
- ಕಛ್ ಬಳಿಯ ಮುಂದ್ರಾದ ಗುಂಡಾಲ ಗ್ರಾಮದ ನರ್ಮದಾ ಕಾಲುವೆ
- ಮಹಿಳೆಯನ್ನು ರಕ್ಷಿಸಲು ಧುಮುಕಿದ ಒಂದೇ ಕುಟುಂಬದವರ ಸಾವು
ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯೊಬ್ಬರ ರಕ್ಷಣೆಗೆ ಮುಂದಾಗಿ ಗುಜರಾತ್ನ ಕಛ್ನಲ್ಲಿರುವ ನರ್ಮದಾ ಕಾಲುವೆಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ನೀರು ತರುವ ವೇಳೆ ಮಹಿಳೆ ಕಾಲುವೆಗೆ ಜಾರಿದ್ದರು. ರಕ್ಷಣೆಗೆ ಮುಂದಾದ ಒಂದೇ ಕುಟುಂಬದ ಸದಸ್ಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಎಲ್ಲ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಕಛ್ ಪಶ್ಚಿಮ ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ಸಿಂಗ್ ತಿಳಿಸಿದ್ದಾರೆ.
“ಕಛ್ ಬಳಿಯ ಮುಂದ್ರಾದ ಗುಂಡಾಲ ಗ್ರಾಮದ ನರ್ಮದಾ ಕಾಲುವೆಯಲ್ಲಿ ಐವರು ಕುಟುಂಬ ಸದಸ್ಯರು ಮುಳುಗಿ ಸಾವನ್ನಪ್ಪಿದ್ದಾರೆ. ಎಲ್ಲ ಮೃತದೇಹಗಳನ್ನು ಹೊರತರಲಾಗಿದೆ. ನೀರು ತರಲು ಕಾಲುವೆಗೆ ಜಾರಿದ ಮಹಿಳೆಯನ್ನು ರಕ್ಷಿಸಲು ಕುಟುಂಬ ಸದಸ್ಯರು ಕಾಲುವೆಗೆ ಹಾರಿದ ನಂತರ ಘಟನೆ ಸಂಭವಿಸಿದೆ” ಎಂದು ಸೌರಭ್ ಸಿಂಗ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ನರ್ಮದಾ ಕಾಲುವೆಯು ಸರ್ದಾರ್ ಸರೋವರ್ ಅಣೆಕಟ್ಟಿನಿಂದ ಗುಜರಾತ್ಗೆ ಮತ್ತು ರಾಜಸ್ಥಾನಕ್ಕೆ ನೀರನ್ನು ಹರಿಸುತ್ತದೆ. ಮುಖ್ಯ ಕಾಲುವೆಯು 532 ಕಿಲೋಮೀಟರ್ ಉದ್ದವಿದೆ. 458 ಕಿಮೀ ಗುಜರಾತ್ನಲ್ಲಿ ಮತ್ತು 74 ಕಿಮೀ ರಾಜಸ್ಥಾನದಲ್ಲಿ ವ್ಯಾಪಿಸಿದೆ.
ನರ್ಮದಾ ಕಾಲುವೆಯಲ್ಲಿ ಬೆಳೆದಿರುವ ಪಾಚಿಗಳು ಈಜುವವರಿಗೆ ಅಪಾಯಕಾರಿ ಎಂದು ಅನೇಕ ವರದಿಗಳು ಹೇಳಿವೆ.