು. ಬಿದಿರು, ಮರದಿಂದ ಒಂದು ವಾರದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಸೇತುವೆ ನಿರ್ಮಾಣದಿಂದ 150 ಕುಟುಂಬಗಳಿಗೆ ಪರಿಹಾರ ಸಿಕ್ಕಿದೆ.

AV Eye Hospital ad

ಗ್ರಾಮಸ್ಥರು ಶ್ರಮದಾನದಿಂದ ನಿರ್ಮಿಸಿರುವ 50 ಮೀಟರ್ ಉದ್ದದ ಸೇತುವೆ ಇತ್ತೀಚೆಗೆ ಉದ್ಘಾಟನೆ ಆಯಿತು. ಮೊದಲು ದಿನವೇ ಮಕ್ಕಳು ಸೇತುವೆ ದಾಟಿ ಶಾಲೆಗೆ ಹೋದರು. ಈ ತಾತ್ಕಾಲಿಕ ಸೇತುವೆ ಬಂಡಿಗುಡಾ, ಬೋರಿ, ಬಳ್ಳೇರು, ಬಳ್ಳೇರುಗುಡಾ ಮತ್ತು ಕಿಡಿಕೇಸು ಗ್ರಾಮಗಳ 150 ಕುಟುಂಬಗಳಿಗೆ ವೈದ್ಯಕೀಯ ತುರ್ತು ಸಂದರ್ಭ ಮತ್ತು ಶಾಲೆಗಳಿಗೆ ಗೋಟಿವಾಡದ ಪಟ್ಟಣ ತಲುಪಲು ಸಹಾಕಾರಿಯಾಗಿದೆ.

ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಮೊಬೈಲ್ ಕಳ್ಳತನ ಶಂಕೆ: ಬಾವಿಗೆ ನೇತುಬಿಟ್ಟು ದಲಿತ ಬಾಲಕನಿಗೆ ಕಿರುಕುಳ

ಬಿದಿರಿನ ಸೇತುವೆಯು ಕೆಳಗಿನಿಂದ ಯಾವುದೇ ಬಲವಾದ ಆಧಾರ ಇಲ್ಲ. ಹಾಗಾಗಿ ಇದು ತಾತ್ಕಾಲಿಕ ಪರಿಹಾರವಾಗಿದ್ದು, ಸರ್ಕಾರ ಪಕ್ಕಾ ಸೇತುವೆ ನಿರ್ಮಿಸುವವರೆಗೆ ಈ ತಾತ್ಕಾಲಿಕ ಸೇತುವೆಯಿಂದ ಕನಿಷ್ಠ ಮಕ್ಕಳು, ರೋಗಿಗಳಿಗೆ ನದಿ ದಾಟಲು ಅನುಕೂಲವಾಗಲಿ ಎಂಬುದು ಗ್ರಾಮಸ್ಥರ ಆಶಯ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app