ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಅಧಿಕಾರ ಸದನ ಸಮಿತಿಗೆ ಇದೆ: ಹೈಕೋರ್ಟ್‌

High Court
  • ನರ್ಸಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸುವ ಅಧಿಕಾರವಿದೆ
  • ಪರಿಶೀಲನೆ ಹೆಸರಿನಲ್ಲಿ ಕಿರುಕುಳ ನೀಡುವಂತಿಲ್ಲ: ಹೈಕೋರ್ಟ್‌

ಆರೋಗ್ಯ ಸಂಬಂಧಿತ ಸಂಸ್ಥೆಗಳಿಗೆ ಭೇಟಿ ನೀಡಿ, ಪರಿಶೀಲಿಸುವ ಅಧಿಕಾರ ವಿಶೇಷ ಸದನ ಸಮಿತಿಗೆ ಇದೆ ಎಂದು ಹೈಕೋರ್ಟ್‌ ಹೇಳಿದೆ. ಈ ಮೂಲಕ ಕರ್ನಾಟಕ ವಿಧಾನ ಪರಿಷತ್ ಕಲಾಪ ಮತ್ತು ನಡಾವಳಿ ನಿಯಮ 242(ಎ) ಉಪ ನಿಯಮ 1ರಡಿ ಸದನ ಸಮಿತಿ ರಚನೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಹೈದರಾಬಾದ್ ಕರ್ನಾಟಕ ನರ್ಸಿಂಗ್ ಮ್ಯಾನೇಜ್‌ಮೆಂಟ್ ಸಂಸ್ಥೆ, ಕರ್ನಾಟಕ ನರ್ಸಿಂಗ್ ಸಂಸ್ಥೆಗಳ ಒಕ್ಕೂಟ ಹಾಗೂ ಮತ್ತಿತರರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಭಾರತೀಯ ನರ್ಸಿಂಗ್‌ ಮಂಡಳಿಯ ನಿರ್ದೇಶನಗಳಿಗೆ ಅನುಗುಣವಾಗಿ ನರ್ಸಿಂಗ್ ಕಾಲೇಜುಗಳು ನಡೆಯುತ್ತಿವೆಯೇ? ಮೂಲ ಸೌಕರ್ಯಗಳು ಇವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಸದನ ಸಮಿತಿಗೆ ಅಧಿಕಾರವಿದೆ ಎಂದು ಪೀಠ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | 83ರ ವೃದ್ಧೆ ಜಯಶ್ರೀ ಹತ್ಯೆ ಪ್ರಕರಣ ಸಂಬಂಧ ಆರು ಮಂದಿ ಬಂಧನ

ಭಾರತೀಯ ಸಂವಿಧಾನದ ಕಲಂ 194(3)ರಲ್ಲಿ ರಾಜ್ಯ ಶಾಸಕಾಂಗಕ್ಕೆ ಇರುವ ಅಧಿಕಾರವನ್ನು ಉಲ್ಲೇಖಿಸಲಾಗಿದೆ. ಅದರಂತೆ ಸದನ ಸಮಿತಿ ರಚನೆ, ಅಧಿಕಾರ ಹಾಗೂ ಆ ಸಮಿತಿ ನರ್ಸಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ಮೂಲಸೌಕರ್ಯದ ಬಗ್ಗೆ ಪರಿಶೀಲನೆ ನಡೆಸುವ, ದಾಖಲೆಗಳನ್ನು ಕೇಳುವ ಅಧಿಕಾರ ಹೊಂದಿದೆ. ಆದರೆ, ಪರಿಶೀಲನೆ ಹೆಸರಿನಲ್ಲಿ ಕಿರುಕುಳ ನೀಡುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180